ಬೆಂಗಳೂರು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ ಸಂದರ್ಭದಲ್ಲಿ ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಿ, ಪ್ರಾರ್ಥನೆ ಸಲ್ಲಿಸಿ ಮುಂದುವರಿಯವುದನ್ನು ಒಂದು ಪದ್ಧತಿಯಂತೆ ಅನುಸರಿಸಿಕೊಂಡು ಬಂದಿದೆ.
ಅದೇ ರೀತಿ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲೂ ಇಂದು ಪೂಜೆ ಸಲ್ಲಿಸಲಾಗಿದೆ. ಚಂದ್ರಯಾನ 3 ಸಲುವಾಗಿ ಶುಭ ಹಾರೈಸಿ ಪೂಜೆ ಮಾಡಲಾಗಿರುವ ಕುರಿತು ಸೇವೆಯ ಚೀಟಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲು ಆರಂಭಿಸಿದೆ. ಮಾತ್ರವಲ್ಲ, ಈ ಕುರಿತು ದೇವಸ್ಥಾನದ ಸೋಷಿಯಲ್ ಮೀಡಿಯಾದಲ್ಲೂ ಸೇವೆಯ ಚೀಟಿ ಸಹಿತ ಶುಭಾಶಯ ಕೋರಲಾಗಿದೆ.
ಇದನ್ನೂ ಓದಿ:ರಷ್ಯಾದ ಚಂದ್ರಯಾನ ವಿಫಲ; ತಾಂತ್ರಿಕ ದೋಷಕ್ಕೆ ಒಳಗಾಗಿ ಲೂನಾ-25 ಪತನ
‘ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ನಮ್ಮ ಹೆಮ್ಮೆಯ ಇಸ್ರೋ ಸಂಸ್ಥೆಯ ಚಂದ್ರಯಾನ 3 ನೌಕೆಯು ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಇತಿಹಾಸ ನಿರ್ಮಿಸಲಿ ಮತ್ತು ಇದರೊಂದಿಗೆ ತಾಯಿ ಭಾರತೀಯ ಹೆಸರು ಪ್ರಪಂಚದಲ್ಲೇ ಅಗ್ರಗಣ್ಯವಾಗಲಿ ಎಂದು ಪಂಚಮಿಯ ದಿನವಾದ ಇಂದು ಶ್ರೀ ನಾಗದೇವರಿಗೆ ಹಾಲೆರೆದು ನಾಗ ತಂಬಿಲ (ಕಾರ್ತೀಕ ಪೂಜೆ) ನಡೆಸಿ ಮತ್ತು ಶ್ರೀ ಪುರದೊಡೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯನಲ್ಲಿ ಆಡಳಿತ ಮಂಡಳಿ ಮತ್ತು ಊರ ಹಿರಿಯರೊಂದಿಗೆ ಸೇರಿ ಪ್ರಾರ್ಥಿಸಲಾಯಿತು’ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದೆ.
ಚಂದ್ರನಿಂದ ಬಂದ ಮೊದಲ ಚಿತ್ರ ಎಂದು ‘ಚಾಯ್​ವಾಲಾ’ನ ಫೋಟೋ ಹಂಚಿಕೊಂಡ ನಟ ಪ್ರಕಾಶ್ ರಾಜ್!

ಆಣೆ ಮಾಡುವ ಹಂತಕ್ಕೆ ತಲುಪಿತು ಸೌಜನ್ಯಾ ಪ್ರಕರಣ; ಇಬ್ಬರ ಮಧ್ಯೆ ಆರೋಪ, ದೇವರ ಮುಂದೆ ಪ್ರಮಾಣ!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:nineteen − one =
Remember me
