ಬೆಂಗಳೂರು:ಕರೊನಾ ತಡೆಗೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಆದರೆ, ಕರೊನಾ ಹರಡುವುದನ್ನು ತಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಮಾಸ್ಕ್​ಗಳ (ಮುಖಗವಸು) ಸುರಕ್ಷತೆ ಬಗ್ಗೆಯೇ ಈಗ ಪ್ರಶ್ನೆ ಎದ್ದಿದೆ. ಜನರು ಸಿಕ್ಕಸಿಕ್ಕ ಮಾಸ್ಕ್​ಗಳನ್ನು ಧರಿಸುತ್ತಿರುವುದರಿಂದ ಕರೊನಾ ಜತೆಯಲ್ಲೇ ಸಾಂಕ್ರಾಮಿಕ ರೋಗಗಳು ಕೂಡ ಹರಡುವ ಗಂಭೀರ ಆತಂಕ ಎದುರಾಗಿದೆ.
ಆತಂಕ ಏಕೆ?: ಮಾಸ್ಕ್ ಕಡ್ಡಾಯ ಬಳಿಕ ಕರ್ನಾಟಕ ಸೇರಿ ದೇಶದೆಲ್ಲೆಡೆ ನಕಲಿ ಮಾಸ್ಕ್​ಗಳ ದಂಧೆ ಶುರುವಾಗಿದೆ. ಒಮ್ಮೆಯೂ ಧರಿಸಲು ಯೋಗ್ಯವಲ್ಲದ ಇಂತಹ ಮಾಸ್ಕ್​ಗಳನ್ನು ಜನತೆ ತಿಂಗಳವರೆಗೆ ಬಳಸುತ್ತಿದ್ದಾರೆ. ಇನ್ನು ಕೆಲವೆಡೆ ಕುಟುಂಬದ ಎಲ್ಲ ಸದಸ್ಯರು ಒಂದೇ ಮಾಸ್ಕ್ ಹಂಚಿಕೊಳ್ಳುತ್ತಿದ್ದಾರೆ. ಮಾಸ್ಕ್​ಗಳ ಮರುಬಳಕೆ ಹೆಚ್ಚಿದಂತೆ ಅದರಲ್ಲಿರುವ ಬ್ಯಾಕ್ಟೀರಿಯಾ ದೇಹ ಸೇರಿ ಅಲರ್ಜಿ, ಅಸ್ತಮಾ, ಉಸಿರಾಟ ತೊಂದರೆ ಉಂಟಾಗಬಹುದು.
ಇದನ್ನೂ ಓದಿ:ಮೂರು ವಾರಗಳಿಂದ ಕಾಣೆಯಾಗಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ದಿಢೀರ್​ ಪ್ರತ್ಯಕ್ಷ: ಏನಾಗಿತ್ತು ಕಿಮ್​ಗೆ?
ದೀರ್ಘಕಾಲ ಬಳಸುವುದು:ಎನ್-95, ಎನ್ -99, ಎನ್ -100 ಮಾಸ್ಕ್​ಗಳನ್ನು ಹೆಚ್ಚು ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಇವು ಕ್ರಮವಾಗಿ, ಶೇ. 80, ಶೇ. 90, ಶೇ.99.5 ಗಾಳಿ ಶೋಧಿಸುವ ಸಾಮರ್ಥ್ಯ ಹೊಂದಿವೆ. ಇವನ್ನು ಹೆಚ್ಚು ಸಮಯ ಬಳಕೆ ಮಾಡಬಹುದಾದರೂ ಫಿಲ್ಟರ್ ಬದಲಿಸಬೇಕು.
ಬಳಕೆಗೂ ಮುನ್ನ..
# ಮಾಸ್ಕ್ ಧರಿಸುವುದಕ್ಕೆ ಹಾಗೂ ತೆಗೆಯುವುದಕ್ಕೂ ವಿಧಾನ ಉಂಟು. ಮಾಸ್ಕ್ ಹಾಕಿದ ಮೇಲೆ ಮೂಗು, ಬಾಯಿಗೆ ವೈರಸ್ ಹರಡುವ ಸಾಧ್ಯತೆ ಇದೆಯೇ ಎಂಬುದನ್ನು ಗಮನಿಸಿಕೊಳ್ಳಬೇಕು, ಹಾಗೆಯೇ ತೆಗೆಯುವಾಗ ಮಾಸ್ಕ್ ಮೇಲಿರುವ ಕಣಗಳು ಬಾಯಿ, ಮೂಗಿನೊಳಗೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕು.
# ಮರುಬಳಕೆ ಆಗದ ಮಾಸ್ಕ್​ಗಳ ವಿಲೇವಾರಿ ವೈಜ್ಞಾನಿಕವಾಗಿರಬೇಕು. ಮರುಬಳಕೆ ಮಾಸ್ಕ್​ಗಳನ್ನು ಸ್ವಚ್ಛ ಮಾಡುವಾಗಲೂ ಮುಖವನ್ನು ಸುರಕ್ಷಿತವಾಗಿ ಮುಚ್ಚಿಕೊಂಡಿರಬೇಕು.
# ತೊಳೆದ ಬಳಿಕ ಮಾಸ್ಕ್​ಗಳನ್ನು ಸಾಕಷ್ಟು ಸಮಯ ಬಿಸಿಲಲ್ಲಿ ಒಣಗಿಸಿದರೆ ಉತ್ತಮ.
ಇದನ್ನೂ ಓದಿ:ಸುಳ್ಳು ಹೇಳಿ ಬಾಯ್​ಫ್ರೆಂಡ್​ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?​
ಕಾನೂನು ಪಾಲನೆಗಷ್ಟೇ ಮಾಸ್ಕ್
ಯಾವ ಮಾಸ್ಕ್ ಉತ್ತಮ?
ಸಾಮಾನ್ಯವಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸರ್ಜಿಕಲ್ ಮಾಸ್ಕ್ ಬಳಸುತ್ತಾರೆ. ಗಾಳಿ ಯಿಂದ ಹರಡುವ ವೈರಸ್ ಉಸಿರಾಟದ ಮೂಲಕ ದೇಹ ದೊಳಗೆ ಹೋಗದಂತೆ ತಡೆಯುವ ಈ ಮಾಸ್ಕ್​ಗಳ ಬೆಲೆ ಕೂಡ ಕಡಿಮೆ. ಇದರ ಗಾಳಿ ಶುದ್ಧತೆ ಸಾಮರ್ಥ್ಯ ಶೇ.10-90. 6ರಿಂದ 8 ತಾಸು ಬಳಸಬಹುದಾದ ಈ ಮಾಸ್ಕ್ ಗಳನ್ನು ಅವಧಿ ಮೀರಿದ ಬಳಿಕ ಸೂಕ್ತವಾಗಿ ವಿಲೇವಾರಿ ಮಾಡಬೇಕು. ಇಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ಬೆಲೆ ಕಡಿಮೆ ಎಂದು ಈ ಮಾಸ್ಕ್ ಗಳನ್ನು ಹೆಚ್ಚಾಗಿ ಬಳಸುತ್ತಿರುವ ಜನತೆ ಅದನ್ನೇ ಮರುಬಳಕೆ ಮಾಡುತ್ತಿದ್ದಾರೆ.
| ಪಂಕಜ ಕೆ.ಎಂ.
ಸರ್ಕಾರದ ಸೌಲಭ್ಯವಂಚಿತ ಶುಶ್ರೂಷಕರು: ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವೇತನ ಮಾತ್ರ ಲಭ್ಯ, ಇತರೆ ಭತ್ಯೆಗಳಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
