ಹಾವೇರಿ:ಅಂಗನವಾಡಿ ಮಕ್ಕಳಿಗೆ ನೀಡುತ್ತಿರುವ ಅನ್ನ ಸಾಂಬರ್ ಹೊರತುಪಡಿಸಿ ಪ್ಯಾಕೆಟ್ ಗಳಲ್ಲಿ ಪೂರೈಕೆ ಮಾಡುವ ಆಹಾರ ಪದಾರ್ಥಗಳು ತೀರ ಕಳಪೆ ಗುಣಮಟ್ಟದಿಂದ ಕೂಡಿವೆ. ಅಂಗನವಾಡಿ ಮಕ್ಕಳಿಗೆ ಕೊಟ್ಟ ಕಳಪೆ ಬೆಲ್ಲ ನೋಡಿ  ಪಾಲಕರು ಕಂಗಾಲಾಗಿದ್ದಾರೆ.
ಅಂಗನವಾಡಿ ಮಕ್ಕಳ ಬಳಕೆಗಾಗಿ ಮನೆಗೆ ಕೊಡುವ ಬೆಲ್ಲ ನೋಡಿದರೆ ವಾಕರಿಕೆ ಬರೋದು ಗ್ಯಾರಂಟಿ. ಅಷ್ಟೊಂದು ಕಳಪೆ ಮಟ್ಟದ  ಬೆಲ್ಲವನ್ನು ನೀಡಲಾಗುತ್ತಿದೆ.  6 ತಿಂಗಳಿಂದ 3 ವರ್ಷದ ಮಕ್ಕಳಿಗೆ ಕೊಡುವ ಬೆಲ್ಲ ನೋಡಿ ಬೆರಗಾದ ಪಾಲಕರು ಇದೇನು ಬೆಲ್ಲನೋ? ಸಾವಯವ ಗೊಬ್ಬರಾನೋ? ಎಂದು  ಪೋಷಕರು ಪ್ರಶ್ನೆ ಮಾಡುತ್ತಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹಾ ಎಡವಟ್ಟಿನಿಂದಾಗಿ ಮಕ್ಕಳಿಗೆ ಕೊಡುವ ಪುಷ್ಟಿ ಪೌಷ್ಟಿಕ ಆಹಾರ ಇತ್ತ ಧನಕರುಗಳ ಪಾಲಾಗುತ್ತಿದೆ.  6 ತಿಂಗಳಿಂದ 3 ವರ್ಷದ ಮಕ್ಕಳಿಗೆ ಕೊಡುವ ಪುಷ್ಟಿ ಪೌಷ್ಟಿಕ ಆಹಾರ ಧನಕರುಗಳಿಗೆ ಇಡುತ್ತಿರುವ ಪಾಲಕರು ಇವರು ಕೊಡುವ ಪುಷ್ಟಿ ಪೌಡರ್ ದನ ಕರುಗಳು ಮಾತ್ರ ತಿನ್ನೋಕೆ ಸಾಧ್ಯ. ಮಕ್ಕಳು ತಿನ್ನೋಕೆ ಇಷ್ಟ ಪಡಲ್ಲ ಎಂದು ಪಾಲಕರು ಹೇಳುತ್ತಿದ್ದಾರೆ.
ಪುಷ್ಟಿ ಪೌಡರ್ ನಲ್ಲಿ ಲಾಡು ಮಾಡಿ ತಿನ್ನಿಸಿದರೆ ಮಕ್ಕಳು ತಿನ್ನಲ್ಲ. ಅಜೀರ್ಣ ಸಮಸ್ಯೆ ಉಂಟಾಗುತ್ತಿದೆ. ಪುಷ್ಟಿ ಪೌಡರ್ ಹಸು, ಎಮ್ಮೆ, ಎತ್ತುಗಳಿಗೆ ನೀಡಲಾಗುತ್ತಿದೆ.  ಮಕ್ಕಳಿಗೆ ಹೊಟ್ಟೆ ಉಬ್ಬರ, ಹೊಟ್ಟೆ ನೋವು ಬರುತ್ತೆ ಅಂತಿರೋ ಎನ್ನುತ್ತಿರುವ ಪೋಷಕರು ಬೆಲ್ಲ, ಪುಷ್ಟಿ ಪೌಡರ್ ಬದಲು ಒಳ್ಳೆಯ ಆಹಾರ ಪದಾರ್ಥಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ‌.

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:eighteen − 12 =
Remember me
