ಬೆಂಗಳೂರು :ಜಾಗತಿಕ ಪಿಡುಗಾದ ಸೈಬರ್​ ಅಪರಾಧದ ತಡೆಗೆ ಬೆಂಗಳೂರು ನಗರ ಪೊಲೀಸರು “ಗೋಲ್ಡನ್​ ಅವರ್​’ ಬಳಸಿಕೊಂಡು ಗ್ರಾಹಕರ ಹಣ ಕಳ್ಳರ ಕೈ ಸೇರದಂತೆ ಹೊಸ ಪ್ಲಾನ್​ ಮಾಡಿದ್ದಾರೆ. ಅದುವೇ “ಬ್ಯಾಂಕ್​ ಅಕೌಂಟ್​ ಬ್ಲಾಕಿಂಗ್​ ಸಿಸ್ಟಂ’ ! ಸೈಬರ್​ ಕಳ್ಳರ ಮಾಯಾಜಾಲಕ್ಕೆ ಒಳಗಾಗಿ ಹಣ ಕಳೆದುಕೊಂಡವರು ತಕ್ಷಣ ಪೊಲೀಸ್​ ಕಂಟ್ರೋಲ್​ ರೂಮ್​ 112 ಆಥವಾ ನಮ್ಮ 100ಗೆ ಕರೆ ಮಾಡಿದರೆ ಗ್ರಾಹಕರ ಬ್ಯಾಂಕ್​ ಖಾತೆಯಿಂದ ವರ್ಗಾವಣೆ ಆಗಿರುವ ಖಾತೆಯನ್ನು ಬ್ಲಾಕ್​ ಮಾಡಿಸಿ, ಹಣವನ್ನು ಹಿಂಪಡೆಯಲಾಗುತ್ತಿದೆ. ಇದೇ ರೀತಿ 48 ಕೋಟಿ ರೂ.ಗಳನ್ನು ಸೈಬರ್​ ಕಳ್ಳರಿಂದ ವಾಪಸ್​ ಪಡೆಯುವಲ್ಲಿ ಬೆಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ವಿಜಯವಾಣಿ ಜೊತೆ ಮಾತನಾಡಿದ ನಗರ ಪೊಲೀಸ್​ ಆಯುಕ್ತರಾದ ಕಮಲ್​ ಪಂತ್​, ಸೈಬರ್​ ಕಳ್ಳರು ಅಮಾಯಕರಿಗೆ ಬ್ಯಾಂಕ್​ ಅಧಿಕಾರಿಗಳು, ಮೊಬೈಲ್​ ಸಿಮ್​ ಕಂಪನಿ, ಲಕ್ಕಿ ಡ್ರಾ ಹೆಸರಿನಲ್ಲಿ ಕರೆ ಮಾಡಿ ಬ್ಯಾಂಕ್​ ಖಾತೆ ವಿವರ, ಕ್ರೆಡಿಟ್​, ಡೆಬಿಟ್​ ಕಾರ್ಡ್​ ವಿವರ ಅಥವಾ ವ್ಯಾಲೆಟ್​ ಮಾಹಿತಿ ಪಡೆದು ಕ್ಷಣಾರ್ಧದಲ್ಲಿ ಬ್ಯಾಂಕ್​ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಇದು ದೊಡ್ಡ ಸವಾಲಾಗಿದೆ. ಇದನ್ನು ತಪ್ಪಿಸಲು ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಮತ್ತು ರಾಜ್ಯ ಪೊಲೀಸ್​ ಮಹಾನಿರ್ದೇಶಕ ಪ್ರವಿಣ್​ ಸೂದ್​ ಸೂಚಿಸಿದರು. ಈ ನಿಟ್ಟಿನಲ್ಲಿ ಕಮಾಂಡ್​ ಸೆಂಟರ್​ನಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಟ್ರ್ಯಾಕ್ಟರ್ ಖರೀದಿಸಿದ ಎಚ್​ಡಿಕೆ; ತಾವೇ ಚಲಾಯಿಸಿ ಖುಷಿ ಪಟ್ಟ ಮಾಜಿ ಸಿಎಂ
ಸಾರ್ವಜನಿಕರು ಯಾಮಾರಿ ಸೈಬರ್​ ಕಳ್ಳರಿಂದ ವಂಚನೆಗೆ ಒಳಗಾದ ಕೂಡಲೇ ಪೊಲೀಸ್​ ಕಂಟ್ರೋಲ್​ ರೂಮ್​ 112 ಅಥವಾ ನಮ್ಮ 100ಗೆ ಕರೆ ಮಾಡಬೇಕು. ಕೃತ್ಯ ನಡೆದ ಕೆಲವೇ ಸಮಯ ಅಂದರೆ ಗೋಲ್ಡನ್​ ಅವರ್​​ಅನ್ನು ಬಳಸಿಕೊಂಡು ಕಮಾಂಡ್​ ಸೆಂಟರ್​ ಸಿಬ್ಬಂದಿ ಕಳ್ಳರ ಬ್ಯಾಂಕ್​ ಖಾತೆಯನ್ನು ಬ್ಲಾಕ್​ ಮಾಡಿಸುತ್ತಾರೆ. ಆನಂತರ ಸೂಕ್ತ ದಾಖಲೆ ಒದಗಿಸಿ ಬ್ಯಾಂಕ್​ನಿಂದ ಹಣವನ್ನು ವಾಪಸ್​ ಪಡೆದು ಸಂಬಂಧಪಟ್ಟವರಿಗೆ ಹಿಂತಿರುಗಿಸಲಾಗುತ್ತದೆ. ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದು, ಪರಿಣಾಮಕಾರಿ ಕೆಲಸವಾಗುತ್ತಿದೆ. ಇದರ ಸಾಧಕಬಾಧಕಗಳ ಚರ್ಚೆ ನಡೆಸಿ ದೊಡ್ಡ ಮಟ್ಟದಲ್ಲಿ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಕಮಲ್​ ಪಂತ್​ ತಿಳಿಸಿದ್ದಾರೆ.
48.24 ಕೋಟಿ ರೂ. ಸೇಫ್ :2020ರ ಡಿಸೆಂಬರ್​ 22 ರಿಂದ 2021 ರ ಮೇವರೆಗೆ 3,175 ಹಣಕಾಸು ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 1,312 ಬ್ಯಾಂಕ್​ ಖಾತೆಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿ ವಂಚಕರ ಕೈಸೇರುತ್ತಿದ್ದ 48.24 ಕೋಟಿ ರೂ.ಗಳನ್ನು ವಾಪಸ್​ ಪಡೆಯಲಾಗಿದೆ. ಈ ಮೂಲಕ ಹಣಕಾಸು ವಂಚನೆ ಜಾಲಕ್ಕೆ ಒಂದಿಷ್ಟು ಬ್ರೇಕ್​ ಹಾಕಲಾಗಿದೆ. ಕಳೆದ 6 ತಿಂಗಳಲ್ಲಿ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಅತಿ ಹೆಚ್ಚು ಹಣಕಾಸು ವಂಚನೆ ಪ್ರಕರಣ ದಾಖಲಾಗಿದ್ದು, 615 ಬ್ಯಾಂಕ್​ ಖಾತೆ ಬ್ಲಾಕ್​ ಮಾಡಲಾಗಿದೆ. ಕೇಂದ್ರ ವಿಭಾಗದದಲ್ಲಿ 79 ಖಾತೆ ಮಾತ್ರ ಜಪ್ತಿ ಮಾಡಲಾಗಿದೆ ಎಂದು ಪಂತ್​ ತಿಳಿಸಿದ್ದಾರೆ.
ಇದನ್ನೂ ಓದಿ:VIDEO | ಕರೊನಾ ರೋಗಿ ಸತ್ತಿದ್ದಕ್ಕೆ ವೈದ್ಯನನ್ನು ಹಿಗ್ಗಾಮುಗ್ಗಾ ಥಳಿಸಿದರು! ಹಲ್ಲೆ ಮಾಡಿದ 24 ಜನರು ಜೈಲಿಗೆ
ಏನಿದು ಬ್ಯಾಂಕ್​ ಅಕೌಂಟ್​ ಬ್ಲಾಕ್​ ಸಿಸ್ಟಂ ? :ಸೈಬರ್​ ಕ್ರೈಂ ತಡೆಗಟ್ಟುವ ನಿಟ್ಟಿನಲ್ಲಿ ಆರ್​ಬಿಐ, ಎಲ್ಲ ಬ್ಯಾಂಕ್​ ಅಧಿಕಾರಿಗಳ ಜೊತೆ ಸಭೆ ನಡೆಸಿದೆ. ಎಲ್ಲ ಬ್ಯಾಂಕ್​ಗಳಲ್ಲಿ ನೋಡಲ್​ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ನಗರ ಪೊಲೀಸ್​ ವಿಭಾಗದ ಕಮಾಂಡ್​ ಸೆಂಟರ್​ನಲ್ಲಿ ವಿಶೇಷ ತಂಡ ರಚನೆ ಮಾಡಿದ್ದು, ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಾರೆ. ಸೈಬರ್​ ಕಳ್ಳರಿಂದ ವಂಚನೆಗೆ ಒಳಗಾದವರು ಕೂಡಲೇ ಪೊಲೀಸ್​ ಕಂಟ್ರೋಲ್​ ರೂಮ್​ 112 ಅಥವಾ ನಮ್ಮ 100ಗೆ ಕರೆ ಮಾಡಿದರೆ ಪ್ರಾಥಮಿಕ ಮಾಹಿತಿ ಪಡೆದು ಪೊಲೀಸರು, ಸಂಬಂಧಪಟ್ಟ ಬ್ಯಾಂಕ್​ಗೆ ಇಮೇಲ್​ನಲ್ಲಿ ವಿವರ ಕಳುಹಿಸುತ್ತಾರೆ. ಸೈಬರ್​ ಕಳ್ಳರು ಹಣ ಡ್ರಾ ಮಾಡುವ ಮೊದಲು ಖಾತೆಯನ್ನು ಬ್ಯಾಂಕ್​ ಅಧಿಕಾರಿಗಳು ಬ್ಲಾಕ್​ ಮಾಡುತ್ತಾರೆ. ಆನಂತರ ದೂರು, ಸೂಕ್ತ ದಾಖಲೆ ಪಡೆದು ಎಫ್​ಐಆರ್​ ಮಾಡಿ ಕಾನೂನು ಪ್ರಕಾರ ಬ್ಯಾಂಕಿಗೆ ಮಾಹಿತಿ ರವಾನಿಸಿ ಹಣ ವಾಪಸ್​ ಪಡೆದು, ಕೋರ್ಟ್​ ಮೂಲಕ ಗ್ರಾಹಕರಿಗೆ ನೀಡಲಾಗುತ್ತದೆ.
ಪೊಲೀಸರು ಈ ವ್ಯವಸ್ಥೆಯ ಅಡಿಯಲ್ಲಿ ಬೆಂಗಳೂರಿನಲ್ಲಿ ವಿಭಾಗಶಃ ಸೈಬರ್ ಕಳ್ಳರ ಬ್ಯಾಂಕ್​ ಖಾತೆಗಳನ್ನು ಜಪ್ತಿ ಮಾಡಿರುವ ಅಂಕಿಅಂಶಗಳು ಹೀಗಿವೆ – ಕೇಂದ್ರ ವಿಭಾಗ – 79, ಉತ್ತರ ವಿಭಾಗ – 521, ಆಗ್ನೇಯ ವಿಭಾಗ – 595, ದಕ್ಷಿಣ ವಿಭಾಗ – 615, ವೈಟ್​ಫೀಲ್ಡ್​ ವಿಭಾಗ – 439, ಪೂರ್ವ ವಿಭಾಗ – 439, ಪಶ್ಚಿಮ ವಿಭಾಗ – 351, ಈಶಾನ್ಯ ವಿಭಾಗ – 106.
ಕರೊನಾ ಲಸಿಕಾ ನೀತಿ, ಖರೀದಿ ಬಗ್ಗೆ ಎಲ್ಲಾ ವಿವರ ಕೊಡಿ : ಸುಪ್ರೀಂ

ಐ ಡ್ರಾಪ್ಸ್​ನಿಂದ ಕರೊನಾದಿಂದ ಗುಣಮುಖನಾದೆ ಎಂದು ವಿಡಿಯೋ ಮಾಡಿದ್ದ ವ್ಯಕ್ತಿ… ಆಸ್ಪತ್ರೆಯಲ್ಲಿ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
