ಆನೇಕಲ್:ಸರಗಳ್ಳರನ್ನು ಹಿಡಿಯಲು ಹೋಗಿ ಪೊಲೀಸ್​ ವಾಹನ ಅಪಘಾತಕ್ಕೀಡಾಗಿರುವ ಘಟನೆ ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ಪೊಲೀಸ್ ಠಾಣೆಯ ಪಕ್ಕದಲ್ಲೇ ನಡೆದಿದೆ.
ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರೆದಿದ್ದು, ಮಹಿಳೆಯ ಚೈನ್ ಕಿತ್ತು ಇಬ್ಬರು ಪರಾರಿಯಾಗಿದ್ದಾರೆ. ಖದೀಮರು ಅಪಾಚೆ ಬೈಕ್ ಮೂಲಕ ಬಂದಿದ್ದರು. ಸರ ಕಸಿದು ಪರಾರಿಯಾಗುವಾಗ ಮಹಿಳೆ ಕೂಗಿಕೊಂಡಿದ್ದಾಳೆ. ಅದೇ ವೇಳೆ 112 ಪೊಲೀಸ್​ ವಾಹನ ಸ್ಥಳಕ್ಕೆ ಬಂದಿದೆ.
ಪೊಲೀಸ್ ವಾಹನ ಬರುತ್ತಿದ್ದಂತೆ ಕಳ್ಳರು ಸಿಕ್ಕ ಸಿಕ್ಕ ಜಾಗದಲ್ಲೆಲ್ಲ ನುಗ್ಗಿದ್ದಾರೆ. ಮುಖ್ಯ ಪೇದೆ ಮಲ್ಲಿಕಾರ್ಜುನ್ ಹಾಗೂ ಪೇದೆ ಸತೀಶ್ ಅವರನ್ನು ಹಿಡಿಯಲು ಹೋದಾಗ ಪೊಲೀಸ್​ ವಾಹನ ಆಯತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ.
ಮುಖ್ಯ ಪೊಲೀಸ್ ಪೇದೆ ಮಲ್ಲಿಕಾರ್ಜುನ್​ ತಲೆಗೆ ಪೆಟ್ಟು ಬಿದ್ದಿದ್ದು, ಬೊಮ್ಮಸಂದ್ರ ಸ್ಪರ್ಶ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ಹೆಬ್ಬಗೋಡಿ ಇನ್ಸ್ಪೆಕ್ಟರ್ ಜೆ. ಗೌತಮ್ ಹಾಗೂ ಪೊಲೀಸರು ಆರೋಗ್ಯ ವಿಚಾರಿಸಿದ್ದಾರೆ. ಖದೀಮರು ಸ್ಥಳದಲ್ಲೇ ಅಪಾಚೆ ವಾಹನ ಬಿಟ್ಟು ಪರಾರಿಯಾಗಿದ್ದು, ಅದನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ರಾತ್ರೋರಾತ್ರಿ ಶ್ರೀಮಂತಳಾದ ಪತ್ನಿ: ತಾನು ಸತ್ತುಹೋದ ದಾಖಲೆ ನೋಡಿ ಬೆಚ್ಚಿಬಿದ್ದ ಪತಿ!

ಬಾನಂಗಳದಲ್ಲಿ ಸುಂದರ ದೃಶ್ಯ: ಚಂದ್ರನ ಸಮೀಪ ಶುಕ್ರ, ಮಂಗಳನ ಒಟ್ಟಿಗೇ ನೋಡುವ ಭಾಗ್ಯ

ಸೆಲ್​ಫೋನ್​-ಬೈಕ್​ ತೆಗೆದುಕೊಡಲು ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಹಾದಿ ಹಿಡಿದ ಯುವಕ

Sign in to your account
Please enter an answer in digits:twelve + 10 =
Remember me
