| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಆರೋಗ್ಯ ಮತ್ತು ಪರಿಸರಕ್ಕೆ ಮಾರಕವಾಗಿರುವ ವಿದ್ಯುನ್ಮಾನ ತ್ಯಾಜ್ಯದ ನಿರ್ವಹಣೆ ಕ್ರಮಬದ್ಧವಾಗಿ ಮಾಡುವಂತೆ ಮಾಡುವ ಸಲುವಾಗಿ ಬಿಗಿಯಾದ ಪ್ರತ್ಯೇಕ ನೀತಿ ತರಲು ರಾಜ್ಯ ಸರ್ಕಾರ ಮುಂದಾಗಿದೆ.
ಇ-ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಈಗಾಗಲೆ ನಿಯಮಾವಳಿ ಜಾರಿಯಲ್ಲಿವೆ. ಆದರೂ ನಿರ್ವಹಣೆ ಹಾಗೂ ಮರು ಬಳಕೆ ಯಾವ ಪ್ರಮಾಣದಲ್ಲಿ ಆಗಬೇಕಾಗಿತ್ತೋ ಅಷ್ಟು ಆಗುತ್ತಿಲ್ಲ. ಆ ವಿಚಾರದಲ್ಲಿ ರಾಜ್ಯ ಬಹಳ ಹಿಂದುಳಿದಿದೆ. ಆದ್ದರಿಂದ ಬಿಗಿಯಾದ ನೀತಿಯೊಂದನ್ನು ರೂಪಿಸುವ ಮೂಲಕ ಇ-ತ್ಯಾಜ್ಯದಿಂದಾಗುವ ಅಪಾಯ ತಡೆಗಟ್ಟಲು ಸರ್ಕಾರ ನಿರ್ಧರಿಸಿದೆ.
ಇ-ತ್ಯಾಜ್ಯ ಉತ್ಪಾದನೆಯಲ್ಲಿ ಬೆಂಗಳೂರು ದೇಶದಲ್ಲಿಯೇ 3ನೇ ಸ್ಥಾನದಲ್ಲಿದೆ. ಮಾಹಿತಿ ತಂತ್ರಜ್ಞಾನದ ನಗರ ಎಂದೇ ಕಡೆಸಿಕೊಳ್ಳುವ ವಾರ್ಷಿಕ ಸುಮಾರು 1.2 ಲಕ್ಷ ಟನ್ ಇ-ತ್ಯಾಜ್ಯ ಉತ್ಪಾದನೆ ಯಾಗುತ್ತದೆ. ಇ-ತ್ಯಾಜ್ಯ ಮರು ಬಳಕೆಯಾಗುವಂತೆ ನಿರ್ವಹಣೆ ಮಾಡುವ ಸುಮಾರು 200 ಕೇಂದ್ರಗಳು ಬೆಂಗಳೂರಿನಲ್ಲಿವೆ. ಆದರೂ, ಇದು ಸರಿಯಾಗಿ ನಡೆಯದೇ ಪ್ರಕೃತಿ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎನ್ನುತ್ತಾರೆ ತಜ್ಞರು.
ಇ-ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿದ ನಿಯಮಾವಳಿಗಳ ಆಧಾರದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹ ಪ್ರತ್ಯೇಕ ನಿಯಮಾವಳಿಗಳನ್ನು ರೂಪಿಸಿದೆ. ಆದರೆ, ಅದರ ನಿರ್ವಹಣೆ, ಮೇಲುಸ್ತುವಾರಿ ಸರಿಯಾಗಿ ಆಗುತ್ತಿಲ್ಲ. ಆದ್ದರಿಂದಲೇ ಎಲ್ಲವನ್ನು ಬಿಗಿ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಪರಿಸರ ಇಲಾಖೆಯ ಮೂಲಗಳು ಹೇಳುತ್ತವೆ.
ತ್ಯಾಜ್ಯ ನಿರ್ವಹಣೆಯ ಬಗ್ಗೆ ಆಡಿಟ್ ಮಾಡುವುದು ಒಟ್ಟಾರೆ ಉದ್ದೇಶವಾಗಿದೆ. ವಿದ್ಯುನ್ಮಾನ ವಸ್ತುಗಳ ಬಳಕೆಯಿಂದ ಮರು ಬಳಕೆಯ ತನಕ ಟ್ರಾ್ಯಕ್ ಮಾಡಲಾಗುತ್ತದೆ. ಮರು ಬಳಕೆಯಾಗುವ ವಸ್ತುಗಳು ಸರಿಯಾಗಿ ಬಳಕೆಯಾಗುವಂತೆ ನೋಡಿಕೊಳ್ಳುವುದು, ನಿರ್ವಹಣೆ ಮಾಡುವುದು ನೀತಿಯ ಒಟ್ಟಾರೆ ಉದ್ದೇಶವಾಗಿರುತ್ತದೆ.
ಇ-ತ್ಯಾಜ್ಯ ಏನೇನು?:ಕಂಪ್ಯೂಟರ್, ಟೆಲಿವಿಷನ್, ವಿಸಿಆರ್, ಸ್ಟೀರಿಯೋ, ಫ್ಯಾಕ್ಸ್ ಯಂತ್ರಗಳು, ಕಾಪಿಯರ್​ಗಳು, ಮೈಕ್ರೋವೇವ್, ಸೆಲ್​ಫೋನ್, ರಿಮೋಟ್ ಹೀಗೆ ವಿವಿಧ ವಸ್ತುಗಳು ಬಳಕೆಯಾಗದೆ ಇದ್ದಾಗ ಅವುಗಳನ್ನು ಇ-ತ್ಯಾಜ್ಯವೆಂದು ಗುರುತಿಸಲಾಗುತ್ತದೆ. ಒಂದು ಕಂಪ್ಯೂಟರ್​ನ ಜೀವಿತಾವಧಿಯನ್ನು ಸರ್ಕಾರ 5 ವರ್ಷಗಳೆಂದು ಲೆಕ್ಕ ಹಾಕಿದೆ. ಕಂಪ್ಯೂಟರ್ ಮಾರಾಟ ಮಾಡುವವರೇ ಅವುಗಳ ನಿರ್ವಹಣೆ ಮಾಡಬೇಕು ಎಂಬುದು ಸರ್ಕಾರದ ನಿಯಮ. ಆದರೆ ಆ ಕೆಲಸ ಆಗುತ್ತಿಲ್ಲ.
ಎಷ್ಟಿದೆ ಮರು ಬಳಕೆ?:ವಿಶ್ವದಲ್ಲಿ ವಾರ್ಷಿಕ 60 ಮಿಲಿಯನ್ ಇ-ತ್ಯಾಜ್ಯ ಉತ್ಪಾದನೆಯಾಗುತ್ತದೆ ಎಂಬ ಅಂದಾಜಿದೆ. ಅದರ ಪ್ರಕಾರ ಒಬ್ಬ ವ್ಯಕ್ತಿ 7.6 ಕೆಜಿ ಉತ್ಪಾದನೆ ಮಾಡುತ್ತಾನೆ. ಆದರೆ ಮರು ಬಳಕೆ ಆಗುತ್ತಿರುವುದು ಶೇ.17.4 ಮಾತ್ರ. ಇದು ವಿಶ್ವದ ಅಂಕಿ-ಅಂಶವಾದರೂ ಎಲ್ಲ ದೇಶಗಳಲ್ಲಿಯೂ ಹೆಚ್ಚು ಕಡಿಮೆ ಇಷ್ಟೇ ಪ್ರಮಾಣದಲ್ಲಿದೆ ಎನ್ನಲಾಗಿದೆ.
ಏನೇನು ವಿಷಕಾರಿ?:ಇ-ತ್ಯಾಜ್ಯದಲ್ಲಿ ಬೆರಿಲ್ಲಿಯಂ, ಕ್ಯಾಡ್ಮಿಯಂ, ಪಾದರಸ, ಸೀಸ ಹೀಗೆ ವಿವಿಧ ರೀತಿಯ ರಾಸಾಯನಿಕಗಳಿರುತ್ತವೆ. ಇದು ತೀರಾ ಅಪಾಯಕಾರಿ ಎಂದೇ ಗುರುತಿಸಲಾಗಿದೆ. ಈ ರಾಸಾಯನಿಕಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಹೋದರೆ ಅವು ಮಣ್ಣು, ಅಂತರ್ಜಲ, ನೀರಿನ ಮೂಲಗಳಲ್ಲಿ ಸೇರಿ ಪ್ರಾಣಿ, ಪಕ್ಷಿ, ಮನುಷ್ಯರ ಮೇಲೂ ದುಷ್ಪರಿಣಾಮ ಬೀರುತ್ತವೆ.
ಇ-ತ್ಯಾಜ್ಯದಲ್ಲಿ ಕೆಲವೊಂದು ವಿಷಕಾರಿ ವಸ್ತುಗಳಿವೆ. ಅವುಗಳ ಸಂರಕ್ಷಣೆ, ಮರು ಬಳಕೆ ಸರಿಯಾಗಿ ಆಗಬೇಕಾಗಿದೆ. ಈಗ ಇರುವ ಕಾನೂನು ಸರಿಯಾಗಿ ಅನುಷ್ಠಾನ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಪ್ರತ್ಯೇಕ ನೀತಿ ತರುವ ಬಗ್ಗೆ ಚರ್ಚೆ ನಡೆಸಲಾಗಿದೆ. ಆದಷ್ಟು ಬೇಗ ಹೊಸ ನೀತಿಯನ್ನು ತರಲಾಗುತ್ತದೆ. ಸರ್ಕಾರಕ್ಕೆ ಜನರ ಆರೋಗ್ಯ ಮತ್ತು ಪರಿಸರ ನಿರ್ವಹಣೆ ಅತಿ ಮುಖ್ಯ.
| ಈಶ್ವರ ಖಂಡ್ರೆ, ಅರಣ್ಯ ಮತ್ತು ಪರಿಸರ ಸಚಿವ
ಮರು ಬಳಕೆ ಮೇಲೆ ನಿಗಾ:ಬೆಂಗಳೂರಿನಲ್ಲಿ 200 ಮರು ಬಳಕೆ ಕೇಂದ್ರಗಳಿವೆ. ಅವುಗಳ ಪ್ರಕಾರ ಶೇ.100 ಇ-ತ್ಯಾಜ್ಯ ನಿರ್ವಹಣೆಯಾಗುತ್ತಿದೆ. ಆದರೆ, ಅದನ್ನು ಒಪ್ಪಲು ಸರ್ಕಾರ ಸಿದ್ಧವಿಲ್ಲ. ಏಕೆಂದರೆ ಮರು ಬಳಕೆಯ ಪ್ರಮಾಣ ಇರುವುದೇ ಶೇ.17. 4. ಆದ್ದರಿಂದ ಆಡಿಟ್ ಮಾಡಿಸುವುದರ ಜತೆಗೆ ಈ ಕೇಂದ್ರಗಳಿಗೂ ಕೆಲವೊಂದು ನಿಯಮಗಳನ್ನು ರೂಪಿಸಲಾಗುತ್ತದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.
ನಾಪತ್ತೆ ಆಗಿದ್ದ ಗಂಡ ಹತ್ತು ವರ್ಷಗಳ ಬಳಿಕ ಪತ್ತೆ; ವೈದ್ಯರನ್ನು ನೋಡಲು ಹೋಗಿದ್ದ ಪತ್ನಿಗೆ ಪತಿಯೇ ಸಿಕ್ಕಿ ಅಚ್ಚರಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
