ಬೆಂಗಳೂರು: ಕರೊನಾ ಸೋಂಕು ಲಕ್ಷಣ ಹೊಂದಿದ ಬಹುತೇಕರಿಗೆ ಆರ್​ಟಿಪಿಸಿಅರ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದರೂ ಸಿಟಿ ಸ್ಕಾನಿಂಗ್​ನಲ್ಲಿ ಪಾಸಿಟಿವ್ ಬರುತ್ತಿರುವುದರಿಂದ ಖಾಸಗಿ ಪ್ರಯೋಗಾಲಯಗಳಿಗೆ ಭಾರಿ ಬೇಡಿಕೆ ಬಂದಿದೆ. ಇದೇ ಸಂದರ್ಭದಲ್ಲಿ ಅಗತ್ಯ ಇಲ್ಲದವರಿಗೂ ಸಿಟಿ ಸ್ಕ್ಯಾನ್ ಮಾಡಿಸುವ ಅನಿವಾರ್ಯತೆ ಸೃಷ್ಟಿಸುತ್ತಿರುವುದು ಬಡವರಿಗೆ ಬರೆ ಎಳೆದಿದೆ.
ಕರೊನಾ ಸೋಂಕು ಲಕ್ಷಣ ಇದ್ದವರಿಗೆ ಆಸ್ಪತ್ರೆಗೆ ದಾಖಲಾಗಲು ಪಾಸಿಟಿವ್ ವರದಿ ಅಗತ್ಯ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕಾ್ಯನಿಂಗ್ ಸವಲತ್ತು ಸೀಮಿತವಾಗಿದೆ. ಹೀಗಾಗಿ ಬಹುತೇಕರು ದುಬಾರಿ ದರ ತೆತ್ತು ಖಾಸಗಿ ಪ್ರಯೋಗಾಲಯಗಳ ಮೊರೆ ಹೋಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳು ಅಗತ್ಯವಿಲ್ಲದ ರೋಗಿಗಳಿಗೂ ಸ್ಕಾ್ಯನಿಂಗ್ ಅನಿವಾರ್ಯತೆ ಇದೆ ಎಂದು ನಂಬಿಸಿ ಹೆಚ್ಚಿನ ದರ ನಿಗದಿಪಡಿಸಿ ಸುಲಿಗೆಗಿಳಿದಿದ್ದಾರೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕಾ್ಯನಿಂಗ್ ವ್ಯವಸ್ಥೆ ಇದ್ದರೂ ಬಹುತೇಕ ಕಡೆ ಒಳರೋಗಿಗಳಿಗಷ್ಟೇ ಸೀಮಿತವಾಗಿದೆ. ಕರೊನಾ ಸೋಂಕು ಲಕ್ಷಣ ಇರುವವರ ದೇಹಸ್ಥಿತಿ ಆಧರಿಸಿ ವೈದ್ಯರು ಸಿಟಿ ಸ್ಕಾ್ಯನ್​ಗೆ ಸೂಚಿಸುತ್ತಿದ್ದಾರೆ. ಕರೊನಾ ವೈರಸ್ ರೂಪಾಂತರವಾಗಿರುವುದರಿಂದ ಆರ್​ಟಿಪಿಸಿಆರ್ ಟೆಸ್ಟ್
ನಲ್ಲಿ ಬಹುತೇಕರಿಗೆ ವರದಿ ನೆಗೆಟಿವ್ ಬರುತ್ತಿರುವುದರಿಂದ ಅವರು ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಸಿಟಿ ಸ್ಕಾ್ಯನ್ ಮಾಡಿಸಿಕೊಳ್ಳಬೇಕು. ಖಾಸಗಿಯಲ್ಲಿ ಪರೀಕ್ಷೆ ಮಾಡಿಸಲು 5 ರಿಂದ 8 ಸಾವಿರ ರೂ.ವರೆಗೂ ದರ ಪಡೆಯುವುದರಿಂದ ಬಡವರು, ಸಾಮಾನ್ಯ ಜನರು ಚಿಂತೆಗೀಡಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
