ಬೆಂಗಳೂರು: ಲಾಕ್​ಡೌನ್ ಉಲ್ಲಂಘಿಸಿ ರಸ್ತೆಗಿಳಿದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿದ್ದು, ಜಪ್ತಿ ಮಾಡಿದ ವಾಹನಗಳ ಸಂಖ್ಯೆ 30 ಸಾವಿರ ಗಡಿ ಸಮೀಪಿಸಿದೆ. ವಾಹನ ಏ.14ರ ನಂತರ ಮರಳಿ ಸಿಗುತ್ತದೆ ಎಂದು ಕಾಯುತ್ತಿದ್ದ ವಾಹನ ಮಾಲೀಕರಿಗೆ ಲಾಕ್​ಡೌನ್ ವಿಸ್ತರಣೆ ಬಿಗ್ ಶಾಕ್ ಆಗಿದೆ. ಮೇ 3ರವರೆಗೆ ಜಪ್ತಿಯಾದ ವಾಹನ ಸಿಗುವುದಿಲ್ಲ ಎಂಬುದು ದೃಢವಾಗಿದೆ.
ಲಾಕ್​ಡೌನ್ ಆರಂಭವಾದ ಬಳಿಕ ಏ.14ರವರೆಗೆ ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಈಶಾನ್ಯ, ಆಗ್ನೇಯ ಸೇರಿ ನಗರದ ಎಲ್ಲ ವಲಯಗಳಲ್ಲಿ ಒಟ್ಟು 29,771 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ 27,707 ದ್ವಿಚಕ್ರ ವಾಹನ, 1,247 ಕಾರು, 817 ಆಟೋರಿಕ್ಷಾಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಾಖಲೆಯಿಲ್ಲದ ವಾಹನ:ಜಪ್ತಿ ಮಾಡಿದ ವಾಹನಗಳ ಪೈಕಿ ಸಾವಿರಾರು ವಾಹನಗಳಿಗೆ ದಾಖಲೆಗಳಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ನಗರ ಪೊಲೀಸರು ಜಪ್ತಿ ಮಾಡಿದ ಹೆಚ್ಚಿನ ವಾಹನಗಳಿಗೆ ಪ್ರಾಪರ್ಟಿ ಫಾರಂ ಹಾಕಿದ್ದಾರೆ. ಪ್ರಾಪರ್ಟಿ ಫಾರಂ ಹಾಕಿದರೆ ನ್ಯಾಯಾಲಯದಲ್ಲಿ ವಾಹನ ಬಿಡಿಸಿಕೊಳ್ಳಬೇಕಾಗುತ್ತದೆ.
ಜಪ್ತಿಯಾಗಿರುವ ವಾಹನಗಳಲ್ಲಿ ದಾಖಲೆ ಇಲ್ಲದೆ ಇರುವ ವಾಹನಗಳು ಮಾಲೀಕರ ಕೈಗೆ ಸೇರೋದು ಅನುಮಾನವಿದೆ. ಜಪ್ತಿ ಮಾಡಿದ ವಾಹನಗಳಿಗೆ ಆಯಾ ಇನ್​ಸ್ಪೆಕ್ಟರ್​ಗಳ ನೇತೃತ್ವದಲ್ಲಿ ಪ್ರಾಪರ್ಟಿ ಫಾರಂ ಹಾಕಲಾಗಿದ್ದು, ವಾಹನದ ದಾಖಲೆಯಿಲ್ಲದಿದ್ದರೆ ವಾಹನ ಕೈ ಸೇರದೇ ಇರಬಹುದು.
ಸೋಂಕಿತರ ಬಗ್ಗೆ ಪ್ರತಿಕ್ಷಣದ ಮಾಹಿತಿ ನೀಡುವುದಕ್ಕೆ ಎಷ್ಟು ಜನ ಕೆಲಸ ಮಾಡ್ತಿದ್ದಾರೆ ನೋಡಿ

ಬಿಡಿಎ ಸ್ವಾಧೀನದ ಅಕ್ರಮ ಮನೆ, ಸೈಟ್ ಸಕ್ರಮಕ್ಕೆ ಕಾಯ್ದೆ ತಿದ್ದುಪಡಿಗೆ ತೀರ್ಮಾನ ತೆಗೆದುಕೊಂಡಿದೆ ಸಚಿವ ಸಂಪುಟದ ಉಪ ಸಮಿತಿ ತೀರ್ಮಾನ

ರಾಜ್ಯರಾಜಧಾನಿಯ ಟಿಪ್ಪುನಗರದಲ್ಲಿ 75 ಪ್ರಾಥಮಿಕ ಸೋಂಕಿತರು: ಹಾಗಾದರೆ ಬೆಂಗಳೂರಿನಲ್ಲಿರುವ ಹಾಟ್​ಸ್ಪಾಟ್ ವಾರ್ಡ್​ಗಳ ವಿವರ ಇಲ್ಲಿದೆ ಓದಿ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × three =
Remember me
