ಬೆಂಗಳೂರು:ವಲಸೆ ಕಾರ್ವಿುಕರನ್ನು ಊರುಗಳಿಗೆ ಕಳುಹಿಸುವ ವಿಚಾರದಲ್ಲೂ ಆಡಳಿತ ಹಾಗೂ ವಿರೋಧ ಪಕ್ಷಗಳ ರಾಜಕೀಯ ಮೇಲಾಟ ಜೋರಾಗಿದೆ. ಭಾನುವಾರ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ತೆರಳಿದ ಕಾಂಗ್ರೆಸ್ ನಾಯಕರ ನಿಯೋಗ ಅಲ್ಲಿ ಕಾರ್ವಿುಕರ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಿತು. ಮತ್ತೊಂದೆಡೆ ಕಾರ್ವಿುಕರ ಪ್ರಯಾಣಕ್ಕಾಗಿ ಕೆಪಿಸಿಸಿಯಿಂದ ಕೊಟ್ಟ 1 ಕೋಟಿ ರೂ.ನ ಚೆಕ್ ಸ್ವೀಕರಿಸಲು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ನಿರಾಕರಿಸಿದ್ದು ಕೈ ನಾಯಕರಿಗೆ ಇರಿಸುಮುರಿಸು ಉಂಟು ಮಾಡಿತು.
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ನಿಯೋಗ ಭಾನುವಾರ ಕಾರ್ವಿುಕರನ್ನು ಕರೆದೊಯ್ಯುತ್ತಿದ್ದ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿತು. ಈ ವೇಳೆ ಡಿ.ಕೆ.ಶಿವಕುಮಾರ್ ಕಾರ್ವಿುಕರನ್ನು ಕರೆದೊಯ್ಯುವ ಖರ್ಚಿಗೆ 1 ಕೋಟಿ ರೂ. ಚೆಕ್ ನೀಡಲು ಮುಂದಾದರು. ಆದರೆ, ಚೆಕ್ ಪಡೆಯಲು ನಿರಾಕರಿಸಿದ ಕೆಎಸ್​ಆರ್​ಟಿಸಿ ಎಂಡಿ, ಸರ್ಕಾರ ಉಚಿತವಾಗಿ ಕರೆದೊಯ್ಯಲು ಹೇಳಿದೆ. ಹೀಗಾಗಿ ಹಣ ನೀಡುವ ಅಗತ್ಯವಿಲ್ಲ ಎಂದು ಹೇಳಿ ಚೆಕ್ ವಾಪಸ್ ಕೊಟ್ಟರು. ಬಳಿಕ ಆ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವುದಾಗಿ ಡಿ.ಕೆ.ಶಿವಕುಮಾರ್ ಘೋಷಿಸಿದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಇನ್ನಿತರರು ಬಸ್ ಒಳಗೆ ತೆರಳಿ ಕಾರ್ವಿುಕರ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ ಯಾರೂ ಟಿಕೆಟ್​ಗಾಗಿ ಹಣ ನೀಡದಂತೆ ಕಾರ್ವಿುಕರಿಗೆ ತಿಳಿಹೇಳಿದರು.
ಆಹಾರ ವಿತರಿಸುವಲ್ಲೂ ರಾಜಕೀಯ: ಕಾಂಗ್ರೆಸ್ ನಾಯಕರು ಬಸ್ ನಿಲ್ದಾಣಕ್ಕೆ ತೆರಳಿದಾಗ ತಮ್ಮೊಂದಿಗೆ ಆಹಾರದ ಪೊಟ್ಟಣಗಳನ್ನು ತೆಗೆದುಕೊಂಡು ಹೋಗಿದ್ದರು. ಅಲ್ಲಿದ್ದ ಕಾರ್ವಿುಕರಿಗೆ ಅದನ್ನು ನೀಡಿ ಊಟ ಮಾಡುವಂತೆ ತಿಳಿಸಿದರು. ಅದಾದ ನಂತರ ಕಾರ್ವಿುಕ ಇಲಾಖೆಯಿಂದ ಆಹಾರದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಆಹಾರ ವಿತರಿಸುತ್ತಿದ್ದವರು ‘ಕಾರ್ವಿುಕ ಇಲಾಖೆಯಿಂದ ಆಹಾರ ಕೊಡುತ್ತಿದ್ದೇವೆ. ಕಾರ್ವಿುಕರು ಇದನ್ನು ತೆಗೆದುಕೊಳ್ಳಬೇಕು’ ಎಂದು ಜೋರಾಗಿ ಕೂಗಿಕೊಳ್ಳುತ್ತಿದ್ದರು.
ಇದನ್ನೂ ಓದಿ:ಶ್ರಮಿಕ್​ ಸ್ಪೆಶಲ್​ ತೊಂದರೆಯಲ್ಲಿ ಇರುವವರಿಗೆ, ಊರಿಗೆ ಹೋಗಿ ಬರುವವರಿಗಲ್ಲ…
ಗಾಂಧಾರಿಯಾದ ಶಿವಕುಮಾರ್!ಕಾರ್ವಿುಕರ ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾರ್ವಿುಕರನ್ನು ಸುರಕ್ಷಿತವಾಗಿ ಕಳುಹಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕಾರ್ವಿುಕರ ಸಮಸ್ಯೆ ಆಲಿಸಲು ಯಾವೊಬ್ಬ ಸಚಿವರೂ ಬಂದಿಲ್ಲ. ಈ ಸರ್ಕಾರಕ್ಕೆ ಕಣ್ಣು ಇಲ್ಲ, ಕಿವಿಯೂ ಇಲ್ಲ ಎಂದು ಹೇಳಿದ ಅವರು, ಗಾಂಧಾರಿಯಂತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಮಾತನಾಡಿದರು. ಕಾರ್ವಿುಕರ ಬಳಿ ಹಣ ಪಡೆದು ಸಾರಿಗೆ ವ್ಯವಸ್ಥೆ ಮಾಡಿದ್ದು ತಪು್ಪ. ಕಾಂಗ್ರೆಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ ನಂತರ ಸರ್ಕಾರ 3 ದಿನ ಉಚಿತ ಸಾರಿಗೆ ವ್ಯವಸ್ಥೆ ಮಾಡಿದೆ. ನಾಡನ್ನು ಕಟ್ಟುವ ಕಾರ್ವಿುಕರ ಹಿತ ಕಾಯಬೇಕಾದ ಸರ್ಕಾರ ಈ ರೀತಿ ನಡೆದುಕೊಳ್ಳುತ್ತಿರುವುದು ಅಪರಾಧ. ಲೋಕಸಭೆಗೆ ರಾಜ್ಯದಿಂದ 26 ಜನ ಬಿಜೆಪಿಯವರು ಆಯ್ಕೆಯಾಗಿದ್ದಾರೆ. ಆದರೆ, ಒಂದೇ ಒಂದು ಉಚಿತ ರೈಲು ವ್ಯವಸ್ಥೆ ಮಾಡಿರುವುದು ನಾಚಿಕೆಗೇಡಿನ ವಿಚಾರ. 26 ಸಂಸದರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಮುಗಿಬಿದ್ದ ಕಾರ್ವಿುಕರು:ಕಾಂಗ್ರೆಸ್ ನಾಯಕರು ನಿಲ್ದಾಣಕ್ಕೆ ಬರುತ್ತಿದ್ದಂತೆ ಅವರ ಮೇಲೆ ಕಾರ್ವಿುಕರು ಮುಗಿಬಿದ್ದರು. ಅದರಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮಾತನಾಡಿಸಲು ಕಾರ್ವಿುಕರು ಪೈಪೋಟಿ ನಡೆಸಿದರು. ಈ ವೇಳೆ ಸಿದ್ದರಾಮಯ್ಯ, ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಿದರೂ ಕಾರ್ವಿುಕರು ಅದನ್ನು ಕೇಳುವ ಮನಸ್ಥಿತಿಯಲ್ಲಿರಲಿಲ್ಲ. ಕಾರ್ವಿುಕರನ್ನು ತಮ್ಮದೇ ಶೈಲಿಯಲ್ಲಿ ಮಾತನಾಡಿಸಿದ ಸಿದ್ದರಾಮಯ್ಯ, ‘ಏನು ಮಾಡ್ತಿದ್ದೀಯಯ್ಯ ಬೆಂಗಳೂರಲ್ಲಿ? ಊಟ ಸಿಗ್ತಿತ್ತಾ? ಊರಿಗೆ ಹೋಗಿ ಆರಾಮಾಗಿರು’ ಎಂದು ಹೇಳಿಕಳುಹಿಸಿದರು.
ಅವರು ಹೋದ ನಂತರ ಇವರು..ಕಾಂಗ್ರೆಸ್ ನಿಯೋಗ ಬಂದು ಹೋದ ನಂತರ ಸರ್ಕಾರದ ಪರವಾಗಿ ಬಸ್ ನಿಲ್ದಾಣಕ್ಕೆ ಬಂದ ಸಚಿವ ಎಸ್. ಸುರೇಶ್​ಕುಮಾರ್, ಅಲ್ಲಿನ ವ್ಯವಸ್ಥೆ ಗಮನಿಸಿದರು. ಅಲ್ಲದೆ, ಕೆಲ ಕಾರ್ವಿುಕರನ್ನು ಮಾತನಾಡಿಸಿ ಅವರ ಊರು ಮತ್ತು ಪರಿಸ್ಥಿತಿ ಬಗ್ಗೆ ತಿಳಿದುಕೊಂಡರು. ಜತೆಗೆ ಯಾವ ಊರಿನ ಕಡೆ ಹೋಗಲು ಕಾರ್ವಿುಕರು ಹೆಚ್ಚಾಗಿದ್ದಾರೆ ಎಂಬುದನ್ನು ಅರಿತು, ಅಲ್ಲಿಗೆ ಹೆಚ್ಚುವರಿ ಬಸ್ ಸಂಚಾರಕ್ಕೆ ಸೂಚಿಸಿದರು. ಬಳಿಕ ಸಂಸದ ತೇಜಸ್ವಿ ಸೂರ್ಯ ಕೂಡ ಬಸ್ ನಿಲ್ದಾಣಕ್ಕೆ ತೆರಳಿ ಕಾರ್ವಿುಕರಿಗೆ ನೀರಿನ ಬಾಟಲಿಗಳನ್ನು ಹಂಚಿದರು. ನಂತರ ರಾತ್ರಿಯ ಸುಮಾರಿಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೂಡ ನಿಲ್ದಾಣಕ್ಕೆ ತೆರಳಿ ಕಾರ್ವಿುಕರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nine =
Remember me
