ಬೆಂಗಳೂರು:ತೀವ್ರ ಕುತೂಹಲ ಕೆರಳಿಸಿದ್ದ ಖಾತೆ ಹಂಚಿಕೆಯ ಸರ್ಕಸ್ ಕೊನೆಯಾಗಿದ್ದು, ನೂತನ ಏಳು ಸಚಿವರಿಗೆ ಖಾತೆಗಳ ಹಂಚಿಕೆ ಜತೆಗೆ ಹಾಲಿ ಸಚಿವರ ಖಾತೆಗಳಲ್ಲಿಯೂ ಬದಲಾವಣೆಗಳನ್ನು ಮಾಡಲಾಗಿದೆ.
ಬದಲಾವಣೆಗೊಂಡ ಸಚಿವರ ಪಟ್ಟಿ ಈ ಕೆಳಕಂಡಂತಿದೆ1. ಸಿಎಂ ಬಿ.ಎಸ್​. ಯಡಿಯೂರಪ್ಪ: ಬೆಂಗಳೂರು ಅಭಿವೃದ್ಧಿ ಮತ್ತು ಇಂಧನ2. ಉಮೇಶ್​ ಕತ್ತಿ: ಆಹಾರ ಮತ್ತು ನಾಗರಿಕ ಪೂರೈಕೆ3. ಬಸವರಾಜ್​ ಬೊಮ್ಮಾಯಿ: ಗೃಹ ಖಾತೆ ಜತೆಗೆ ಕಾನೂನು ಸಂಸದೀಯ4. ಜೆ.ಸಿ. ಮಾಧುಸ್ವಾಮಿ: ವೈದ್ಯಕೀಯ ಶಿಕ್ಷಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ5. ಅರವಿಂದ ಲಿಂಬಾವಳಿ: ಅರಣ್ಯ ಖಾತೆ6. ಎಂಟಿಬಿ ನಾಗರಾಜ್​: ಅಬಕಾರಿ7. ಮುರುಗೇಶ್​ ನಿರಾಣಿ: ಗಣಿಗಾರಿಕೆ8. ಕೋಟಾ ಶ್ರೀನಿವಾಸ್​ ಪೂಜಾರಿ: ಮುಜರಾಯಿ ಜೊತೆ ಹಿಂದುಳಿದ ವರ್ಗ9. ಆನಂದ್​ ಸಿಂಗ್​: ಪ್ರವಾಸೋದ್ಯಮ ಮತ್ತು ಪರಿಸರ10. ಪ್ರಭು ಚೌಹಾಣ್​: ಪಶುಸಂಗೋಪನಾ11. ನಾರಾಯಣಗೌಡ: ಯುವಜನ ಸೇವೆ ಮತ್ತು ಕ್ರೀಡೆ, ಹಜ್ ಮತ್ತು ವಕ್ಫ್12. ಸಿ.ಪಿ. ಯೋಗೇಶ್ವರ್​: ಸಣ್ಣ ನೀರಾವರಿ13. ಆರ್​. ಶಂಕರ್​: ಪೌರಾಡಳಿತ ಮತ್ತು ರೇಷ್ಮೆ14. ಗೋಪಾಲಯ್ಯ: ತೋಟಗಾರಿಕೆ ಮತ್ತು ಸಕ್ಕರೆ15. ಅಂಗಾರ: ಮೀನುಗಾರಿಕೆ ಮತ್ತು ಬಂದರು16. ಸಿಸಿ ಪಾಟೀಲ್​: ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ17. ಡಾ. ಸುಧಾಕರ್​: ಆರೋಗ್ಯ ಇಲಾಖೆ18. ಶಿವರಾಮ್​ ಹೆಬ್ಬಾರ್​: ಕಾರ್ಮಿಕ ಸಚಿವ
ಖಾತೆ ಬದಲಾವಣೆ ಬೆನ್ನಲ್ಲೇ ಕೆಲ ಸಚಿವರ ಅಸಮಾಧಾನ ಭುಗಿಲೆದ್ದಿದ್ದು, ಸಚಿವ ಕೆ. ಸುಧಾಕರ್​ ಮನೆಯಲ್ಲಿ ಸಭೆ ಸೇರಿದ್ದಾರೆ. ಖಾತೆ ಬದಲಿಸುವ ಬಗ್ಗೆ ಕೊನೆಯ ಕ್ಷಣದವರೆಗೂ ಸಿಎಂ ಮೇಲೆ ಅಸಮಾಧಾನಿತರು ಒತ್ತಡ ಹಾಕಿದ್ದರು. ಆದರೆ, ಯಾವುದೇ ಒತ್ತಡಕ್ಕೆ ಸಿಎಂ ಮಣಿದಿಲ್ಲ. ನಿನ್ನೆ ರಾತ್ರಿಯೇ ಪಟ್ಟಿಯನ್ನು ತಯಾರು ಮಾಡಿ ರಾಜ್ಯಪಾಲರ ಅಂಕಿತಕ್ಕೆ ಸಿಎಂ ಕಳುಹಿಸಿದ್ದರು. ಇದೀಗ ಕೊನೆಗೂ ಪಟ್ಟಿ ಬಿಡುಗಡೆಯಾಗಿದ್ದು, ಸಚಿವರ ಖಾತೆಗಳ ಬದಲಾವಣೆ ಬೆನ್ನಲ್ಲೇ ಅಸಮಧಾನ ಭುಗಿಲೆದ್ದಿದೆ.
ಸುಧಕಾರ್ ನಿವಾಸದಲ್ಲಿ ಸತತ ಒಂದು ಗಂಟೆಯಿಂದ ಸಚಿವರ ಮಾತುಕತೆ ಮುಂದೂವರಿದಿದೆ. ಎಂಟಿಬಿ, ಗೋಪಾಲಯ್ಯ ಜತೆ ಸುಧಕಾರ್ ಚರ್ಚೆ ನಡೆಸುತ್ತಿದ್ದಾರೆ. ಮಾತುಕತೆ ವೇಳೆ ಮುಂಬೈ ಟೀಮ್ ಒಗ್ಗಟ್ಟಿನ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಅಂದು ಇಲ್ಲದ ಒಗ್ಗಟ್ಟು ಇಂದು ಇಲ್ಲದಿರುವುದಕ್ಕೆ ಈ ರೀತಿ ಆಗ್ತಿದೆ ಎನ್ನುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸುವ ಬಗ್ಗೆ ಚರ್ಚೆ ಮಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಖಾತೆ ಬದಲಾವಣೆ ಸುಳಿವು ಬೆನ್ನಲ್ಲೇ ಸಚಿವ ಮಾಧುಸ್ವಾಮಿ ಅಸಮಾಧಾನದ ಮಾತು

ಖಾತೆ ಬದಲಾವಣೆ ಸುಳಿವು: ಸಚಿವರ ಅಸಮಾಧಾನ, ಮಾಧುಸ್ವಾಮಿ ರಾಜೀನಾಮೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + thirteen =
Remember me
