ಬೆಂಗಳೂರು:ತಮ್ಮ ಪಕ್ಷವನ್ನು ತೊರೆದು ಹೋಗುತ್ತಿರುವವರ ಬಗ್ಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘‘ಪಕ್ಷ ಬಿಡುವವರು ಈಗಲೇ ರಾಜೀನಾಮೆ ಕೊಟ್ಟು ಹೋಗಿ. ಬೇಕಿದ್ದರೆ ನಾನೇ ಸನ್ಮಾನ ಮಾಡಿ, ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಕಳಿಸಿ ಕೊಡುತ್ತೇನೆ’’ ಎಂದು ಹೇಳಿದ್ದಾರೆ.
ಜೆಡಿಎಸ್‌ನಲ್ಲಿ ಲೈಮ್ ಲೈಟ್‌ಗೆ ಬಂದವರನ್ನು ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ಎರಡು, ಮೂರು ಬಾರಿ ನಮ್ಮ ಶಾಸಕರಿಗೆ ಬಲೆ ಬೀಸಿದ್ದಾರೆ ಎಂಬುದು ಗೊತ್ತಿದೆ. 3 ಜನ ಪಕ್ಷ ಬಿಟ್ಟು ಹೋದರು. ಪಕ್ಷವೇನು ಮುಳುಗಿ ಹೋಯಿತೆ? ಕಲ್ಕೆರೆ ರವಿ ಪತ್ನಿಗೆ 4 ವರ್ಷ ಜಿ.ಪಂ. ಅಧ್ಯಕ್ಷೆ ಸ್ಥಾನ ಕೊಟ್ಟು ಬೆಳೆಸಿದ್ದು ನಾವು. ಈಗ ಅವರು ಕಾಂಗ್ರೆಸ್‌ಗೆ ತಮ್ಮ ಸಾಮರ್ಥ್ಯ ಧಾರೆ ಎರೆಯಲು ಹೋಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸಾಲಮನ್ನಾ ದುರ್ಬಳಕೆ ಆಗಿದ್ರೆ ರಾಜಕೀಯ ನಿವೃತ್ತಿ: ಸಿದ್ದುಗೆ ಎಚ್‌ಡಿಕೆ ಚಾಲೆಂಜ್!

ಸಿಎಂ ಯೋಗಿ ವಿರುದ್ಧ ಕರ್ನಾಟಕ ಕಾಂಗ್ರೆಸ್​ ಮುಖಂಡನಿಂದ ಅವಹೇಳನ

ಮೊದಲೇ ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಶಾಸಕರ ಕರೊನಾ ಬಿಲ್ ಹೊರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + eleven =
Remember me
