ಬೆಂಗಳೂರು:ಪೊಲೀಸರು ಸಾರ್ವಜನಿಕರ ಬಳಿ ದುರ್ವರ್ತನೆ ತೋರುತ್ತಾರೆ ಎಂಬುದು ಸಮಾಜದಲ್ಲಿ ಆಗಾಗ ಕೇಳಿ ಬರುವಂಥ ಆರೋಪ. ಅದೇ ಕಾರಣಕ್ಕೆ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಸಂಘರ್ಷ ಉಂಟಾಗಿದ್ದೂ ಇದೆ. ಹೀಗೆ ಪೊಲೀಸರು ದುರ್ವರ್ತನೆ ತೋರಿದ ಕುರಿತು ಮತ್ತೊಂದು ಆರೋಪ ಕೇಳಿಬಂದಿದೆ.
ಈ ಪ್ರಕರಣ ಕುರಿತ ಮಾಹಿತಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್​ಕುಮಾರ್​ ಅವರ ಗಮನಕ್ಕೂ ತಲುಪಿದ್ದು, ಇದೇ ವಿಚಾರವಾಗಿ ಅವರು ಪೊಲೀಸರಿಗೆ ಪರೋಕ್ಷವಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಂದ ದೂರಿನ ಮೇರೆಗೆ ಅವರು ಈ ಸಂದೇಶವನ್ನು ರವಾನಿಸಿದ್ದಾರೆ.
ಇದನ್ನೂ ಓದಿ:ಒಬ್ಬ ಮಗನ ಚಿಕಿತ್ಸೆಗಾಗಿ ಇನ್ನೊಬ್ಬ ಮಗನನ್ನು ಮಾರಲೆತ್ನಿಸಿದ ತಂದೆ; ಪತಿ ವಿರುದ್ಧ ಪತ್ನಿಯ ದೂರು
‘ಮೇ 30ರ ಬೆಳಗ್ಗೆ 11:45ರ ಸುಮಾರಿಗೆ ಮಂಡ್ಯ ಸರ್ಕಾರಿ ಆಸ್ಪತ್ರೆಯ ಮುಂದೆ ಹೋಗುತ್ತಿದ್ದಾಗ ಆಟೋಚಾಲಕರೊಬ್ಬರಿಗೆ ಪೊಲೀಸರೊಬ್ಬರು ಸಾರ್ವಜನಿಕವಾಗಿ ಹೊಡೆಯುತ್ತಿದ್ದರು. ಏನೇ ತಪ್ಪಾಗಿದ್ದರೂ ಈ ರೀತಿಯಲ್ಲಿ ಹೊಡೆಯಬಹುದಾ? ಪೋಲೀಸರ ಕೆಲಸ ಕೇಸ್ ಮಾಡಿ ಶಿಕ್ಷೆ ಕೊಡಿಸೋದಾ ಇಲ್ಲ ಅವರೇ ಶಿಕ್ಷೆ ಕೊಡೋದಾ?’ ಎಂಬುದಾಗಿ ವ್ಯಕ್ತಿಯೊಬ್ಬರು ಟ್ವೀಟ್ ಮೂಲಕ ಪ್ರಶ್ನಿಸಿದ್ದರು. ಮಾತ್ರವಲ್ಲ ಸಂಬಂಧಿತ ಪ್ರಕರಣದ ವಿಡಿಯೋ ಕೂಡ ಆ ಟ್ವೀಟ್ ಜತೆಗೆ ಹಂಚಿಕೊಂಡಿದ್ದರು. ಅಲ್ಲದೆ ಈ ಟ್ವೀಟ್​ನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರನ್ನೂ ಮೆನ್ಷನ್​ ಮಾಡಿದ್ದರು.
ಇದನ್ನೂ ಓದಿ:ಇಬ್ಬರು ಸಚಿವರಿಗೆ ಹೆಚ್ಚುವರಿ ಖಾತೆ ಹೊಣೆ; ಯಾರಿಗೆ, ಯಾವುದು?
ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಅಲೋಕ್​ ಕುಮಾರ್​, ಸಂಬಂಧಿತ ಕಾನ್​ಸ್ಟೆಬಲ್​ನನ್ನು ಅಮಾನತುಗೊಳಿಸಲಾಗಿದೆ ಮತ್ತು ಇಲಾಖಾ ಕ್ರಮವನ್ನು ಪ್ರಾರಂಭಿಸಲಾಗಿದೆ. ಅಂತಹ ಯಾವುದೇ ಅನುಚಿತ ನಡವಳಿಕೆಯನ್ನು ಕಠಿಣವಾಗಿ ಗಂಭೀರವಾಗಿ ಪರಿಗಣಿಸಲಾಗುವುದು ಎಂದಿದ್ದಾರೆ. ಮಾತ್ರವಲ್ಲ, ಪೊಲೀಸರಿಂದ ಸಾರ್ವಜನಿಕರು ನಿರೀಕ್ಷಿಸುವ ಕನಿಷ್ಠ ವಿಷಯವೆಂದರೆ ಸಭ್ಯತೆ ಎನ್ನುವ ಮೂಲಕ ಅವರು, ಪೊಲೀಸರು ಸಾರ್ವಜನಿಕರ ಜತೆ ಸೌಜನ್ಯದಿಂದ ವರ್ತಿಸಬೇಕು ಎಂದು ಪರೋಕ್ಷ ಸಂದೇಶ ರವಾನಿಸಿದ್ದಾರೆ.
The Constable in question has been placed under suspension and departmental action has been initiated
Any such inappropriate behaviour will be severely dealt with
Politeness is the minimum thing Public expects from Policemenhttps://t.co/3aLpE1ydJx
— alok kumar (@alokkumar6994)May 31, 2023

ಖಾಸಗಿ ಬಸ್​​ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಬೇಡಿಕೆ: ಖಾಸಗಿ ಬಸ್​ ಮಾಲೀಕರು ಏನಂತಾರೆ?

ಗಂಡ-ಹೆಂಡತಿ ಮಾತುಕತೆಯ ಎಲ್ಲವನ್ನೂ ಹೊರಗೆ ಹೇಳೋಕಾಗಲ್ಲ: ಡಿ.ಕೆ.ಶಿವಕುಮಾರ್ ಭೇಟಿ ಬಳಿಕ ಸವದಿ ಹೀಗಂದಿದ್ಯಾಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
