ಬಾಗಲಕೋಟೆ:ಆಂಧ್ರ ಪ್ರದೇಶದ ಚಿತ್ತೂರಿನ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬೆಂಗಳೂರಿನ ಶಿವಾಜಿನಗರ ಠಾಣೆಯ ಪೊಲೀಸ್ ಕಾನ್ಸಟೇಬಲ್ ಅನಿಲ್​ಲ ಮುಳಿಕ್ (26) ಮೂಲತಃ ಬಾಗಲಕೋಟೆಯವರಾಗಿದ್ದು, ಅವರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಅನಿಲ್​ ಅವರು ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದವರು. ಕಳೆದ ಒಂದು ವಾರದ ಹಿಂದಷ್ಟೆ ಗ್ರಾಮಕ್ಕೆ ಬಂದಿದ್ದರು. ಕರ್ತವ್ಯದ ನಿಮಿತ್ತ ವಿಜಯಪುರಕ್ಕೆ ಬಂದಿದ್ದ ಅನೀಲ್​, ಹತ್ತಿರದಲ್ಲೇ ಇದ್ದ ಚಿಕ್ಕಲಕಿ ಗ್ರಾಮಕ್ಕೆ ಬಂದು ತಂದೆ-ತಾಯಿ ಹಾಗೂ ಸಹೋದರನನ್ನು ಮಾತಾಡಿಸಿ ಹೋಗಿದ್ದರು.
2019ರ ಏಪ್ರಿಲ್ ತಿಂಗಳಲ್ಲಿ ಅನಿಲ್​, ಪೊಲೀಸ್ ನೌಕರಿ ಸೇರಿದ್ದ. ಮೊದಲ ಪೋಸ್ಟಿಂಗ್ ಶಿವಾಜಿನಗರ ಠಾಣೆಗೆ ಹಾಜರಾಗಿದ್ದ. ಬಡಕುಟುಂಬದ ಅನಿಲ್​, ಸರ್ಕಾರಿ ನೌಕರಿ ಸೇರಿದ್ದರಿಂದ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ, ಈಗ ಅಪಘಾತದಲ್ಲಿ ಮೃತಪಟ್ಟಿರುವುದು ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
ಅನಿಲ್​ ಮನೆಯಲ್ಲಿ ತಾಯಿ ಶಾಂತಾಬಾಯಿ ರೋಧನ ಮುಗಿಲು ಮುಟ್ಟಿದೆ. ತಂದೆ ದಾಜೀಬಾ ದಿಕ್ಕು ತೋಚದೇ ಕುಳಿತಿದ್ದಾರೆ. ಅನಿಲ್​ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿ ಗ್ರಾಮದ ನೂರಾರು ಜನರು ಅನಿಲ್​ ಮನೆ ಕಡೆಗೆ ಸೇರಿದ್ದು, ಕಂಬನಿಗರಿಯುತ್ತಿದ್ದಾರೆ. ಅಲ್ಲದೆ, ಅನಿಲ್​ ಮನೆಗೆ ಬೆಳಗ್ಗೆ ಸಾವಳಗಿ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಶಿವಾಜಿ ನಗರ ಪೊಲೀಸ್ ಸಿಬ್ಬಂದಿ ದುರಂತ ಸಾವು: ಅಪಘಾತದ ಭೀಕರತೆ ಬಿಚ್ಚಿಟ್ಟ ಆಂಧ್ರದ ಪೊಲೀಸ್​ ಅಧಿಕಾರಿ

ರೈಲ್ವೆ ಕ್ರಾಸಿಂಗ್ ವೇಳೆ ಎಕ್ಸ್​ಪ್ರೆಸ್​ ರೈಲು ಡಿಕ್ಕಿ: ತಾಯಿಯ ಕಣ್ಣೆದುರಲ್ಲೇ ಮಗಳ ಸಾವು, ಭಯಾನಕ ವಿಡಿಯೋ ಸೆರೆ

ಬಿಜೆಪಿ ನಾಯಕನ ಫಾರ್ಮ್​ಹೌಸ್ ಈಗ ವೇಶ್ಯಾಗೃಹ​! 73 ಮಂದಿ ಅರೆಸ್ಟ್​- ಆರು ಮಂದಿ ಬಾಲಕಿಯರ ರಕ್ಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
