ರಾಜ್ಯದಲ್ಲೂ ಕರೊನಾ ಸೋಂಕಿತರ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಆದರೆ ರೋಗಿಗಳು ಹೆಚ್ಚಿದಂತೆ ಅವರಿಗೆ ಸಿಗುವ ಸವಲತ್ತುಗಳಲ್ಲಿ ವ್ಯತ್ಯಯವಾಗುತ್ತಿದೆ. ಕೋವಿಡ್ ಕೇರ್ ಸೆಂಟರ್​ಗಳು ಅವ್ಯವಸ್ಥೆಯ ಆಗರಗಳಾಗುತ್ತಿದ್ದು, ಸ್ವಚ್ಛತೆ ಮರೀಚಿಕೆಯಾಗಿದೆ. ರೋಗಿಗಳಿಗೆ ಗುಣಮಟ್ಟದ ಆಹಾರ ಸಿಗುತ್ತಿಲ್ಲ. ವೆಂಟಿಲೇಟರ್, ಆಕ್ಸಿಜನ್, ಹಾಸಿಗೆ ಕೊರತೆ ಸಾಮಾನ್ಯ ಎನ್ನುವಂತಾಗಿದ್ದು, ಕೆಲವೆಡೆ ಸೋಂಕಿತರ ಸುಲಿಗೆಯೂ ನಡೆಯುತ್ತಿದೆ. ಇನ್ನೂ ಕೆಲವೆಡೆ ನೆಪಮಾತ್ರಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು, ಕರೊನಾ ಹೆಸರಲ್ಲಿ ಲೂಟಿ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ವಿಜಯವಾಣಿ ರಿಯಾಲಿಟಿ ಚೆಕ್ ನಡೆಸಿ ವಾಸ್ತವ ಬಿಚ್ಚಿಡುವ ಪ್ರಯತ್ನ ನಡೆಸಿದ್ದು, ಯಾವ ಜಿಲ್ಲೆಯಲ್ಲಿ ಏನು ಪರಿಸ್ಥಿತಿ ಇದೆ ಎಂಬ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.
ಕೆಲ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಆಕ್ಸಿಜನ್ ಮತ್ತು ಹಾಸಿಗೆ ಕೊರತೆ ಖಾಸಗಿ ಆಸ್ಪತ್ರೆಗಳು ಈವರೆಗೆ ಶೇ.50 ಹಾಸಿಗೆ ಬಿಟ್ಟುಕೊಟ್ಟಿಲ್ಲ ಕೆಲ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಇತರೆ ಸಿಬ್ಬಂದಿಯಿಂದ ಹಣಕ್ಕೆ ಬೇಡಿಕೆ ಖಾಸಗಿ ಆಸ್ಪತ್ರೆಗೆ ಕಳುಹಿಸಲು ಬಿಬಿಎಂಪಿ ಸಿಬ್ಬಂದಿಯಿಂದ ಹಣ ವಸೂಲಿ
ಬಾಗಲಕೋಟೆರೋಗಿಗಳ ಆರೈಕೆಯಲ್ಲಿ ಕಾಳಜಿಯಿಲ್ಲ, ಕಾಟಾಚಾರಕ್ಕೆ ಚಿಕಿತ್ಸೆ ಹಾಸಿಗೆ, ಒಳಾಂಗಣದಲ್ಲಿ ಸ್ವಚ್ಛತೆ ಕೊರತೆ ಪ್ರತಿನಿತ್ಯ ಸೋಂಕಿನಿಂದ ಸಾವಿಗೀಡಾದವರ ವರದಿ ಕೊಡುತ್ತಿಲ್ಲ
ಕಲಬುರಗಿಜಿಮ್ಸ್ ಹಾಗೂ ಇಎಸ್​ಐಸಿ ಸೂಕ್ತ ಚಿಕಿತ್ಸೆಯಿಲ್ಲ, ಬಿಸಿನೀರು ಕೊಡುತ್ತಿಲ್ಲ ವೈದ್ಯರು ಸಕಾಲಕ್ಕೆ ಬರುವುದಿಲ್ಲ, ಬಂದರೂ ಸರಿಯಾಗಿ ಸ್ಪಂದಿಸುವುದಿಲ್ಲ
ಯಾದಗಿರಿಸಕಾಲಕ್ಕೆ ವೈದ್ಯರ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಆಕ್ಸಿಜನ್ ಕೊರತೆ
ಬೀದರ್ಬ್ರಿಮ್ಸ್ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ 65 ವೆಂಟಿಲೇಟರ್​ಗಳಿದ್ದು, ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ
ಉತ್ತರ ಕನ್ನಡಜಿಲ್ಲೆಯ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಲಭ್ಯವಾಗುತ್ತಿದೆ. ಸ್ವಚ್ಛತೆ ಮತ್ತು ಸೌಕರ್ಯ ಕೊರತೆ, ಸರಿಯಾದ ಸಮಯಕ್ಕೆ ಊಟ ಸಿಗುವುದಿಲ್ಲ
ಹಾವೇರಿಸೋಂಕಿತರಿಗೆ ಮಾತ್ರೆ ನೀಡಿದರೆ, ಮತ್ತೆ ಯಾರೊಬ್ಬರೂ ಬರುವುದಿಲ್ಲ.
ದಾವಣಗೆರೆವೆಂಟಿಲೇಟರ್​ಗಳ ಕೊರತೆ. ತಂತ್ರಜ್ಞರು ಇಲ್ಲ, ಸಿಬ್ಬಂದಿ ಕೊರತೆ ಕೋವಿಡ್ ಆರೈಕೆ ಕೇಂದ್ರದಲ್ಲಿ ಮೂಲ ಸೌಕರ್ಯಗಳಿಗೆ ಕೊರತೆ
ದಕ್ಷಿಣ ಕನ್ನಡಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಸಾಕಷ್ಟು ಹಾಸಿಗೆ ಲಭ್ಯವಿದ್ದು, ಸೂಕ್ತ ಚಿಕಿತ್ಸೆ ಲಭ್ಯವಿದೆ
ಉಡುಪಿಸೋಂಕಿತರ ಚಿಕಿತ್ಸೆ ಮತ್ತು ಆರೈಕೆಯಲ್ಲಿ ಸಮಸ್ಯೆ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಶುಲ್ಕ ಪಡೆಯುತ್ತಿರುವ ಆರೋಪವಿದೆ.
ಚಿಕ್ಕಮಗಳೂರುಕೋವಿಡ್ ರೋಗಿಗಳಿಗೆ ಇತರೆ ತೊಂದರೆಗಳಿದ್ದರೆ, ಚಿಕಿತ್ಸೆ ಸಿಗುತ್ತಿಲ್ಲ ಊಟ, ಉಪಾಹಾರಕ್ಕೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ
ಮೈಸೂರುಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿದೆ. 12 ವೆಂಟಿಲೇಟರ್ ಇವೆ ಗಂಭೀರ ಕಾಯಿಲೆಗಳ ರೋಗಿಗಳ ಪ್ರಾಣಕ್ಕೆ ಅಪಾಯ
ಹಾಸನವೆಂಟಿಲೇಟರ್ ಕೊರತೆ, 59 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲ ಸೌಕರ್ಯಗಳು, ಊಟಕ್ಕೆ ತೊಂದರೆಯಿಲ್ಲ
ಮಂಡ್ಯಕರೊನಾ ಸೋಂಕಿತರಿಗೆ ನಿತ್ಯ 2 ಬಾರಿ ವೈದ್ಯರು ತಪಾಸಣೆ ಬಿಸಿ ನೀರಿನ ಸಮಸ್ಯೆಯಿದ್ದು, ರಾತ್ರಿ ವಾರ್ಡ್​ಗಳಿಗೆ ನಾಯಿಗಳು ಬರುತ್ತವೆ
ಚಾಮರಾಜನಗರಸರಿಯಾದ ಸಮಯಕ್ಕೆ ಊಟ ಪೂರೈಸಲ್ಲ
ಮಡಿಕೇರಿರಾತ್ರಿ ವೇಳೆ ವೈದ್ಯರಿರಲ್ಲ, ಸೋಂಕಿತರ ಸಮಸ್ಯೆಗೆ ತಕ್ಷಣ ಸ್ಪಂದಿಸುವುದಿಲ್ಲ
ರಾಯಚೂರುಸ್ವಚ್ಛತೆಯಿಲ್ಲ, ಉಸಿರಾಟದ ಸಮಸ್ಯೆ ಸೋಂಕಿತರಿಗೆ ಆಕ್ಸಿಜನ್ ಸಿಗಲ್ಲ ಆಸ್ಪತ್ರೆ ಆವರಣ ಹಂದಿಗಳ ತಾಣವಾಗಿದ್ದು, ಎಲ್ಲೆಂದರಲ್ಲಿ ಪಿಪಿಇ ಕಿಟ್ ಬಿಸಾಡಲಾಗುತ್ತಿದೆ ಔಷಧವನ್ನು ಹೊರಗಿಂದ ತರುವಂತೆ ಕಳುಹಿಸುತ್ತಿದ್ದಾರೆ.
ಕೊಪ್ಪಳವೈದ್ಯರು ಸಕಾಲಕ್ಕೆ ಬರುವುದಿಲ್ಲ, ಕರೊನಾ ಹೊರತಾದ ರೋಗಕ್ಕೆ ಚಿಕಿತ್ಸೆ ಸಿಗುತ್ತಿಲ್ಲ ಊಟವನ್ನು ಸರಿಯಾದ ಸಮಸಯಕ್ಕೆ ನೀಡುತ್ತಿಲ್ಲ
ಬಳ್ಳಾರಿವೈದ್ಯರು ನಿಗಾವಹಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ವೈದ್ಯರಲ್ಲಿಯೂ ಕರೊನಾ ಸೋಂಕು ಕಾಣಿಸಿದ ಬಳಿಕ ಚಿಕಿತ್ಸೆಗೆ ತೊಂದರೆ
ಚಿತ್ರದುರ್ಗಕೋವಿಡ್ ನಿಗದಿತ ಅಸ್ಪತ್ರೆ ಮತ್ತು ಆರೈಕೆ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಔಷಧ ಹಾಗೂ ಊಟೋಪಾಚಾರ ವ್ಯವಸ್ಥೆ ಸರಿಯಿಲ್ಲ. ವೈದ್ಯರು ಸಕಾಲಕ್ಕೆ ಬರುವುದಿಲ್ಲ ಕೋವಿಡ್ ಆಸ್ಪತ್ರೆಯಲ್ಲಿ 20 ವೆಂಟಿಲೇಟರ್​ಗಳಿದ್ದರೂ ತಜ್ಞರಿಲ್ಲದೆ ಸದ್ಬಳಕೆ ಆಗುತ್ತಿಲ್ಲ.
ಬೆಳಗಾವಿಸೋಂಕಿತರಿಗೆ ಆಕ್ಸಿಜನ್, ಆಹಾರ ಕೊರತೆ, ಇತರೆ ಕಾಯಿಲೆಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ ಆಸ್ಪತ್ರೆಗಳಲ್ಲಿ ಸೋಂಕಿತರನ್ನು ವೈದ್ಯಕೀಯ ಸಿಬ್ಬಂದಿ ಅತಿ ಕೀಳಾಗಿ ಕಾಣುತ್ತಾರೆ.
ಕೋಲಾರಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ತಪಾಸಣೆಗೆ ವೈದ್ಯರು ಬರುತ್ತಿಲ್ಲ. ಬಿಸಿ ನೀರಿನ ಕೊರತೆ, ಇಕ್ಕಟ್ಟಾದ ಜಾಗದಿಂದಾಗಿ ಸಾಮಾಜಿಕ ಅಂತರ ಸಮಸ್ಯೆ
ರಾಮನಗರಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಸರಿಯಾದ ಊಟ, ಬಿಸಿನೀರಿನ ಲಭ್ಯತೆ ಕೊರತೆ
ತುಮಕೂರುಜಿಲ್ಲೆಯ ಕೋವಿಡ್ ಆರೈಕೆ ಕೆಂದ್ರದಲ್ಲಿ ಸ್ವಚ್ಛತೆ ಮರೀಚಿಕೆ ಸೋಂಕಿತರ ಚಿಕಿತ್ಸೆಗೆ ನಿಯಮಿತ ವೈದ್ಯರ ಭೇಟಿ ಇಲ್ಲ
ಚಿಕ್ಕಬಳ್ಳಾಪುರಜಿಲ್ಲೆಯಲ್ಲಿ ಕರೊನಾ ಚಿಕಿತ್ಸೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಕೇಳಿ ಬರುತ್ತಿಲ್ಲ. ರೋಗ ಲಕ್ಷಣಗಳು ಇಲ್ಲದವರಿಗೆ ಮನೆಯಲ್ಲಿಯೇ ಚಿಕಿತ್ಸೆಯ ವ್ಯವಸ್ಥೆ ಒದಗಿಸಲಾಗಿದೆ.
ಶಿವಮೊಗ್ಗಶಿವಮೊಗ್ಗದ ಮೆಗ್ಗಾನ್​ನ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಲಭ್ಯ ರೋಗಿಗಳ ಚಿಕಿತ್ಸೆಗೆ ಮೂರು ಪಾಳಿಯಲ್ಲಿ ವೈದ್ಯರ ಕಾರ್ಯ. ಬಿಸಿ ನೀರಿಗೆ ಸಮಸ್ಯೆ
ಧಾರವಾಡಹುಬ್ಬಳ್ಳಿ ಕಿಮ್ಸ್​ನಲ್ಲಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಲಭ್ಯ. ರಾಜ್ಯದ ಮೊದಲ ಪ್ಲಾಸ್ಮಾ ಚಿಕಿತ್ಸೆ
ವಿಜಯಪುರಕೋವಿಡ್ ಸೊಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಔಷಧ ಕೊಡಲು ವಿಳಂಬ ಗುಣಮಟ್ಟದ ಊಟವಿಲ್ಲ, ಮಧ್ಯಾಹ್ನ 3 ರೊಟ್ಟಿ ಕೊಡುತ್ತಾರೆ, ಪಲ್ಯಾ ಸಿಗಲ್ಲ ಆಸ್ಪತ್ರೆ ವಾರ್ಡ್ ಗಳು ಹಾಗೂ ಶೌಚಗೃಹ ಸ್ವಚ್ಛತೆ ಕೊರತೆ
ಹಣ, ಶಿಫಾರಸಿದ್ದರಷ್ಟೇ ಹಾಸಿಗೆ, ಜನರ ಕೈಗೆಟುಕುತ್ತಿಲ್ಲ ಸರ್ಕಾರಿ ಆಸ್ಪತ್ರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 4 =
Remember me
