ಬೆಂಗಳೂರು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನ-3ರ ಆರಂಭದಲ್ಲೇ ತಿರುಮಲ ತಿರುಪತಿಯ ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಲಾಗಿತ್ತು.
ತಿರುಪತಿಯಲ್ಲಿ ನಡೆದ ಪೂಜೆಯಲ್ಲಿ ಇಸ್ರೋದ ಇಂಜಿನಿಯರ್​ಗಳು ಪಾಲ್ಗೊಂಡಿದ್ದರು. ಆ ಬಳಿಕ ನಾಗರಪಂಚಮಿಯಂದು ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೂಡ ದೇವಸ್ಥಾನದವರೇ ಪೂಜೆ ಮಾಡಿ ಇಸ್ರೋಗೆ ಶುಭ ಹಾರೈಸಿದ್ದರು.
ನಿನ್ನೆ ಹಾಗೂ ಇಂದು ಬೆಳಗಿನಿಂದ ಹಲವು ದೇವಸ್ಥಾನಗಳಲ್ಲಿ ಹಾಗೂ ಜನರು ಕೂಡ ತಮ್ಮ ಮನೆಗಳಲ್ಲಿ ಪೂಜೆ ಮಾಡಿ ಶುಭ ಹಾರೈಸುತ್ತಿದ್ದಾರೆ. ಈ ಮಧ್ಯೆ ನಿನ್ನೆ ಇಸ್ರೋ ಅಧ್ಯಕ್ಷ ಸೋಮನಾಥ್ ಮತ್ತಿತರರು ಬೆಂಗಳೂರಿನ ಜಾಲಹಳ್ಳಿಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು.
ತಮ್ಮ ಸಹೋದ್ಯೋಗಿಗಳ ಜತೆ ನಿನ್ನೆ ಸಂಜೆ ಅಲ್ಲಿಗೆ ತೆರಳಿದ್ದ ಸೋಮನಾಥ್, ಚಂದ್ರಯಾನ-3ರ ಸಾಫ್ಟ್​ ಲ್ಯಾಂಡಿಂಗ್​ ಸುಗಮವಾಗಿ ಆಗಲಿ ಎಂದು ಶ್ರೀಅಯ್ಯಪ್ಪ ಸ್ವಾಮಿಯಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡಿದ್ದರು.
ಚಂದ್ರಯಾನವೂ, ಇಸ್ರೋ ಅಧ್ಯಕ್ಷರೂ..; ಹೀಗೊಂದು ಕಾಕತಾಳೀಯ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
