ಬೆಂಗಳೂರು:ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ಹಿನ್ನೆಲೆ ನಮ್ಮ ರೈತರಿಗೆ ಮತ್ತು ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ ಎಂಬ ಕೂಗು ರಾಜ್ಯವ್ಯಾಪಿ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ಈ ಮಧ್ಯೆ ಕರ್ನಾಟಕ ರಕ್ಷಣ ವೇದಿಕೆ ಇಂದು ಕನ್ನಡ ಚಿತ್ರರಂಗದವರು ನಮ್ಮ ಹೋರಾಟಕ್ಕೆ ಬೆಂಬಲಿಸಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ನಟ ದರ್ಶನ್​, ಕಿಚ್ಚ ಸುದೀಪ್​ ಟ್ವೀಟ್​ ಮಾಡಿ ಬೆಂಬಲಿಸಿದರು.
ಇದನ್ನೂ ಓದಿ:Dhruva Sarja Fans In Kolar: ಕೋಲಾರದಲ್ಲಿ ಧ್ರುವ ಸರ್ಜಾ ಫ್ಯಾನ್ಸ್​ ಕ್ರೇಜ್ ನೋಡಿ…
ದರ್ಶನ್​, ಶಿವರಾಜ್​ಕುಮಾರ್​ ಮತ್ತು ಕಿಚ್ಚ ಸುದೀಪ್ ಅವರ ನಂತರದಲ್ಲಿ ವಿಡಿಯೋ ಮುಖೇನ ತಮಿಳುನಾಡಿನ ವಿರುದ್ಧ ಮುಂಗಾರು ಮಳೆ ಬೆಡಗಿ, ನಟಿ ಪೂಜಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಕಾವೇರಿ ವಿಚಾರ ಕುರಿತು ಮಾತನಾಡಿದ ನಟಿ, “175 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿಯಿದೆ. ಟ್ರಿಬ್ಯುನಲ್​ ಸದಸ್ಯರನ್ನು ಕೆಆರ್​ಎಸ್​​ಗೆ ಭೇಟಿ ನೀಡುವಂತೆ ತಿಳಿಸಬೇಕು. ಮುಳುಗುವಷ್ಟು ನೀರು ಇದೆಯಾ ಎಂಬುದನ್ನು ನೋಡಲು ಅವರಿಗೆ ಹೇಳಬೇಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲಿಗೆ ನೀಡುತ್ತಿರುವ ಹಣ ಕಟ್ಟ ಕಡೆಯ ವ್ಯಕ್ತಿಗೂ ತಲುಪಲಿ/ ಕೆ.ಹೆಚ್.ಮುನಿಯಪ್ಪ
“ಡ್ಯಾಮ್​ ಇರುವ ಮಂಡ್ಯ ಜಿಲ್ಲೆಗೆ ಕುಡಿಯಲು ನೀರಿಲ್ಲ. ಇದೆಲ್ಲಾ ಅವರಿಗೆ ಅರ್ಥ ಆಗುತ್ತಿಲ್ಲವೇ? ಕರ್ನಾಟಕ ಸರ್ಕಾರ ಗಟ್ಟಿಯಾಗಿ ನಿರ್ಧಾರ ತೆಗೆದುಕೊಳ್ಳಲಿ, ನೀರು ಬಿಡುವುದನ್ನು ನಿಲ್ಲಿಸಲಿ” ಎಂದು ನಟಿ ಪೂಜಾ ಗಾಂಧಿ ವಿಡಿಯೋದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:VIDEO | ಗಣಪತಿ ದರ್ಶನಕ್ಕೆಂದು ಅಂಬಾನಿ ಮನೆಗೆ ಬಂದ ದಿಶಾ; ನಟಿಯ ಲುಕ್ ನೋಡಿ ತರಾಟೆಗೆ ತೆಗೆದುಕೊಂಡ ನೆಟ್ಟಿಗರು
ಕಾವೇರಿ ವಿಚಾರ ಕುರಿತಂತೆ ಮಾತನಾಡಿದ ಸ್ಯಾಂಡಲ್​ವುಡ್​ನ ಹಿರಿಯ ನಟ ಶಿವರಾಜ್​ಕುಮಾರ್​, “ನಮ್ಮ ರಾಜ್ಯದಲ್ಲಿ ಈ ಬಾರಿ ಮಳೆ ಕಡಿಮೆಯಾಗಿ ರೈತರು ಕಂಗಾಲಾಗಿದ್ದಾರೆ. ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗುವ ಭೀತಿಯಿದೆ. ಈ ಸ್ಥಿತಿಯನ್ನು ರಾಜ್ಯ ಸರ್ಕಾರ ಸುಪ್ರೀಂ‌ಕೋರ್ಟ್​​ಗೆ ಮನವರಿಕೆ ಮಾಡಬೇಕು, ನ್ಯಾಯಾಲಯ ನಮ್ನ ಪರಿಸ್ಥಿಯನ್ನು ಅವಲೋಕಿಸಿ ತೀರ್ಪು ನೀಡಬೇಕು” ಎಂದು ಹೇಳಿದ್ದಾರೆ.

ಕಾಂಗ್ರೆಸ್​ ಚುನಾವಣಾ ರೇಸ್​ನಲ್ಲಿಲ್ಲ, ಸಾರ್ವಜನಿಕರ ಕೆಂಗಣ್ಣಿಗೆ ಮಾತ್ರ ಗುರಿಯಾಗಿದೆ: ಸಿಎಂ ಶಿವರಾಜ್ ಸಿಂಗ್ ಚೌಹಾಣ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 12 =
Remember me
