ಬೆಂಗಳೂರು:ಡ್ರಗ್ಸ್ ಪೆಡ್ಲರ್​ ವೀರೇನ್​ ಖನ್ನಾ ಮನೆಯಲ್ಲಿ ಗಾಂಜಾ ಜತೆಗೆ ಎರಡು ಜೊತೆ ಕರ್ನಾಟಕ ಪೊಲೀಸ್​ ಯೂನಿಫಾರ್ಮ್ ಪತ್ತೆಯಾಗಿವೆ!
ಓಪನ್​ ಏರ್​ ಥಿಯೇಟರ್​ ಪಾರ್ಟಿ ಸೇರಿದಂತೆ ದೊಡ್ಡದೊಡ್ಡ ಪಾರ್ಟಿಗಳನ್ನು ಆಯೋಜಿಸಿ ಸಿನಿಮಾ ನಟ-ನಟಿಯರನ್ನು ಆಹ್ವಾನಿಸಿ ವೀರೇನ್​ ಖನ್ನಾ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಸರ್ಚ್ ವಾರಂಟ್ ಸಹಿತ ದೆಹಲಿ ನಿವಾಸದ ಮೇಲೆ ದಾಳಿ ಮಾಡಿದ ಸಿಸಿಬಿ ವೀರೇನ್​ ಖನ್ನಾನನ್ನು ವಶಕ್ಕೆ ಪಡೆದಿತ್ತು. ಅಲ್ಲಿಂದ ಬೆಂಗಳೂರಿಗೆ ಕರೆತಂದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಮಂಗಳವಾರ ಬೆಳಗ್ಗೆ 7ರ ಸುಮಾರಿಗೆ ವೀರೇನ್ ಖನ್ನಾನ ಬೆಂಗಳೂರು ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಪರಿಶೀಲನೆ ನಡೆಸಿದಾಗ ಅಲ್ಲಿ ಇನ್​ಸ್ಪೆಕ್ಟರ್ ದರ್ಜೆಯ ಅಧಿಕಾರಿಗಳು ಧರಿಸುವ ಎರಡು ಜೊತೆ ಖಾಕಿ ಸಮವಸ್ತ್ರ ಸಿಕ್ಕಿದೆ. ಈ ಪೈಕಿ ಒಂದು ಪುರುಷನ ಯೂನಿಫಾರ್ಮ್ ಮತ್ತೊಂದು ಮಹಿಳೆಯ ಯೂನಿಫಾರ್ಮ್.ಇದನ್ನೂ ಓದಿರಿಹಳ್ಳಿಯಲ್ಲಿ ಒಂಟಿಮನೆ ಬಾಡಿಗೆ ಪಡೆದ ಯುವಕ ರಾತ್ರಿಯಾಗುತ್ತಿದ್ದಂತೆ ತನ್ನ ವರಸೆ ಬದಲಿಸುತ್ತಿದ್ದ!
ಡ್ರಗ್ಸ್ ಪೆಡ್ಲರ್​ ವೀರೇನ್​ ಖನ್ನಾ ಮನೆಯಲ್ಲಿ ಖಾಕಿ ಸಮವಸ್ತ್ರ ಮಾತ್ರವಲ್ಲ, ಮಾದಕ ವಸ್ತು ಕೂಡ ಪತ್ತೆಯಾಗಿದೆ. ಗಾಂಜಾ ತುಂಬಿದ್ದ ಸಿಗರೇಟ್ ತುಂಡುಗಳು, ಗಾಂಜಾ ಕೂಡ ಸಿಕ್ಕಿದೆ. ಅವುಗಳೆಲ್ಲವನ್ನೂ ಪೊಲೀಸರು ಸೀಜ್​ ಮಾಡಿದ್ದಾರೆ.
ಡ್ರಗ್ಸ್ ಪೆಡ್ಲರ್​ ಮನೆಯಲ್ಲಿ ಪೊಲೀಸ್​ ಸಮವಸ್ತ್ರ ನೋಡುತ್ತಿದ್ದಂತೆ ಆ ಡ್ರೆಸ್​ ಬಗ್ಗೆ ಆರೋಪಿ ವೀರೇನ್​ ಖನ್ನಾನನ್ನು ಸ್ಥಳದಲ್ಲೇ ಅಧಿಕಾರಿಗಳು ಪ್ರಶ್ನಿಸಿದ್ದು, ತಾನು ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಹಾಕಿಕೊಳ್ಳಲು ಬಳಸುತ್ತಿದ್ದೆ ಎಂದಿದ್ದಾನೆ. ಬಹುತೇಕ ಈವೆಂಟ್​ಗಳಲ್ಲಿ ವೀರೇನ್, ಖಾಕಿ ಬಟ್ಟೆ ಧರಿಸುತ್ತಿದ್ದ ಎಂಬುದಕ್ಕೆ ಕೆಲ ಪೂರಕ ದಾಖಲೆಗಳು ಸಿಕ್ಕಿವೆ.
ಆರೋಪಿ ಮನೆಯಲ್ಲಿ ಸಿಕ್ಕ ಪೊಲೀಸ್ ಸಮವಸ್ತ್ರ ನಕಲಿ ಎಂದು ಅಪರಾಧ ವಿಭಾಗ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಡ್ರಗ್ಸ್​ ಕೇಸ್​ನಲ್ಲಿ ಈಗಾಗಲೇ 6 ಜನರನ್ನ ದಸ್ತಗಿರಿ ಮಾಡಿ ತನಿಖೆ ಮಾಡುತ್ತಿದ್ದೇವೆ. ಈ ತನಿಖೆ ಮುಂದುವರಿಸಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಸಂಜನಾ ಮನೆ ಮೇಲೆ ಹಾಗೂ ವೀರೇನ್ ಖನ್ನಾ ಮನೆಯನ್ನು ಸೋಮವಾರ ಬೆಳಗ್ಗೆ ಸರ್ಚ್ ಮಾಡಿದ್ದೇವೆ. ಶೋಧಕಾರ್ಯದಲ್ಲಿ ಅನೇಕ ವಸ್ತುಗಳು ಸಿಕ್ಕಿವೆ. ವೀರೇನ್ ಖನ್ನಾ ಮನೆಯಲ್ಲಿ ಕರ್ನಾಟಕ ಪೊಲೀಸ್ ಸಮವಸ್ತ್ರ ಸಿಕ್ಕಿದ್ದು, ಅದು ಯಾವ ಕಾರಣಕ್ಕೆ ಅಲ್ಲಿತ್ತು ಅನ್ನೋದರ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
https://www.vijayavani.net/actress-sanjana-galrani-arrested-rahul-birthday-party-video-viral/
ಮಾಜಿ ಶಾಸಕರೊಬ್ಬರ ಮಗ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − six =
Remember me
