ತುಮಕೂರು:ಈ ಗ್ರಾಮದಲ್ಲಿ ಯಾರ ಮನೆಗೂ ಪೋಸ್ಟ್ ಬರುವುದಿಲ್ಲ. ನಿಮಗೆ ಕಳಿಸಿದ ಪೋಸ್ಟ್ ಬೇಕು ಅಂತಾದರೆ ಪೋಸ್ಟ್ ಮ್ಯಾನ್ ಮನೆಗೆ ನೀವು ಹೋಗಬೇಕು!
ಎಣ್ಣೆ ಮಾಸ್ಟರ್ ಆಗಿರುವ ಈ ಪೋಸ್ಟ್​ಮ್ಯಾನ್​ನಿಂದ ಗ್ರಾಮಸ್ಥರು ಹೈರಾಣಾಗಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಮಲ್ಲೇಕಾವು ಗ್ರಾಮದಲ್ಲಿ ಈ ಪ್ರಕರಣ ನಡೆಯುತ್ತಿದ್ದು ಕಳೆದ 2 ತಿಂಗಳಿಂದ ಯಾರ ಮನೆಗೂ ಪೋಸ್ಟ್ ನೀಡದ ಆರೋಪವನ್ನು ಗ್ರಾಮಸ್ಥರು ಪೋಸ್ಟ್​ಮ್ಯಾನ್​ ಮೇಲೆ ಹಾಕಿದ್ದಾರೆ.
ಈ ಫೊಸ್ಟ್​ಮ್ಯಾನ್​ ಎಣ್ಣೆ ಹೊಡೆದು ಮನೆಯಲ್ಲೇ ಮಲಗುತ್ತಾರೆ. ಫಲ್​ ನಶೆಯಲ್ಲಿರುವ ಇವರು ಯಾರ ಮನೆಗೂ ತೆರಳದೇ ಪೋಸ್ಟ್​ ಡೆಲಿವರಿ ಮಾಡುತ್ತಿಲ್ಲ. ಪೋಸ್ಟ್ ಬೇಕು ಎಂದರೆ ನೀವು ಈ ಭೂಪನ ಮನೆಗೆ ಹೋಗಗಿ ಈತನನ್ನು ಎಬ್ಬಿಸಬೇಕು.
ನಾಗೇಂದ್ರ ಹೆಸರಿನ ಇವರು ಮಲ್ಲೇಕಾವು ಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್‌ ಆಗಿದ್ದಾರೆ. ತುರ್ತು ಸೇವೆಯ ಪೋಸ್ಟ್ ಕೂಡ ಸಿಗದೇ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ. ಮಲ್ಲೇಕಾವು ಕಚೇರಿಯಲ್ಲೇ ಈಗ ನೂರಾರು ಪೋಸ್ಟ್ ಕಡತಗಳು ಇದ್ದು ಯಾವ ಬಹುತೇಕ ಎಲ್ಲಾ ಪೋಸ್ಟ್​ಗಳು ಯಾರ ಮನೆಗೂ ತಲುಪಿಲ್ಲ.

ಈಗ ತುರ್ತಾಗಿ ಆಧಾರ್ ಕಾರ್ಡ್, ಬ್ಯಾಂಕ್ ಚೆಕ್ ಬುಕ್ ಏನಾದ್ರೂ ಬೇಕಾಗಿದ್ದಲ್ಲಿ ಪೋಸ್ಟ್​ ಮಾಸ್ಟರ್​ ನಾಗೇಂದ್ರನ ಮನೆಗೆ ನೇರವಾಗಿ ಗ್ರಾಮಸ್ಥರು ಹೋಗುತ್ತಿದ್ದಾರೆ. ಯಾವಾಗಲೂ ಎಣ್ಣೆ ಮತಲ್ಲೇ ಮಲಗಿರುವ ಪೋಸ್ಟ್​ ಮಾಸ್ಟರ್​, ಎದ್ದು ಕೇಳಿದ ಪೋಸ್ಟ್ಅನ್ನು ಹುಡುಕಿ ಕೊಡುತ್ತಾನೆ.
ಅನೇಕ ಬಾರಿ ಗ್ರಾಮಸ್ಥರು ನಾಗೇಂದ್ರನ ವಿರುದ್ದ ಕ್ರಮಕೈಗೊಳ್ಳಲು ಅಂಚೆ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 4 =
Remember me
