ಮೈಸೂರು:ಕೂಲಿಕಾರ್ವಿುಕರೊಬ್ಬರ ಬ್ಯಾಂಕ್ ಖಾತೆಗೆ ತಪ್ಪಾಗಿ ವರ್ಗಾವಣೆಗೊಂಡಿದ್ದ 20 ಸಾವಿರ ರೂ.ಗಳನ್ನು ಅವರಿಂದ ಹಿಂದಕ್ಕೆ ಪಡೆಯುವ ಅವಕಾಶವಿದ್ದರೂ ಆತನ ಪರಿಸ್ಥಿತಿಯನ್ನು ಗಮನಿಸಿ, ಹಣವನ್ನು ಅವರಿಗೇ ನೀಡಿದ ಅಪರೂಪದ ಪ್ರಸಂಗ ನಡೆದಿದೆ. ನಗರದ ಹರ್ಷವರ್ಧನ್​ಗೌಡ ಏ.21ರಂದು ಖಾತೆಯೊಂದಕ್ಕೆ 20 ಸಾವಿರ ರೂ. ವರ್ಗಾವಣೆ ಮಾಡಬೇಕಿತ್ತು. ಒಂದು ಸಂಖ್ಯೆ ತಪ್ಪಾಗಿದ್ದರಿಂದ ಎಸ್.ವಿ.ರಾಚಪ್ಪ ಎಂಬುವರ ಖಾತೆಗೆ ಹಣ ವರ್ಗಾವಣೆಗೊಂಡಿತ್ತು. ಬಳಿಕ ತಪ್ಪಿನ ಅರಿವಾಗಿ ಸಂಬಂಧಪಟ್ಟ ಬ್ಯಾಂಕ್ ಶಾಖೆ ಪ್ರಬಂಧಕರನ್ನು ಸಂರ್ಪಸಿ, ಆ ಖಾತೆಯ ಗ್ರಾಹಕ ಎಸ್.ವಿ.ರಾಚಪ್ಪ ದೂರವಾಣಿ ಸಂಖ್ಯೆ ತೆಗೆದುಕೊಂಡು ಕರೆ ಮಾಡಿದ್ದಾರೆ. ಅವರು ಮೂಲತಃ ಶಿವಮೊಗ್ಗದವರಾಗಿದ್ದು, ತಮಿಳುನಾಡಿನ ಗಡಿ ಕೃಷ್ಣಗಿರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಕೂಡಲೇ ಹರ್ಷವರ್ಧನ್​ಗೌಡ ತಮ್ಮ ಸ್ನೇಹಿತರನ್ನು ಕೃಷ್ಣಗಿರಿಗೆ ಕಳುಹಿಸಿದರು. ಆ ವೇಳೆ ರಾಚಪ್ಪ, ‘ನನ್ನ ಖಾತೆಗೆ ಹಣ ಸಂದಾಯವಾಗಿರುವ ವಿಷಯ ಗೊತ್ತೇ ಇಲ್ಲ. ನಿಮ್ಮ ಹಣವನ್ನು ವಾಪಸ್ ತೆಗೆದುಕೊಳ್ಳಿ’ ಎಂದು ಹೇಳಿ ಹಣ ಡ್ರಾ ಮಾಡಿ ಹಿಂದಿರುಗಿಸಿದರು. ಹಣ ಪಡೆದ ಹರ್ಷವರ್ಧನ್ ಸ್ನೇಹಿತರು, ರಾಚಪ್ಪರ ಮನೆ ಪರಿಸ್ಥಿತಿಯನ್ನು ತಿಳಿದು ಮತ್ತು ಅವರು ತೀವ್ರ ಕಷ್ಟದಲ್ಲಿರುವುದನ್ನು ಗಮನಿಸಿ, ಆ ಸಂಗತಿಯನ್ನು ಹರ್ಷವರ್ಧನ್​ಗೆ ತಿಳಿಸಿದರು. ಅದಕ್ಕೆ ಸ್ಪಂದಿಸಿದ ಅವರು, ‘ಅಷ್ಟೂ ಹಣವನ್ನು ರಾಚಪ್ಪಗೆ ವಾಪಸ್ ಕೊಟ್ಟುಬಿಡಿ, ಅವರಿಗೆ ನಮ್ಮ ಕೈಲಾದ ಸಹಾಯ ಮಾಡಿದಂತಾಗುತ್ತದೆ’ ಎಂದುಹೇಳಿ ಮಾನವೀಯತೆ ಮೆರೆದಿದ್ದಾರೆ.
ಸಾಯುವವನು ಎಲ್ಲಿ ಬೇಕಾದ್ರೂ ಸಾಯಲಿ, ನಾನು ಇಲ್ಲಿ ಕೋವಿಡ್ ಸೆಂಟರ್ ತೆರೆಯಲ್ಲ: ಬಿಜೆಪಿ ಶಾಸಕರ ಖಡಾಖಂಡಿತ ಮಾತು

ಒಂದೇ ಮನೆಯ ನಾಲ್ವರು ಕರೊನಾಗೆ ಬಲಿ; 2- 3 ದಿನಗಳ ಅಂತರದಲ್ಲಿ ಇಬ್ಬಿಬ್ಬರ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 13 =
Remember me
