ಬೆಳಗಾವಿ:ವಿಧಾನಸಭೆ ಸಭಾಂಗಣದಲ್ಲಿ ಸ್ವಾತಂತ್ರ್ಯ ಯೋಧ ವೀರ ಸಾವರ್ಕರ್ ಭಾವಚಿತ್ರ ಅಳವಡಿಕೆಗೆ ಪರ- ವಿರೋಧ ವಾಗ್ವಾದ ನಡುವೆ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಸೋಮವಾರ ವಿಧ್ಯುಕ್ತವಾಗಿ ಆರಂಭವಾಗಿದೆ. ಆದರೆ, ಮೊದಲ ದಿನವೇ ಉಭಯ ಸದನಗಳಲ್ಲಿ ನಿರಾಸಕ್ತಿ ಎದ್ದು ಕಾಣಿಸಿದ್ದು, ಶೇ.40-45ರಷ್ಟು ಸದಸ್ಯರು ಹಾಜರಾಗಿದ್ದರು.
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಕೊನೆಯ ಚಳಿಗಾಲದ ಅಧಿವೇಶನ ಹಾಗೂ ಮುಂಬರುವ ಚುನಾವಣಾ ಪೂರ್ವ ತಯಾರಿಗೆ ಆಡಳಿತ ಪ್ರತಿಪಕ್ಷಗಳಿಗೆ ಪ್ರಧಾನ ವೇದಿಕೆ ಇದಾಗಿದೆ ಎಂಬ ಕಾರಣಕ್ಕೆ ಬಹಳಷ್ಟು ಕಾರಣಕ್ಕೆ ಕುತೂಹಲ ಹುಟ್ಟಿಹಾಕಿದ್ದು, ಉತ್ತರ ಕರ್ನಾಟಕ ಜನರ ನಿರೀಕ್ಷೆಯೂ ಹೆಚ್ಚಿದೆ. ಮಂಗಳವಾರದಿಂದ ಮಾತಿನ ಮಂಟಪದಲ್ಲಿ ವಾಗ್ಝರಿ, ಮಹತ್ತರ ವಿಷಯದ ಚರ್ಚೆ, ರಾಜಕೀಯ ದಾಳಗಳು ಉರುಳುವ ಸಾಧ್ಯತೆ ಇದೆ. ಸೋಮವಾರ ಕಲಾಪ ಸಂತಾಪ ಸೂಚನೆಗೆ ಸೀಮಿತವಾಗದೆ ಸಾವರ್ಕರ್ ಫೋಟೋ ಅನಾವರಣ ಪ್ರಾಮುಖ್ಯತೆ ಪಡೆಯಿತು. ಪ್ರತಿಪಕ್ಷ ಕಾಂಗ್ರೆಸ್​ನ ಬಹಿಷ್ಕಾರದ ನಡುವೆ ಸ್ಪೀಕರ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಂಬೇಡ್ಕರ್, ಗಾಂಧೀಜಿ, ಬಸವಣ್ಣ ಸೇರಿ ಏಳು ಮಹನೀಯರ ಫೋಟೋ ಅನಾವರಣಗೊಳಿಸಿದರು. ವೀರ ಸಾವರ್ಕರ್ ಫೋಟೋ ಅನಾವರಣಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿ, ಸುವರ್ಣಸೌಧದ ಮೆಟ್ಟಿಲ ಮೇಲೆ ಧರಣಿಯನ್ನೂ ನಡೆಸಿತು. ಇನ್ನೊಂದೆಡೆ ಸಿಎಂ ಬೊಮ್ಮಾಯಿ, ಸಾವರ್ಕರ್ ಫೋಟೋ ಅಳವಡಿಕೆ ವಿಚಾರ ಸ್ಪೀಕರ್ ವಿವೇಚನೆಗೆ ಬಿಟ್ಟದ್ದು ಎಂದು ಹೇಳುವ ಮೂಲಕ ಜಾಣ ನಿಲುವು ಪ್ರದರ್ಶಿಸಿದರು.
ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರಲ್ಲಿಯೇ ಭಿನ್ನಧ್ವನಿ ಕೇಳಿಬಂದಿದ್ದು ಗಮನಾರ್ಹ. ಸಾವರ್ಕರ್ ಫೋಟೋ ಅಳವಡಿಕೆ ವಿರುದ್ಧ ಗಂಭೀರ ಪ್ರತಿರೋಧ ನಿರೀಕ್ಷಿಸಿದ್ದ ಬಿಜೆಪಿಗೆ ನಿರಾಸೆಯಾಯಿತು. ಕಾಂಗ್ರೆಸ್ ಟೀಕೆಯನ್ನು ಎದುರಿಸಲು ಬಿಜೆಪಿ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿತ್ತು, ಸಾವರ್ಕರ್ ಬಗ್ಗೆ ಕಾಂಗ್ರೆಸ್ ದೆಹಲಿ ನಾಯಕರು ಹೊಂದಿದ್ದ ಅಭಿಪ್ರಾಯಗಳ ದಾಖಲೆಯನ್ನು ಬಿಜೆಪಿ ಸಿದ್ಧಪಡಿಸಿಕೊಂಡಿತ್ತು. ಈ ಪ್ರತಿರೋಧ ನಿರೀಕ್ಷಿಸಿದ ಕಾಂಗ್ರೆಸ್, ಫೋಟೋ ಅನಾವರಣ ಕಾರ್ಯಕ್ರಮ ಹಾಗೂ ಕಲಾಪ ಸಲಹಾ ಸಮಿತಿ ಸಭೆ ಬಹಿಷ್ಕರಿಸಿ ಅಸಮಾಧಾನ ಕೊರಹಾಕಿತು.
ಸದಸ್ಯರ ನಿರಾಸಕ್ತಿ:ವಿಧಾನಸಭೆ ಕಲಾಪದಲ್ಲಿ ಮುಖ್ಯಮಂತ್ರಿ, ಸಚಿವರು, ಪ್ರತಿಪಕ್ಷ ನಾಯಕ ಸೇರಿ 80 ಸದಸ್ಯರು ಪಾಲ್ಗೊಂಡಿದ್ದರು. ವಿಧಾನ ಪರಿಷತ್​ನಲ್ಲಿ ಸಭಾನಾಯಕ, ಸಚಿವರು, ಶಾಸಕರು, ಪ್ರತಿಪಕ್ಷದ ಮುಖ್ಯಸಚೇತಕ ಸೇರಿ 45 ಸದಸ್ಯರು ಭಾಗಿಯಾಗಿದ್ದರು. ಕಲಾಪ ಸೇರಿದಾಗ 30ರಷ್ಟಿದ್ದ ಸದಸ್ಯರ ಬಲ ಅಂತಿಮವಾಗಿ 45ಕ್ಕೆ ತಲುಪಿತು. ಸಚಿವ ಪದವಿಗಾಗಿ ಕೆ.ಎಸ್. ಈಶ್ವರಪ್ಪ, ರಮೇಶ್ ಜಾರಕಿಹೊಳಿ ಒತ್ತಡ ತಂತ್ರ ಮುಂದುವರಿಸಿದ್ದು, ಅಧಿವೇಶನಕ್ಕೆ ಗೈರು ಹಾಜರಾಗಿದ್ದಾರೆ. ಈ ಮಧ್ಯೆ ಕೆ.ಎಸ್.ಈಶ್ವರಪ್ಪ ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ಕರೆದಿರುವುದು ಕುತೂಹಲ ಹೆಚ್ಚಿಸಿದೆ.
ಸಚಿವ ಆಕಾಂಕ್ಷಿಗಳ ಒತ್ತಡ:ವಿಧಾನಮಂಡಲ ಅಧಿವೇಶನ ಬಳಸಿಕೊಂಡು ಸಚಿವ ಪದವಿ ಗಿಟ್ಟಿಸಿಕೊಳ್ಳುವ ಒತ್ತಡ ತಂತ್ರವನ್ನು ಆಕಾಂಕ್ಷಿಗಳು ಮುಂದುವರಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂದಿಗ್ಧಕ್ಕೆ ಸಿಲುಕಿದ್ದಾರೆ. ಮತ್ತೆ ಸಚಿವರಾಗುವ ಮೂಲಕ ಕಳಂಕ ಕಳೆದುಕೊಳ್ಳಲು ರಮೇಶ್ ಜಾರಕಿಹೊಳಿ, ಕೆ.ಎಸ್. ಈಶ್ವರಪ್ಪ ಬಯಸಿದ್ದು, ಇದಕ್ಕಾಗಿ ಅಧಿವೇಶನದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಖಾಲಿಯಿರುವ ಆರು ಸ್ಥಾನಗಳ ಭರ್ತಿ, ತಮ್ಮಿಬ್ಬರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಅಗತ್ಯ ಕುರಿತು ವರಿಷ್ಠರಿಗೆ ಸಿಎಂ ವಸ್ತುಸ್ಥಿತಿ ಮನವರಿಕೆ ಮಾಡಿಕೊಡುತ್ತಿಲ್ಲ ಎನ್ನುವುದು ಆಕಾಂಕ್ಷಿಗಳ ಮುನಿಸು. ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಬಗ್ಗೆ ವರಿಷ್ಠರಿಗೆ ಯಾವುದೇ ಆಸಕ್ತಿಯಿದ್ದಂತಿಲ್ಲ. ಈ ವಿಷಯದ ಚರ್ಚೆಗೆ ಸಿದ್ಧರಾಗಿಲ್ಲ. ಒಂದಿಲ್ಲೊಂದು ಕಾರಣವೊಡ್ಡಿ ಕಾಲ ತಳ್ಳುತ್ತಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಸಿಎಂ ಬೊಮ್ಮಾಯಿ ಬೇಗುದಿ ಅನುಭವಿಸುತ್ತಿದ್ದು, ಅಧಿವೇಶನವನ್ನು ಸಮರ್ಥವಾಗಿ ನಿಭಾಯಿಸುವುದಕ್ಕಿಂತ ಸ್ವಪಕ್ಷದವರ ಅಸಮಾಧಾನ ಶಮನವೇ ಸವಾಲಾಗಿದೆ ಎಂದು ಮೂಲಗಳು ಹೇಳುತ್ತವೆ.
ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್​​ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್​ ಮಾಡಲು ಮನವಿ

ಟ್ವಿಟರ್​ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಲಿದ್ದಾರಾ ಎಲಾನ್ ಮಸ್ಕ್?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 17 =
Remember me
