ಬೆಂಗಳೂರು:ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್​​​ಎಸ್‌ಎಸ್‌ಎಐ), ಪ್ರಾದೇಶಿಕ ಭಾಷೆಗಳಲ್ಲಿ ಆಹಾರ ಸುರಕ್ಷತೆ ಅನುಸರಣೆ ವ್ಯವಸ್ಥೆ ( ಫೋಸ್ಕೋಸ್)ಒಳಗೊಂಡ ನೂತನ ಪೋರ್ಟಲ್ ಆರಂಭಿಸಿದೆ.
ನ.14ರಂದು ಹಿಂದಿ ದಿವಸ್ ಸಂದರ್ಭದಲ್ಲಿ ಸ್ಥಳೀಯ ಭಾಷೆಯಲ್ಲಿ ಪೋರ್ಟಲ್‌ಗೆ ಚಾಲನೆ ನೀಡಲಾಗಿದ್ದು, ಇಂಗ್ಲಿಷ್, ಹಿಂದಿ ಹೊರತಾಗಿ ಗುಜರಾತಿ, ತಮಿಳು, ತೆಲುಗು, ಮರಾಠಿಯಲ್ಲಿ ಈ ಪೋರ್ಟಲ್ ಲಭ್ಯವಿದೆ. ಮುಂಬರುವ ದಿನಗಳಲ್ಲಿ ಕನ್ನಡ, ಪಂಜಾಬಿ, ಮಲೆಯಾಳಂ,ಅಸ್ಸಾಮಿ, ಬೆಂಗಾಳಿ ಹಾಗೂ ಒಡಿಯಾ ಭಾಷೆಗಳಲ್ಲಿ ಪೋರ್ಟಲ್ ಆರಂಭಿಸಲು ಎಫ್​​​​ಎಸ್‌ಎಸ್‌ಎಐ ಮುಂದಾಗಿದೆ.
ಇದನ್ನೂ ಓದಿ:BSY ಮನೆಗೆ ನಿರ್ಮಲಾ ಸೀತಾರಾಮನ್ ಭೇಟಿ
ರಾಷ್ಟ್ರವ್ಯಾಪಿ ಆಹಾರ ಉದ್ದಿಮೆಗಳು ಗುಣಮಟ್ಟದ ಆಹಾರ ತಯಾರಿಕೆಗೆ ಉತ್ತೇಜನ, ತಯಾರಿಕಾ ಕಂಪನಿಗಳು ನಿಗದಿತ ಮಾನದಂಡ ಅನುಸರಿಸುವಿಕೆ, ಸ್ಥಳೀಯ ಆಹಾರ ವ್ಯವಹಾರಗಳಿಗೆ ಬಳಕೆದಾರರ ಅನುಭವ ಹೆಚ್ಚಿಸಲು ಹಾಗೂ ಆಹಾರ ಕಲಬೆರಕೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಸೇರಿ ಇತರೆ ಮಾಹಿತಿಗಳನ್ನು ಡಿಜಿಟಲ್ ರೂಪದಲ್ಲಿ ಮಾಹಿತಿ ನೀಡುವ ನಿಟ್ಟಿನಲ್ಲಿ ಎಫ್​​​​ಎಸ್‌ಎಸ್‌ಎಐ, 2020ರಲ್ಲಿ ದೇಶಾದ್ಯಂತ ಪೋರ್ಟಲ್ ಆರಂಭಿಸಲು ಮುಂದಾಯಿತು. ಆಯಾ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಅಳವಾಗಿ ತಿಳಿದುಕೊಳ್ಳಲು ಸಹಾಯವಾಗಲಿದೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:20 − 19 =
Remember me
