|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಚುನಾವಣೆ, ರಾಜಕೀಯ ಪಕ್ಷ ಎಂಬ ವಿಚಾರ ಬಂದಾಗ ಕರ್ನಾಟಕ ಮಟ್ಟಿಗೆ ಮೂರು ಮತ್ತೊಂದು ಪಕ್ಷದ ಹೆಸರು ನೆನಪಿಗೆ ಬರಬಹುದು. ಅಚ್ಚರಿ ಎಂದರೆ ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಹತ್ತಾರು ಪಕ್ಷಗಳು ಸ್ಪರ್ಧೆಗಿಳಿಯುತ್ತವೆ, ಚುನಾವಣೆ ಮುಗಿಯುತ್ತಿದ್ದಂತೆ ಹೇಳ ಹೆಸರಿಲ್ಲದಂತಾಗುತ್ತವೆ. ಕಳೆದ ಐದು ಚುನಾವಣೆ ಲೆಕ್ಕಾಚಾರ ಗಮನಿಸಿದರೆ 180 ಪಕ್ಷಗಳು ಒಂದೋ ಎರಡೋ ಚುನಾವಣೆಯಲ್ಲಿ ಸ್ಪರ್ಧಿಸಿ ಗಂಟುಮೂಟೆ ಕಟ್ಟಿವೆ. ಇದೇ ವೇಳೆ 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಹೊಸ ಪಕ್ಷಗಳ ಸ್ಪರ್ಧೆ ಗಣನೀಯವಾಗಿ ಹೆಚ್ಚಳವಾಗುವ ಲಕ್ಷಣವೂ ಇದೆ.
ಪಕ್ಷಗಳ ವ್ಯವಸ್ಥೆಯ ವಿಷಯಕ್ಕೆ ಬಂದರೆ, ಪಕ್ಷಗಳನ್ನು ನಾಲ್ಕು ವಿಧವಾಗಿ ವಿಂಗಡಿಸಬಹುದು. ರಾಷ್ಟ್ರೀಯ ಪಕ್ಷ, ಪ್ರಾದೇಶಿಕ ಪಕ್ಷ ಅಥವಾ ರಾಜ್ಯ ಪಕ್ಷ, ಇತರೆ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ರಾಜ್ಯ ಪಕ್ಷ, ನೋಂದಾಯಿತ (ಮಾನ್ಯತೆ ಪಡೆಯದ) ಪಕ್ಷಗಳು ಎಂಬ ಬಗೆ ಇದೆ. ರಾಷ್ಟ್ರೀಯ ಪಕ್ಷ, ರಾಜ್ಯ ಪಕ್ಷಗಳ ಪಟ್ಟಿಗೆ ಸೇರಲು ನಿರ್ದಿಷ್ಟ ಮಾನದಂಡವಿದ್ದು, ನಿಗದಿತ ಪ್ರಮಾಣದಲ್ಲಿ ಮತ ಪಡೆಯಬೇಕಿರುತ್ತದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ 2018ರ ವಿಧಾನಸಭೆಯಲ್ಲಿ ಒಟ್ಟು 83 ಪಕ್ಷಗಳು ಸ್ಪರ್ಧಿಸಿದ್ದವು. ಇದು ಅಚ್ಚರಿ ಎನಿಸಿದರೂ ನಂಬಲೇ ಬೇಕು. ಚುನಾವಣಾ ಆಯೋಗದ ಮಾಹಿತಿ ಇದನ್ನು ದೃಢೀಕರಿಸಿದೆ. ಈ 83 ಪಕ್ಷಗಳಲ್ಲಿ ಆರು ರಾಷ್ಟ್ರೀಯ ಪಕ್ಷಗಳು, ಸ್ಟೇಟ್ ಪಾರ್ಟಿ ಒಂದು, ಇತರೆ ರಾಜ್ಯಗಳಲ್ಲಿನ ಸ್ಟೇಟ್ ಪಾರ್ಟಿ ಆರು, ನೋಂದಾಯಿತ ಆದರೆ, ಮಾನ್ಯತೆ ಪಡೆಯದ ಪಕ್ಷಗಳು 69.
ಭಾರತೀಯ ಜನತಾ ಪಕ್ಷ, ಬಹುಜನ ಸಮಾಜ ಪಕ್ಷ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್​ವಾದಿ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಎನ್​ಸಿಪಿ (ರಾಷ್ಟ್ರೀಯವಾದಿ ನ್ಯಾಷನಲ್ ಕಾಂಗ್ರೆಸ್ ಪಕ್ಷ) ರಾಷ್ಟ್ರೀಯ ಪಕ್ಷಗಳ ಪಟ್ಟಿಯಲ್ಲಿ ಸೇರಿದರೆ, ಜನತಾ ದಳ (ಜಾತ್ಯತೀತ) ರಾಜ್ಯಪಟ್ಟಿಯಲ್ಲಿದೆ. ಉಳಿದಂತೆ ಆಮ್ ಆದ್ಮಿ ಪಕ್ಷ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಜನತಾ ದಳ (ಯುನೈಟೆಡ್), ಶಿವಸೇನೆ, ಸಮಾಜವಾದಿ ಪಕ್ಷ ಇತರೆ ರಾಜ್ಯಗಳಲ್ಲಿ ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದಿವೆ.
2018ರಲ್ಲಿ ಚಲಾವಣೆಯಾದ 3,66,27,978 ಮತಗಳ ಪೈಕಿ, ರಾಷ್ಟ್ರೀಯ ಪಕ್ಷಗಳು ಮತ್ತು ಜೆಡಿಎಸ್ ಪಾಲು ಶೇ.93.18ರಷ್ಟಿತ್ತು. ಇನ್ನುಳಿದ ಅಂದರೆ ಶೇ.6.82ರಷ್ಟು ಮತಗಳನ್ನು ಉಳಿದೆಲ್ಲ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಪಡೆದುಕೊಂಡಿದ್ದಾರೆ. 2013ರ ಚುನಾವಣೆಯಲ್ಲಿ ಒಟ್ಟು 59 ಪಕ್ಷಗಳು ಸ್ಪರ್ಧಿಸಿದ್ದವು. ರಾಷ್ಟ್ರೀಯ ಪಕ್ಷ, ಮಾನ್ಯತೆ ಪಡೆದ ಪಕ್ಷಗಳು ಶೇ.78.56 ಮತ ಪಡೆದಿದ್ದರೆ, ಪಕ್ಷೇತರ ಅಭ್ಯರ್ಥಿಗಳು ಶೇ.7.38ರಷ್ಟು ಮತ ಪಡೆದಿದ್ದರು.
ಕಾಯಂ ಸ್ಪರ್ಧೆ:ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹೊರತಾಗಿ ರಾಜ್ಯದಲ್ಲಿ ಕಾಣಿಸಿ ಕೊಳ್ಳುವ ಇತರ ಪಕ್ಷಗಳೆಂದರೆ ಉತ್ತರಪ್ರದೇಶದಲ್ಲಿ ಪ್ರಭಾವ ಹೊಂದಿರುವ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ಸಿಪಿಐ, ಸಿಪಿಎಂ. ಇದರೊಟ್ಟಿಗೆ ಡಿಎಂಕೆ, ಆರ್​ಪಿಐ, ಎನ್​ಸಿಪಿ, ಶಿವಸೇನ ಕೂಡ ಆಗಾಗ್ಗೆ ಪ್ರಯತ್ನ ಮಾಡಿದ್ದಿದೆ. ಎಲ್ಲ ಕ್ಷೇತ್ರಗಳಲ್ಲೂ ಇವರ ಸ್ಪರ್ಧೆ ಇರುವುದಿಲ್ಲ, ಒಂದೋ ಎರಡು ಕಡೆ ಸ್ಪರ್ಧಿಸುವ ಕಾರಣ ಆ ಹೆಸರುಗಳು ಚುನಾವಣೆ ಆಯೋಗದ ದಾಖಲೆಯಲ್ಲಿ ಉಳಿದುಹೋಗುತ್ತಿದೆ.
ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಬಂದ್; ಈಗ ಕ್ರೇನ್​ ಕಾರ್ಯಕ್ಕೂ ನಿರ್ಬಂಧ: ಎಲ್ಲಿ, ಏಕೆ, ಯಾವಾಗ?

ರಾಜ್ಯಕ್ಕೆ ಎದುರಾಗಿದೆ ಒಂದು ಹೊಸ ಆತಂಕ; ಸರ್ಕಾರದ ಮೊರೆ ಹೋದ ರೇಡಿಯಾಲಜಿ ಇಮೇಜಿಂಗ್ ಅಧಿಕಾರಿಗಳ ಸಂಘ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
