ಜುಲೈ 11ರಂದು ವಿಶ್ವ ಜನಸಂಖ್ಯಾ ದಿನ ಆಚರಿಸಲಾಗುತ್ತಿದೆ. ಯಾವುದೇ ದೇಶಕ್ಕೆ ಆ ದೇಶದಲ್ಲಿರುವ ಜನಸಂಖ್ಯೆಯೇ ಮುಖ್ಯವಾದ ಸಂಪತ್ತು. ಒಂದೆಡೆ ಜನಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನುವ ಆತಂಕ, ಇನ್ನೊಂದೆಡೆ ಜನಸಂಖ್ಯೆ ಇಳಿಕೆಯಾಗುತ್ತಿದೆ, ಈ ಎಲ್ಲ ಕಳವಳ, ಸವಾಲುಗಳ ಕುರಿತಂತೆ ಅವಲೋಕಿಸಿದ್ದಾರೆಚಂದ್ರಶೇಖರ ಗಂಧನಹಳ್ಳಿ
810 ಕೋಟಿ ಜನಸಂಖ್ಯೆ:ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಸಾಗಿರುವ ವಿಶ್ವದ ಜನಸಂಖ್ಯೆ ಪ್ರಸ್ತುತ 810 ಕೋಟಿ ದಾಟಿದೆ. 2023ರ ಸೆಪ್ಟೆಂಬರ್​ನಲ್ಲಿ 8 ಶತಕೋಟಿ ತಲುಪಿದ್ದ ಜಾಗತಿಕ ಜನಸಂಖ್ಯೆ ಕೇವಲ ಹತ್ತು ತಿಂಗಳಲ್ಲಿ 10 ಕೋಟಿ ಏರಿಕೆಯಾಗಿದೆ. ಈ ಪ್ರಮಾಣದ ಜನಸಂಖ್ಯೆಯಲ್ಲಿ ಭಾರತದ ಶೇಕಡ 18.1 ಮತ್ತು ಚೀನಾ ಶೇ. 17.55ರಷ್ಟು ಪಾಲಿದೆ. 1804ರಲ್ಲಿ ಒಂದು ಶತಕೋಟಿಯಷ್ಟಿದ್ದ ವಿಶ್ವದ ಜನಸಂಖ್ಯೆ 2024ರ ಜುಲೈ 1ರವರೆಗೆ ಸುಮಾರು 810 ಕೋಟಿಯಷ್ಟಾಗಿದೆ. 2011ರಲ್ಲಿ ಜಾಗತಿಕ ಜನಸಂಖ್ಯೆ 7 ಶತಕೋಟಿ ಮುಟ್ಟಿತ್ತು. 2030ರಲ್ಲಿ ಅಂದಾಜು 8.5 ಶತಕೋಟಿ ಇದ್ದರೆ, 2050ರ ವೇಳೆಗೆ ಇದು 9.7 ಶತಕೋಟಿಗೆ ಏರಿಕೆಯಾಗಲಿದೆ. 2100ರ ಹೊತ್ತಿಗೆ 10.9 ಶತಕೋಟಿಗೆ ಮುಟ್ಟಲಿದೆ.
ಆಚರಣೆ ಉದ್ದೇಶ:ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ ಮಂಡಳಿಯು 1989ರ ಜುಲೈ 11ರಂದು ಮೊದಲ ಬಾರಿ ಈ ದಿನವನ್ನು ಆಚರಿಸಿತು. ಅಂದಿನಿಂದ ಜಗತ್ತಿನಾದ್ಯಂತ 200 ದೇಶಗಳು ಈ ದಿನವನ್ನು ಆಚರಿಸಿಕೊಂಡು ಬರುತ್ತಿವೆ.
ಭಾರತವೇ ಫಸ್ಟ್:ಭಾರತ ಸುಮಾರು 144 ಕೋಟಿ ಜನಸಂಖ್ಯೆ ಹೊಂದಿದೆ. ಚೀನಾವನ್ನು (ಸುಮಾರು 143 ಕೋಟಿ) ಹಿಂದಿಕ್ಕುವ ಮೂಲಕ ಭಾರತ ವಿಶ್ವದಲ್ಲೇ ಮೊದಲ ಸ್ಥಾನ ಪಡೆದು ಕೊಂಡಿದೆ. ಭಾರತದ ಜನಸಂಖ್ಯೆ ಬೆಳವಣಿಗೆ ದರ ಶೇ. 0.92 ಇದೆ. 2075ರ ವೇಳೆಗೆ ಇದು 175 ಕೋಟಿಯನ್ನು ಮೀರಲಿದೆ. 2075ರ ನಂತರ ಭಾರತದ ಜನಸಂಖ್ಯೆ ಇಳಿಕೆಯ ಹಾದಿಯಲ್ಲಿ ಸಾಗಲಿದೆ ಎನ್ನುತ್ತಾರೆ ತಜ್ಞರು.
ಮಿತಿಮೀರಿದ ಜನಸಂಖ್ಯೆ: 23.89 ಕೋಟಿ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಬಿಹಾರ 12.7 ಕೋಟಿ, ಮಹಾರಾಷ್ಟ್ರ 12.6 ಕೋಟಿ ಜನಸಂಖ್ಯೆ ಹೊಂದಿವೆ. ಇನ್ನು ಪಶ್ಚಿಮ ಬಂಗಾಳ 10 ಕೋಟಿಯ ಗಡಿಯಲ್ಲಿದ್ದರೆ ಮಧ್ಯಪ್ರದೇಶ ಸುಮಾರು 9 ಕೋಟಿ ಜನಸಂಖ್ಯೆ ಹೊಂದಿದೆ. 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳುಳ್ಳ ಭಾರತದಲ್ಲಿ ಕೇವಲ ಈ ಐದು ರಾಜ್ಯಗಳೇ ಸುಮಾರು ಶೇ. 50ರಷ್ಟು ಜನಸಂಖ್ಯೆ ಹೊಂದಿವೆ. ಇವು ಉತ್ತರ ಭಾರತದ ರಾಜ್ಯಗಳು ಎಂಬುದು ಗಮನಾರ್ಹ.
ದಕ್ಷಿಣ ರಾಜ್ಯಗಳಲ್ಲಿ ಕಡಿವಾಣ:ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು (7.7 ಕೋಟಿ), ಕರ್ನಾಟಕ (6.8 ಕೋಟಿ), ಆಂಧ್ರಪ್ರದೇಶ (5.3 ಕೋಟಿ), ತೆಲಂಗಾಣ (3.8 ಕೋಟಿ), ಕೇರಳ (3.5 ಕೋಟಿ), ಗೋವಾ (1.5 ಲಕ್ಷ) ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ (1.6 ಲಕ್ಷ) ರಾಜ್ಯಗಳ ಒಟ್ಟು ಜನಸಂಖ್ಯೆ ಕೇವಲ 23.06 ಕೋಟಿ. ಈ ಆರೂ ರಾಜ್ಯಗಳ ಜನಸಂಖ್ಯೆ ಉತ್ತರ ಪ್ರದೇಶದ ಜನಸಂಖ್ಯೆಗಿಂತಲೂ ಕಡಿಮೆ ಇದೆ!
ಜನಸಂಖ್ಯೆ ಹೆಚ್ಚಳಕ್ಕೆ ಕಸರತ್ತು:ಬಹುತೇಕ ದೇಶಗಳಲ್ಲಿ ಜನಸಂಖ್ಯಾ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇದು ಒಟ್ಟಾರೆ ಜಾಗತಿಕ ಜನಸಂಖ್ಯೆಗೆ ಹೋಲಿಸಿದರೆ ಒಳ್ಳೆಯದೇ ಆದರೂ ಆಯಾ ದೇಶಗಳ ಭೂವಿಸ್ತೀರ್ಣ ಮತ್ತು ಇನ್ನಿತರ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಕೆಲ ದೇಶಗಳು ಜನಸಂಖ್ಯೆ ಹೆಚ್ಚಳಕ್ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಉದಾಹರಣೆಗೆ, ಸ್ಪೇನ್, ಜಪಾನ್, ನೈಜೀರಿಯಾ, ಯೂರೋಪಿಯನ್ ದೇಶಗಳಲ್ಲಿ ಅಲ್ಲಿಯ ಸರ್ಕಾರಗಳು ಜನಸಂಖ್ಯಾ ಹೆಚ್ಚಳಕ್ಕಾಗಿ ಧನಸಹಾಯ ಮತ್ತು ಭವಿಷ್ಯದ ಭದ್ರತೆಗಾಗಿ ಭರವಸೆಯ ಉತ್ತೇಜನ ನೀಡುತ್ತಿವೆ. ಆದರೂ ಜನರಲ್ಲಿ ಮಕ್ಕಳು ಹೊಂದುವ ಆಸಕ್ತಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ.

ಯುವಭಾರತ:ಭಾರತದ ಜನಸಂಖ್ಯೆಯಲ್ಲಿ ಶೇ. 50ಕ್ಕೂ ಹೆಚ್ಚಿನ ಜನರ ವಯಸ್ಸು 25ಕ್ಕೂ ಕಡಿಮೆ. ಇದನ್ನು 35ರವರೆಗೆ ಏರಿಸಿದರೆ ನಮ್ಮ ಜನಸಂಖ್ಯೆಯ 65 ಪ್ರತಿಶತ ಜನರು ಇದರಡಿ ಬರುತ್ತಾರೆ. ಅಂದರೆ ಹತ್ತಿರತ್ತಿರ 85 ಕೋಟಿ ಜನರು 35 ವಯೋಮಾನ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರು. ಶೇ. 36.8ರಷ್ಟು ಭಾರತೀಯರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಉಳಿದ ಶೇ.73.2ರಷ್ಟು ಭಾರತೀಯರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ.
ಗಂಭೀರ ಸಮಸ್ಯೆ:ಮಿತಿಮೀರಿದ ಜನಸಂಖ್ಯೆ ಮನುಕುಲಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಲಿದೆ. ಜನಸಂಖ್ಯೆ ಜಾಸ್ತಿಯಾದಂತೆ ಪರಿಹರಿಸ ಲಾಗದ ಹಲವಾರು ತೊಂದರೆಗಳು ವಿಶ್ವಕ್ಕೆ ಎದುರಾಗುತ್ತವೆ. ಹೀಗಾಗಿ ಎಲ್ಲ ದೇಶಗಳು ಈಗಾಗಲೇ ಎಚ್ಚೆತ್ತುಕೊಂಡು ತಮ್ಮ ಜನಸಂಖ್ಯೆಯನ್ನು ನಿಯಂ ತ್ರಿಸಲು ಸಕಾರಾತ್ಮಕ ಕ್ರಮಗಳನ್ನು ತೆಗೆದು ಕೊಳ್ಳಲೇಬೇಕಾಗಿದೆ. ಜನಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಆಯಾ ಸರ್ಕಾರಗಳು ಕೈಗೊಂಡ ಕ್ರಮಗಳನ್ನು ಅನುಸರಿಸುವ ಮೂಲಕ ನಾಗರಿಕರು ಕೂಡ ಸಹಕರಿಸಬೇಕಿರುವುದು ಇಂದಿನ ತುರ್ತ. ಲಿಂಗ, ಜನಾಂಗ, ವರ್ಗ, ಧರ್ಮ ಮತ್ತು ಅಂಗವೈಕಲ್ಯ ಇತ್ಯಾದಿ ಕಾರಣಗಳಿಂದ ಎಲ್ಲರಿಗೂ ಸಮನಾದ ಹಕ್ಕುಗಳು ಸಿಗುತ್ತಿಲ್ಲ. ಅತಿ ಜನಸಂಖ್ಯೆಯಿಂದಾಗಿ ಲಿಂಗ ಅಸಮಾನತೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚುತ್ತಿದೆ.
ಜೀವಿತಾವಧಿ ಹೆಚ್ಚಳ:ಇತ್ತೀಚಿನ ದಿನಗಳಲ್ಲಿ ಫಲವತ್ತತೆ ಮತ್ತು ಜೀವಿತಾವಧಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. 1970ರ ದಶಕದಲ್ಲಿ ಮಹಿಳೆಯರು ಸರಾಸರಿ 4.5 ಮಕ್ಕಳನ್ನು ಹೊಂದಿದ್ದರು. 2015ರ ವೇಳೆಗೆ ಫಲವತ್ತತೆ ಪ್ರತಿ ಮಹಿಳೆಗೆ ಸರಾಸರಿ 2.5ಕ್ಕಿಂತ ಕಡಿಮೆಯಾಗಿದೆ. ಜಾಗತಿಕ ಜೀವಿತಾವಧಿ 1990ರ ದಶಕದ ಆರಂಭದಲ್ಲಿದ್ದ 64.6 ವರ್ಷಗಳಿಂದ 2019ರಲ್ಲಿ 72.6 ವರ್ಷಗಳಿಗೆ ಏರಿದೆ.
IND vs ZIM T20: ಜಿಂಬಾಬ್ವೆ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ; ಸರಣಿಯಲ್ಲಿ 1-2 ಮುನ್ನಡೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + thirteen =
Remember me
