ಬೆಂಗಳೂರು:ಬಿಗ್‌ ಬಾಸ್ ರಿಯಾಲಿಟಿ ಶೋ ಫೈನಲ್ ಕಂಟೆಸ್ಟೆಂಟ್ ಆಗಿದ್ದ ವರ್ತೂರ್​ ಸಂತೋಷ್​ ಅವರನ್ನು ಪೊಲೀಸ್‌ ಸಮವಸ್ತ್ರದಲ್ಲಿ ಸನ್ಮಾನಿಸಿದ್ದಕ್ಕೆ ಸಬ್‌ ಇನ್ಸ್‌ಪೆಕ್ಟರ್ ಅನ್ನು ವರ್ಗಾವಣೆ ಮಾಡಲಾಗಿದೆ.
ಬಿಗ್‌ಬಾಸ್‌ ಫೈನಲಿಸ್ಟ್ ವರ್ತೂರು ಸಂತೋಷ್ ಅವರಿಗೆ ಸಮವಸ್ತ್ರದಲ್ಲಿ ಪಿಎಸ್‌ಐ ತಿಮ್ಮರಾಯಪ್ಪ ಸನ್ಮಾನ‌ ಮಾಡಿದ್ದರು. ಆದ್ದರಿಂದ ಬೆಂಗಳೂರು ನಗರ ಪೊಲೀಸ್ ಕಮೀಷನರ್ ದಯಾನಂದ್ ಅವರು ಸಬ್ ಇನ್ಸಪೇಕ್ಟರ್ ಪಿ.ಎಸ್.ಐ ತಿಮ್ಮರಾಯಪ್ಪನನ್ನು ರಾತ್ರೋ ರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಬಿಗ್ ಬಾಸ್ ಸ್ಪರ್ಧೆಯಲ್ಲಿ ಉತ್ತಮ ಆಟವಾಡಿದ್ದ ವರ್ತೂರು ಸಂತೋಷ್ ಅವರು ಕೋಟ್ಯಂತರ ಅಭಿಮಾನಿಗಳನ್ನು ಘಲಿಸಿದ್ದರು. ಆದರೆ,. ವರ್ತೂರು ಸಂತೋಷ್‌ ಅವರು ಬಿಗ್‌ಬಾಸ್‌ ಮನೆಯಿಂದ ಹೊರಗೆ ಬಂದಾಗ ಅವರಿಗೆ ಸನ್ಮಾನಿಸಿದ್ದ ಪಿಎಸ್‌ಐ ಪೊಲೀಸ್ ಇಲಾಖೆ ಕೆಂಗಣ್ಣಿಗೆ ಗುರಿಯಾಗಿದ್ದರು.
ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಪ್ರಕರಣದ ಆರೋಪಿಯೂ ಆಗಿರುವ ವರ್ತೂರು ಸಂತೋಷ್‌ಗೆ ಪೊಲೀಸ್ ಸಮವಸ್ತ್ರದಲ್ಲಿ ಸನ್ಮಾನಿಸಿದ್ದಕ್ಕೆ ಪಿಎಸ್‌ಐ ತಿಮ್ಮರಾಯಪ್ಪ ಅವರನ್ನು ವರ್ತೂರು ಪೊಲೀಸ್‌ ಠಾಣೆಯಿಂದ ಆಡುಗೋಡಿ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಮನರಂಜನೆಗೆ ಎಲ್ಲರೂ ದಾಸರೇ ಆಗಿದ್ದಾರೆ. ಯಾವುದೇ ವೃತ್ತಿ, ಉದ್ಯೋಗವಿದ್ದರೂ ಸಿನಿಮಾ, ಹಾಡು, ಧಾರಾವಾಹಿ ಹಾಗೂ ಟಿವಿಯಲ್ಲಿ ಪ್ರಸಾರವಾಗುವ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುವುದಕ್ಕೆ ಮಾತ್ರ ಯಾವುದೇ ನಿರ್ಬಂಧವಿಲ್ಲ. ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಪ್ರಕರಣದ ಆರೋಪಿಯೂ ಆಗಿರುವ ವರ್ತೂರು ಸಂತೋಷ್‌ಗೆ ಪೊಲೀಸ್ ಸಮವಸ್ತ್ರದಲ್ಲಿ ಸನ್ಮಾನಿಸಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಗುರುಕಿರಣ್ ಪತ್ನಿ ಪಲ್ಲವಿ ಶೆಟ್ಟಿಗೂ ನಟ ಸುನೀಲ್​ಗೂ ಇದೆ ಈ ಒಂದು ಸಂಬಂಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − seven =
Remember me
