ಬೆಳಗಾವಿ:ಸೇನಾ ನೇಮಕಾತಿಯ ಕುರಿತ ‘ಅಗ್ನಿಪಥ’ ಯೋಜನೆಯನ್ನು ವಿರೋಧಿಸಿ ಕರೆಕೊಟ್ಟಿದ್ದ ಭಾರತ್ ಬಂದ್‌ಗೆ ಬೆಳಗಾವಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ದೊರೆತು, ಬೆಳಗಾವಿ ಬಂದ್ ಕೂಡ ವಿಫಲವಾಗಿದೆ.
ಯಾವುದೇ ಸಂಘಟನೆಗಳ ಹೆಸರಿಲ್ಲದೆ ಕರೆ ನೀಡಲಾಗಿದ್ದ ಬಂದ್‌ಗೆ ಜನತೆ ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ಪಾಲ್ಗೊಂಡು ಪ್ರತಿರೋಧ ವ್ಯಕ್ತಪಡಿಸಿದರು. ನಗರದ ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಮೂಲಕ ವಿಶೇಷ ನಿಗಾ ಇರಿಸಲಾಗಿತ್ತು.
ಅಲ್ಲದೆ ಪ್ರತಿಭಟನೆಯಲ್ಲಿ ಭಾಗಿಯಾಗಬಹುದು ಎಂಬ ಸಂದೇಹದಿಂದ ನಗರದಲ್ಲಿ ಸಂಚರಿಸುತ್ತಿದ್ದ 130ಕ್ಕೂ ಅಧಿಕ ಹಾಗೂ ಬೆಳಗಾವಿ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 300ಕ್ಕೂ ಅಧಿಕ ಯುವಕರನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಯುವಕರಿಗೆ ಚಿಕ್ಕೋಡಿ ಪೊಲೀಸರು ತಿಳಿ ಹೇಳಿ, ಉಪಾಹಾರ ಕೊಟ್ಟು ವಾಪಸ್ ಕಳುಹಿಸಿದ ಪ್ರಸಂಗವೂ ನಡೆದಿದೆ.
ಪ್ರತಿಭಟನೆ ನಡೆಸಲು ಅನುಮತಿ ಕೋರಿ ಯಾವುದೇ ಸಂಘಟನೆಯಿಂದ ಮನವಿ ಸಲ್ಲಿಕೆ ಆಗಿರಲಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಅನಾಮಧೇಯ ಕರೆಯಿಂದಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ಸುಮಾರು 200ಕ್ಕೂ ಅಧಿಕ ಯುವಕರನ್ನು ವಶಕ್ಕೆ ಪಡೆದಿದ್ದು, ಅನುಮತಿ ಪಡೆಯದ ಕಾರಣಕ್ಕೆ ಯಾರಿಗೂ ಪ್ರತಿಭಟನೆಗೆ ಅವಕಾಶ ನೀಡಲಾಗಿಲ್ಲ.
|ಲಕ್ಷ್ಮಣ ನಿಂಬರಗಿಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೆಳಗಾವಿ
ನಗರದಲ್ಲಿನ ಕಿತ್ತೂರು ಚನ್ನಮ್ಮ ವೃತ್ತ, ಕಾಲೇಜು ರಸ್ತೆ ಮಾರ್ಗವಾಗಿ ಬೋಗಾರ ವೇಸ್​​ವರೆಗೆ ಪೊಲೀಸರು ಹಾಗೂ ಕ್ಷಿಪ್ರ ಕಾರ್ಯಪಡೆ ವಿಶೇಷ ಪಥಸಂಚಲನ ಮಾಡುವುದರ ಮೂಲಕ ಸೂಕ್ತ ಭದ್ರತೆ ಒದಗಿಸಿದರು. ನಗರದಲ್ಲಿ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಜಿಲ್ಲಾ ವ್ಯಾಪ್ತಿಯಲ್ಲಿ ಎಸ್​ಪಿ ಲಕ್ಷ್ಮಣ ನಿಂಬರಗಿ ಅವರು ಗಸ್ತು ತಿರುಗಿ ಪೊಲೀಸ್ ಬಂದೋಬಸ್ತ್ ಪರಿಶೀಲಿಸಿ, ಭದ್ರತೆಗೆ ಸೂಕ್ತ ನಿರ್ದೇಶನ ನೀಡಿದರು.
ನಿಪ್ಪಾಣಿ, ಹತ್ತರಗಿ, ಹಿರೇಬಾಗೇವಾಡಿ ಹಾಗೂ ಖಾನಾಪುರ ಸಮೀಪದ ಟೋಲ್‌ಗಳಲ್ಲಿ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಅನುಮಾನಾಸ್ಪದವಾಗಿ ಕಂಡು ಬಂದ ವಾಹನಗಳನ್ನು ಪರಿಶೀಲಿಸಿ, ಯುವಕರನ್ನು ವಿಚಾರಿಸಲಾಗುತ್ತಿತ್ತು. ಇನ್ನು, ನಗರದಲ್ಲಿನ ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಅಶೋಕ ವೃತ್ತ, ಬೋಗಾರವೇಸ್ ವೃತ್ತ ಸೇರಿ ಪ್ರಮುಖ ಸ್ಥಳಗಳಲ್ಲಿ ಗುಂಪುಗೂಡಿ ನೆರೆದಿದ್ದ ಯುವಕರನ್ನು ಪೊಲೀಸರು ವಿಚಾರಿಸಿ, ವಶಕ್ಕೆ ಪಡೆಯುತ್ತಿದ್ದರು. ಈ ವೇಳೆ ಪೊಲೀಸರು ಹಾಗೂ ಯುವಕರ ನಡುವೆ ವಾಗ್ವಾದ ನಡೆಯುತ್ತಿರುವುದು ಸಾಮಾನ್ಯವಾಗಿತ್ತು. ಆದರೆ, ಎಲ್ಲಿಯೂ ಅಗ್ನಿಪಥ ಯೋಜನೆ ವಿರೋಧಿಸಿ ಪ್ರತಿಭಟನೆಗೆ ಅವಕಾಶ ನೀಡದಂತೆ ನೋಡಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾದರು.
ಒಂದೇ ಕುಟುಂಬದ 9 ಮಂದಿ ಆತ್ಮಹತ್ಯೆ; ಒಂದು ಮನೆಯಲ್ಲಿ 6, ಇನ್ನೊಂದು ಮನೆಯಲ್ಲಿ 3 ಶವ!

ನನಗೆ ಕುರ್ತಾ ಹೊಲಿದು ಕೊಡ್ಬೋದಾ? ಈಗ ಫುಲ್​ ಖುಷಿನಾ?: ಮೋದಿ ಹೀಗೆ ಕೇಳಿದ್ದಕ್ಕೂ ಕಾರಣವಿದೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
