ಕೊಟ್ಟಾಯಂ​:ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಲಕ್ಷಾಧಿಪತಿ ಅಥವಾ ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಕೇರಳದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ಸಾಲ ಮಾಡಿ ಮೊದಲ ಬಾರಿಗೆ ಲಾಟರಿ ಟಿಕೆಟ್​ ಖರೀದಿಸಿದ್ದ ಕೂಲಿಕಾರನಿಗೆ ಮೊದಲ ಪ್ರಯತ್ನದಲ್ಲೇ ಅದೃಷ್ಟ ದೇವತೆ ಒಲಿದಿದ್ದು, ಬರೋಬ್ಬರಿ 75 ಲಕ್ಷ ರೂ. ಬಹುಮಾನ ಒಲಿದುಬಂದಿದೆ. ಕೂಲಿಕಾರನ ಹೆಸರು ಬಾಬುಲಾಲ್​ (55). ಈ ಬಾಬುಲಾಲ್ ಸಿಐಟಿಯು ಅಟ್ಟಿಂಕುಝಿ ಯೂನಿಯನ್‌ನ ಸದಸ್ಯರಾಗಿದ್ದಾರೆ.​ ಸ್ತ್ರೀ ಶಕ್ತಿ ಲಾಟರಿಯಿಂದ ಪ್ರಥಮ ಬಹುಮಾನ 75 ಲಕ್ಷ ರೂ.ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ:ರೋಗಿಯ ಹೊಟ್ಟೆಯೊಳಗೆ ಬಟ್ಟೆ ಬಿಟ್ಟ ವೈದ್ಯ! ಪರಿಸ್ಥಿತಿ ಗಂಭೀರ ಆಗುತ್ತಿದ್ದಂತೆಯೇ ಆಸ್ಪತ್ರೆಯಿಂದ ಹೊರ ಕಳಿಸಿದ್ರು…
ನಿನ್ನೆ ಬೆಳಗ್ಗೆ ಯೂನಿಯನ್ ಕಚೇರಿಗೆ ಲಾಟರಿ ಮಾರಾಟಗಾರ್ತಿಯೊಬ್ಬಳು ಬಂದಿದ್ದಳು. ಕೆಲವೇ ಟಿಕೆಟ್‌ಗಳನ್ನು ಮಾರಾಟ ಮಾಡಲು ಸಾಧ್ಯವಾಗಿದ್ದರಿಂದ ಒಂದೇ ಒಂದು ಟಿಕೆಟ್ ಖರೀದಿಸುವಂತೆ ಬಾಬುಲಾಲ್​ಗೆ ಮನವಿ ಮಾಡಿದ್ದಳು. ತನ್ನ ಕೈಯಲ್ಲಿ ಹಣವಿಲ್ಲ ಎಂದು ಬಾಬುಲಾಲ್ ಹೇಳಿದಾಗ ಹಣ ಆಮೇಲೆ ಕೊಡಬಹುದು ಎಂದು ಹೇಳಿ ಎರಡು ಲಾಟರಿ ಕೊಟ್ಟಳು. ಇದೀಗ ಆ ಲಾಟರಿಯಲ್ಲಿ ಒಂದಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಮಹಿಳೆ ಕನಿಯಾಪುರಂನಲ್ಲಿರುವ ಧನಮ್ ಏಜೆನ್ಸಿಯಿಂದ ಮಾರಾಟಕ್ಕೆ ಟಿಕೆಟ್ ಖರೀದಿಸಿದ್ದಳು.
ಬಡ ಕುಟುಂಬಕ್ಕೆ ಸೇರಿದ ಬಾಬುಲಾಲ್ ಚಿಕ್ಕವಯಸ್ಸಿನಲ್ಲೇ ಹಮಾಲಿ ಕೆಲಸ ಮಾಡುವ ಮೂಲಕ ಕುಟುಂಬವನ್ನು ಸಾಕುತ್ತಿದ್ದಾರೆ. ಬಾಬುಲಾಲ್​ ಪತ್ನಿ ಶೋಭಾನಾ ಮನೆ ಕೆಲಸದವಳಾಗಿ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ಅರುಣ್ ಮತ್ತು ಅಜಯಲಾಲ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. 4. 5 ಸೆಂಟ್ಸ್ ಜಮೀನಿನಲ್ಲಿ ಚಿಕ್ಕಪ್ಪ, ಸಹೋದರ ಮತ್ತು ಬಾಬುಲಾಲ್ ಅವರ ಕುಟುಂಬ ಒಟ್ಟಿಗೆ ವಾಸಿಸುತ್ತಿದೆ. ಬಹುಮಾನದ ಟಿಕೆಟ್ ಸಂಖ್ಯೆ SE 989926 ಅನ್ನು ಕಜಕೂಟಂನಲ್ಲಿರುವ ಕೆನರಾ ಬ್ಯಾಂಕ್​ಗೆ ಬಾಬುಲಾಲ್​ ಹಸ್ತಾಂತರಿಸಿದ್ದಾರೆ.(ಏಜೆನ್ಸೀಸ್​)
ಭೂಕಂಪದ ನಡುವೆಯೂ ಹೆರಿಗೆ ಮಾಡಿಸಿದ ವೈದ್ಯರು! ವಿಡಿಯೋ ವೈರಲ್…

ಮಾಜಿ ಶಾಸಕ ಹಾಗೂ ಟಿಕೆಟ್ ಆಕಾಂಕ್ಷಿ ವೆಂಕಟಸ್ವಾಮಿಗೆ ಹೃದಯಾಘಾತ…

ರೋಗಿಯ ಹೊಟ್ಟೆಯೊಳಗೆ ಬಟ್ಟೆ ಬಿಟ್ಟ ವೈದ್ಯ! ಪರಿಸ್ಥಿತಿ ಗಂಭೀರ ಆಗುತ್ತಿದ್ದಂತೆಯೇ ಆಸ್ಪತ್ರೆಯಿಂದ ಹೊರ ಕಳಿಸಿದ್ರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
