ಬೆಂಗಳೂರು: ಮಹದೇವಪುರದ ಮಹೇಶ್ವರಿನಗರದಲ್ಲಿ ನಡೆದಿದ್ದ ಯುವತಿಯ ಕೊಲೆ ಪ್ರಕರಣವನ್ನು ಘಟನೆ ನಡೆದ ಕೆಲವೇ ತಾಸೀನಲ್ಲಿ ಭೇದಿಸಿರುವ ಮಹದೇವಪುರ ಠಾಣೆ ಪೊಲೀಸರು, ಪಕ್ಕದ ಮನೆಯಲ್ಲೇ ನೆಲೆಸಿದ್ದ ಹಂತಕನನ್ನು ಬಂಧಿಸಿದ್ದಾರೆ.
ಒಡಿಶಾ ಮೂಲದ ಹಾಗೂ ಮಹೇಶ್ವರಿನಗರ ನಿವಾಸಿ ಕೃಷ್ಣ ಚಂದ್ರ ಸೇತಿ(೨೮) ಬಂಧಿತ. ಆರೋಪಿಯು ಗುರುವಾರ ರಾತ್ರಿ ಪಕ್ಕದ ಮನೆಯ ಮಹಾನಂದ(೨೧) ಎಂಬ ಯುವತಿಯನ್ನು ಬಲವಂತವಾಗಿ ಮನೆಯೊಳಗೆ ಎಳೆದುಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಆಕೆ ಜೋರಾಗಿ ಚೀರಾಡಿ ಪ್ರತಿರೋಧವೊಡ್ಡಿದಾಗ ಆಕೆಯ ಕುತ್ತಿಗೆಗೆ ಧರಿಸಿದ್ದ ದಾರವನ್ನು ಬಿಗಿಯಾಗಿ ಹಿಡಿದು ಬಾಯಿ ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಮುಂಜಾನೆ ಮೃತದೇಹವನ್ನು ಆಕೆಯ ಮನೆ ಎದುರು ಎಸೆದು ಮನೆ ಸೇರಿಕೊಂಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾದದ ಧೂಳು ನೀಡಿದ ಸುಳಿವು:ತನಿಖೆಗೆ ಇಳಿದ ಪೊಲೀಸರು, ಮೃತದೇಹವನ್ನು ಕೂಲಂಕಷವಾಗಿ ತಪಾಸಣೆ ಮಾಡಿದಾಗ, ಮಹಾನಂದಳ ಚಪ್ಪಲಿಗಳು ಮನೆ ಬಳಿಯೇ ಇದ್ದವು. ಇನ್ನು ಮೃತದೇಹ ಪಾದಗಳಲ್ಲಿ ಯಾವುದೇ ಧೂಳು ಇಲ್ಲದಿರುವುದು ಕಂಡು ಬಂದಿತ್ತು. ಮನೆಯ ಸುತ್ತಮುತ್ತಲೇ ಮಹಾನಂದಳ ಕೊಲೆಯಾಗಿದ್ದು, ಹಂತಕರು ಸಮೀಪದಲ್ಲೇ ಇರಬಹುದು ಎಂದು ಶಂಕಿಸಿದ್ದರು. ಈ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದ ಪೊಲೀಸರು, ಅಕ್ಕಪಕ್ಕದ ಮನೆಯವರನ್ನು ವಿಚಾರಣೆ ಮಾಡಿದಾಗ, ನೆರೆ ಮನೆಯ ಕೃಷ್ಣ ಚಂದ್ರ ಸೇತಿ ನಡವಳಿಕೆ ಬಗ್ಗೆ ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರಮ್‌ನಲ್ಲಿ ಇಟ್ಟಿದ್ದ:ಆರೋಪಿಯು ನಗರದ ಟೆಕ್ ಪಾರ್ಕ್‌ವೊಂದರಲ್ಲಿ ಸೆಕ್ಯೂರಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈತನ ಪತ್ನಿ ಭಾಗ್ಯಶ್ರೀ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಗುರುವಾರ ರಾತ್ರಿ ೧೨ ಗಂಟೆ ವರೆಗೆ ಪತ್ನಿ ಭಾಗ್ಯಶ್ರೀಗೆ ಕೆಲಸವಿತ್ತು. ಹೀಗಾಗಿ ಮನೆಯಲ್ಲಿ ಒಬ್ಬನೇ ಇದ್ದಳು. ರಾತ್ರಿ ೮ ಗಂಟೆ ಸುಮಾರಿಗೆ ಮಹಾನಂದ ಮನೆಯಿಂದ ಹೊರಗೆ ಬಂದಾಗ, ಆರೋಪಿ ಏಕಾಏಕಿ ಆಕೆಯನ್ನು ತನ್ನ ಮನೆಯೊಳಗೆ ಎಳೆದುಕೊಂಡು ಬಾಗಿಲು ಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಆಕೆ ಕಿರುಚಾಡಲು ಮುಂದಾದಾಗ, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಮನೆಯಲ್ಲಿದ್ದ ಡ್ರಮ್ ಒಳಗೆ ಬಚ್ಚಿಟ್ಟಿದ್ದ. ಮುಂಜಾನೆ ೪ ಗಂಟೆ ಸುಮಾರಿಗೆ ಮೃತದೇಹವನ್ನು ಡ್ರಮ್ ನಿಂದ ಹೊರಗೆ ತೆಗೆದು ಮಹಾನಂದಳ ಮನೆ ಎದುರು ಎಸೆದು ಮನೆ ಸೇರಿಕೊಂಡಿದ್ದಾನೆ. ಬೆಳಗ್ಗೆ ಮೃತದೇಹ ಪತ್ತೆಯಾಗಿ ಜನ ಜಮಾಯಿಸಿದ್ದರೂ ಆರೋಪಿ ಮಾತ್ರ ಮನೆಯಿಂದ ಹೊರಗೆ ಬಂದಿಲ್ಲ. ಪೊಲೀಸರು ವಠಾರದಲ್ಲಿರುವ ಪ್ರತಿಯೊಬ್ಬರನ್ನು ವಿಚಾರಣೆ ಮಾಡುವಾಗ, ಕೃಷ್ಣ ಚಂದ್ರನನ್ನು ಕರೆದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆತ ಅನುಮಾನಾಸ್ಪದವಾಗಿ ವರ್ತಿಸಿದಾಗ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 5 =
Remember me
