ಬೆಂಗಳೂರು:ಸಾಫ್ಟ್​ವೇರ್ ಇಂಜಿನಿಯರೊಬ್ಬರು ತಮಿಳುನಾಡಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ನಾಪತ್ತೆಯಾಗಿದ್ದ ಆಭರಣವಿದ್ದ ಟ್ರಾಲಿ ಬ್ಯಾಗನ್ನು ಬೆಂಗಳೂರು ರೈಲ್ವೇ ಪೊಲೀಸರು ತಾಂತ್ರಿಕತೆಯ ಸಹಾಯದಿಂದ ಪತ್ತೆ ಮಾಡಿದ್ದಾರೆ.
ರಾಜಾಜಿನಗರ ವೆಸ್ಟ್ ಆಫ್​ ಕಾರ್ಡ್ ರಸ್ತೆ ನಿವಾಸಿ ಮಂಜುನಾಥ್ ಟ್ರಾಲಿ ಬ್ಯಾಗ್ ಕಳೆದುಕೊಂಡವರು. ಹುಟ್ಟೂರಿಗೆ ಹೋಗಿದ್ದ ಮಂಜುನಾಥ್, ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಜೂನ್ 13ರಂದು ತಮಿಳುನಾಡಿನ ಕಾಟ್‌ಪಾಡಿ ರೈಲ್ವೇ ನಿಲ್ದಾಣದಿಂದ ಬೆಂಗಳೂರು ನಗರ ರೈಲು ನಿಲ್ದಾಣಕ್ಕೆ ಶತಾಬ್ಧಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣ ಬೆಳೆಸಿದ್ದರು. ನಿಲ್ದಾಣದಲ್ಲಿ ಇಳಿಯುವಾಗ 137 ಗ್ರಾಂ ಚಿನ್ನಾಭರಣವಿದ್ದ ಟ್ರಾಲಿ ಬ್ಯಾಗ್ ನಾಪತ್ತೆಯಾಗಿತ್ತು. ಈ ಬಗ್ಗೆ ಬೆಂಗಳೂರು ನಗರ ರೈಲ್ವೇ ಠಾಣೆಗೆ ಮಂಜುನಾಥ್ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಡಿವೈಎಸ್‌ಪಿ ಗೀತಾ ನೇತೃತ್ವದಲ್ಲಿ ಎಸ್‌ಐ ಪುರುಷೋತ್ತಮ್ ಅವರ ತಂಡ, ರೈಲು ನಿಲ್ದಾಣದ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದಾಗ ಆ ಟ್ರಾಲಿ ಬ್ಯಾಗನ್ನು ಬೇರೊಂದು ಕುಟುಂಬ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ಇದಾದ ಮೇಲೆ ಶತಾಬ್ಧಿ ಎಕ್ಸ್​ಪ್ರೆಸ್​​ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಿ ಪ್ರಯಾಣಿಸಿದ್ದ ಎಲ್ಲ ವಿಳಾಸ ಮತ್ತು ಮೊಬೈಲ್ ಫೋನ್​ ನಂಬರ್ ಪಡೆದು ಮೊಬೈಲ್ ಸಿಗ್ನಲ್ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ ಆ ಕುಟುಂಬದ ಸುಳಿವು ಲಭ್ಯವಾಗಿದೆ. ಸಿಸಿ ಕ್ಯಾಮರಾ, ಮೊಬೈಲ್ ಸಿಗ್ನಲ್ ಮತ್ತು ತಾಂತ್ರಿಕ ಮಾಹಿತಿ ಆಧರಿಸಿ ನಾಪತ್ತೆಯಾಗಿದ್ದ ಟ್ರಾಲಿ ಬ್ಯಾಗ್‌ ಪತ್ತೆ ಹಚ್ಚಲಾಗಿದೆ ಎಂದು ರೈಲ್ವೇ ಎಸ್‌ಪಿ ಸಿರಿ ಗೌರಿ ತಿಳಿಸಿದ್ದಾರೆ.
ಇದನ್ನೂ ಓದಿ:ಆಸ್ಪತ್ರೆಗೆ ಹೊಕ್ಕು 2 ದಿನದ ಹಸುಳೆಯನ್ನು ಕಚ್ಚಿಕೊಂಡು ಹೋದ ಬೀದಿನಾಯಿ, ಮಗು ಸಾವು..
ಪೊಲೀಸರು ವಿಳಾಸಕ್ಕೆ ಹೋಗಿ ಪ್ರಶ್ನಿಸಿದಾಗ ತಿರುಪತಿಯಿಂದ ಶತಾಬ್ಧಿ ಎಕ್ಸ್‌ಪ್ರೆಸ್‌ನಲ್ಲಿ ವಾಪಸ್ ಬರುವಾಗ ನಮ್ಮದೆಂದು ಟ್ರಾಲಿ ಬ್ಯಾಗ್ ತೆಗೆದುಕೊಂಡು ಬಂದಿದ್ದೆವೆ. ಒಳಗಿರುವ ಚಿನ್ನಾಭರಣವನ್ನು ತೆಗೆದುನೋಡಿಲ್ಲ. ಇದೇ ಮಾದರಿಯಲ್ಲಿ ನಮ್ಮ ಟ್ರಾಲಿ ಬ್ಯಾಗ್ ಇದ್ದಿದ್ದರಿಂದ ಗೊತ್ತಾಗದೆ ತೆಗೆದುಕೊಂಡು ಬಂದಿರುವುದಾಗಿ ಹೇಳಿಕೆ ನೀಡಿ ಚಿನ್ನದ ಸಮೇತ ಬ್ಯಾಗ್ ಒಪ್ಪಿಸಿದ್ದಾರೆ. ಆದರೆ, ಇವರ ಬ್ಯಾಗ್‌ನ್ನು ಟೆಕ್ಕಿ ಮಂಜುನಾಥ್ ತೆಗೆದುಕೊಂಡು ಹೋಗಿರಲಿಲ್ಲ. ಇದು ನಮ್ಮದಲ್ಲ ಎಂದು ರೈಲಿನಲ್ಲಿಯೇ ಬಿಟ್ಟು ಹೋಗಿದ್ದರು.
ಮಕ್ಕಳಿಬ್ಬರ ಕತ್ತು ಹಿಸುಕಿ ಕೊಲೆ ಮಾಡಿದ ನಾಲ್ಕು ಮಕ್ಕಳ ತಂದೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 1 =
Remember me
