ಮೃತ್ಯುಂಜಯ ಕಪಗಲ್ಬೆಂಗಳೂರು
ಫೇಸ್​ಬುಕ್​ನ ಒಂದು ಪೋಸ್ಟ್ ಮೂಲಕ ಹೊತ್ತಿಕೊಂಡ ಕಿಡಿಯೊಂದು ಬೆಂಗಳೂರಿನ ಮೂರು ಪ್ರದೇಶಗಳಲ್ಲಿ ಹಿಂಸೆಯ ದಳ್ಳುರಿ ಹೊತ್ತಿಸಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವೀಗ, ಸಾಮಾಜಿಕ ಜಾಲತಾಣಗಳ ಮೇಲೆ ಖಾಕಿ ನಿಗಾ ಬಿಗಿಗೊಳಿಸಲು ಮುಂದಾಗಿದೆ. ಆ ಮೂಲಕ ಪ್ರಚೋದನಾತ್ಮಕ ಟೀಕೆ, ಟಿಪ್ಪಣಿಗಳನ್ನು ಮಾಡಿ ಅಶಾಂತಿ ಸೃಷ್ಟಿಸುವವರ ಹೆಡೆಮುರಿ ಕಟ್ಟಲು ಯೋಚಿಸಿದೆ.
ಗಲಭೆಗ್ರಸ್ತ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಕಾವಲ್ ಬೈರಸಂದ್ರ ಸಹಜ ಸ್ಥಿತಿ ಮರಳಿದ್ದರೂ ಸೋಷಿಯಲ್ ಮೀಡಿಯಾಗಳಲ್ಲಿ ವಿಷಕಾರಿ ಪೋಸ್ಟ್​ಗಳ ಹರಿದಾಟ ನಿಂತಿಲ್ಲ. ದುಷ್ಕರ್ವಿುಗಳನ್ನು ಪತ್ತೆ ಹಚ್ಚುವುದರ ಜತೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತಿರುವ ಪೊಲೀಸರಿಗೆ ಇದು ತಲೆ ನೋವು ತರಿಸಿದೆ.
ಮಾರಕ ಪೋಸ್ಟ್​ಗಳಿಗೆ ತಡೆ: ಫೇಸ್​ಬುಕ್, ಇನ್​ಸ್ಟ್ಟಾಗ್ರಾಮ್ ಟ್ವಿಟರ್, ವಾಟ್ಸ್​ಆಪ್ ಮುಂತಾದ ಸೋಷಿಯಲ್ ಮೀಡಿಯಾಗಳು ಸೃಷ್ಟಿಸುತ್ತಿರುವ ತಲ್ಲಣಗಳು ಸರ್ಕಾರವನ್ನು ಬಡಿದೆಬ್ಬಿಸಿವೆ. ಜಾಲತಾಣಗಳನ್ನು ನಿಯಂತ್ರಿ ಸಲು ಸರ್ಕಾರ ಯೋಚಿಸಿಲ್ಲ. ಸದ್ಯಕ್ಕೆ ಅಂತಹ ಯಾವುದೇ ಕಾಯ್ದೆ-ಕಟ್ಟಳೆಗಳೂ ಇಲ್ಲ. ಹೀಗಾಗಿ ಮಾರಕ ಪೋಸ್ಟ್​ಗಳ ಹಂಚಿಕೆಗೆ ಮೂಗುದಾರ ಬಿಗಿಯಬೇಕೆಂಬ ಚಿಂತನೆ ನಡೆಸಿದೆ. ಸೋಷಿಯಲ್ ಮೀಡಿಯಾಗಳ ಮುಖ್ಯಸ್ಥರೊಂದಿಗೆ ರ್ಚಚಿಸಲು ಮುಂದಿನ ವಾರ ಸಭೆ ಕರೆದಿದ್ದು, ಅದೇ ಕಾಲಕ್ಕೆ ಸೈಬರ್ ಕ್ರೖೆಮ್ ಹಾಗೂ ತಾಂತ್ರಿಕ ವಿಭಾಗದವರೊಂದಿಗೆ ವಿಚಾರ ವಿನಿಮಯ ನಡೆಸಿ ಮುಂದಿನ ಹೆಜ್ಜೆಯಿಡಲು ನಿರ್ಧರಿಸಿದೆ.
ಸರ್ಕಾರದ ಸಾಧ್ಯತೆಗಳು
ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್ಗಳನ್ನು ಹಂಚುವ ಮುನ್ನ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ ಕಂಪನಿಗಳೊಂದಿಗೆ ರ್ಚಚಿಸಲು ಮುಂದಿನ ವಾರ ಸಭೆ ಕರೆಯಲು ತೀರ್ವನಿಸಿರುವೆ.
| ಬಸವರಾಜ ಬೊಮ್ಮಾಯಿಗೃಹ ಸಚಿವ.
https://www.vijayavani.net/over-18-lakh-people-recovered-from-virus-covid19/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
