ಬೆಂಗಳೂರು:ಡಿಜಿಟಲ್ ಯುಗದಲ್ಲೂ ಅಂಚೆ ಇಲಾಖೆ ಜನರ ವಿಶ್ವಾಸವನ್ನು ಉಳಿಸಿಕೊಂಡಿದೆ. ಕೊರಿಯರ್ ಹಾಗೂ ಇಮೇಲ್ ಸೌಲಭ್ಯಗಳ ನಡುವೆಯೂ ಇಲಾಖೆಯಲ್ಲಿ ವಿವಿಧ ಸೌಲಭ್ಯಗಳನ್ನು ಜನರು ಪಡೆಯುತ್ತಿದ್ದಾರೆ. ಕಾಲಕ್ಕೆ ತಕ್ಕಂತೆ ಇಲಾಖೆಯು ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ ಗ್ರಾಹಕ ಸ್ನೇಹಿಯನ್ನಾಗಿಸುತ್ತಿದೆ. ಈ ಅಂಶವನ್ನು ಮತ್ತೆ ನೆನಪಿಸುವುದಕ್ಕೆ ‘ರಾಷ್ಟ್ರೀಯ ಅಂಚೆ ನೌಕರರ ದಿನ’ (ಜು.1) ಬಂದಿದೆ.
ಭಾರತದಲ್ಲಿ ಅಂಚೆ ಸೇವೆ ಪ್ರಾರಂಭಿಸಿದವರು ಬ್ರಿಟಿಷರು. ಹೊಸ ಯುಗದ ತಂತ್ರಜ್ಞಾನ ಮತ್ತು ಹೊಸ ಸಂವಹನ ವಿಧಾನಗಳ ಆಗಮನ ದಿಂದಾಗಿ, ಸಾಂಪ್ರದಾಯಿಕ ಸಂದೇಶ ರವಾನೆ ಸೇವೆಗಳ ಬಳಕೆ ಕಡಿಮೆಯಾಗಿದೆ. ಆದರೆ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಂವಹನದ ಪ್ರಾಥಮಿಕ ಮೂಲವಾಗಿ ಈಗಲೂ ಅಂಚೆ ಇಲಾಖೆ ಬೇರುಗಳು ಗಟ್ಟಿಯಾಗಿಯೇ ಇವೆ.
ರೋಸ್ಟರ್ ಡ್ಯೂಟಿ:‘ಕರೊನಾ ಹಿನ್ನೆಲೆಯಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕ್​ಗಳನ್ನು ನೀಡಲಾಗಿದೆ. ಲಾಕ್​ಡೌನ್​ನಲ್ಲಿಯೂ ‘ರೋಸ್ಟರ್ ಡ್ಯೂಟಿ’ಯಡಿ ಕಾರ್ಯ ನಿರ್ವಹಿಸಲಾಗುತ್ತಿದೆ. ಅದೃಷ್ಟವಶಾತ್, ಈವರೆಗೆ ತೊಂದರೆಯಾಗಿಲ್ಲ. ಸ್ಪೀಡ್, ರಿಜಿಸ್ಟರ್ ಹಾಗೂ ಪಾರ್ಸೆಲ್​ಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ. 5 ಕೆ.ಜಿ.ಕ್ಕಿಂತ ಹೆಚ್ಚಿನ ತೂಕ ಹೊಂದಿರುವ ಪಾರ್ಸೆಲ್​ಗಳನ್ನು ‘ಪಾರ್ಸೆಲ್ ಹಬ್’ನಡಿ ಸೇವೆ ನೀಡಲಾಗುತ್ತಿದೆ ಎನ್ನುತ್ತಾರೆ ಅಂಚೆ ಮಹಾ ಕಾರ್ಯಲಯ ವಿಭಾಗೀಯ ಕಾರ್ಯದರ್ಶಿ ಎಚ್.ಡಿ. ನಾರಾಯಣ್.
ದಿನಸಿಗಳನ್ನು ಅಪಾರ್ಟ್​ವೆುಂಟ್​ಗಳಿಗೆ ತಲುಪಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಈಗಾಗಲೇ ಎಲ್ಲ ಅಂಚೆ ನೌಕರರು ಕರೊನಾ ಲಸಿಕೆ ಪಡೆದಿದ್ದಾರೆ. ನಿತ್ಯ ಒಬ್ಬ ಅಂಚೆ ಪೇದೆ ಅಂದಾಜು 400-500 ಪತ್ರಗಳನ್ನು ತಲುಪಿಸುತ್ತಿದ್ದಾನೆ ಎಂದು ಮಾಹಿತಿ ನೀಡುತ್ತಾರೆ.
ಅಂಚೆ ಇಲಾಖೆಯಲ್ಲಿ ‘ಸುಕನ್ಯಾ ಸಮೃದ್ಧಿ’ ಯೋಜನೆಯಡಿ 1-10 ವರ್ಷದೊಳಗಿನ ಮಕ್ಕಳಿಗೆ, ವಯಸ್ಕರಿಗೆ ಖಾತೆ ತೆರೆಯುವುದು, ವೃದ್ಧಾಪ್ಯವೇತನ ವನ್ನು ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಪಿಂಚಣಿ ಹಣವನ್ನೂ ತಲುಪಿಸಲಾಗುತ್ತಿದೆ. ಒಟ್ಟಾರೆ, ಇಲಾಖೆ ಹಾಗೂ ಜನರ ನಡುವಿನ ಸೇತುವೆಯಾಗಿ ಅಂಚೆ ಸಿಬ್ಬಂದಿ ಕಾರ್ಯ ನಿರ್ವಹಿಸುತಿದ್ದಾರೆ ಎಂದು ವಿಜಯವಾಣಿ ಜತೆ ಎಚ್.ಡಿ. ನಾರಾಯಣ್ ಮಾಹಿತಿ ಹಂಚಿಕೊಂಡರು.
ಅಂಚೆ ಸಿಬ್ಬಂದಿ ಕಾರ್ಯ ಶ್ಲಾಘನೆ:ವಿಶ್ವದಲ್ಲೇ ಭಾರತೀಯ ಅಂಚೆ ಸೇವೆ ಅತಿದೊಡ್ಡ ಸಂಪರ್ಕ ಜಾಲ ಹೊಂದಿದೆ. ದೇಶಾದ್ಯಂತ ಸಾವಿರಾರು ಅಂಚೆ ಕಚೇರಿಗಳಿದ್ದು, ಲಕ್ಷಾಂತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಡಿ ಕಾಯುವ ಯೋಧರ ಪತ್ರಗಳನ್ನು ಅವರ ಕುಟುಂಬಕ್ಕೆ ತಲುಪಿಸುವ ಕಾರ್ಯದಿಂದ ಹಿಡಿದು, ಪಟ್ಟಣದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮನಿ ಆರ್ಡರ್ ತಲುಪಿಸುವ ಕಾಯಕವನ್ನು ನಿಷ್ಠೆಯಿಂದ ನಿರ್ವಹಿಸುತ್ತ ಭಾರತ ಹಾಗೂ ಭಾರತೀಯರನ್ನು ಒಂದುಗೂಡಿಸುವಲ್ಲಿ ಅಂಚೆ ಇಲಾಖೆಯ ಸಿಬ್ಬಂದಿ ಕಾರ್ಯ ಮಹತ್ವದಾಗಿದೆ. ಸಂಸ್ಕೃತಿ, ಸಂಪ್ರದಾಯದ ವೈವಿಧ್ಯತೆ ಮತ್ತು ಭೌಗೋಳಿಕ ಭೂ ಪ್ರದೇಶಗಳನ್ನು ಹೊಂದಿರುವ ದೇಶದಲ್ಲಿ ಅಂಚೆ ಸೇವೆಗಳನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಆದರೂ, ಭಾರತೀಯ ಅಂಚೆ ಇಲಾಖೆ ಹಾಗೂ ಸಿಬ್ಬಂದಿ ಕಾರ್ಯ ಶ್ಲಾಘನೀಯವಾಗಿದೆ.
ಇಲಾಖೆ ಡಿಜಿಟಲೀಕರಣ:ರಾಜ್ಯದ ಅಂಚೆ ಇಲಾಖೆ ಕಚೇರಿಗಳಲ್ಲಿ ‘ಸುಕನ್ಯಾ ಸಮೃದ್ಧಿ’ ಯೋಜನೆಗೆ ದಾಖಲೆ ಮಟ್ಟದಲ್ಲಿ ಖಾತೆಗಳನ್ನು ತೆರೆಯಲಾಗಿದೆ. ಈಗಾಗಲೇ 45 ಲಕ್ಷ ಎಟಿಎಂ ಕಾರ್ಡ್ ನೀಡಲಾಗಿದೆ. ಪಾಸ್​ಪೋರ್ಟ್ ಸೇವೆ, ವಿಶೇಷ ಉಳಿತಾಯ ಸೇವೆಗಳಾದ ರಾಷ್ಟ್ರೀಯ ಉಳಿತಾಯ ಪತ್ರ (ಎನ್​ಎಸ್​ಸಿ), ಆವರ್ತಿತ ಠೇವಣೆ (ಆರ್​ಡಿ), ನಿಶ್ಚಿತ ಠೇವಣಿ (ಎಫ್​ಡಿ) ಖಾತೆ ತೆರೆಯುವ ಸೇವೆ, ಬ್ಯಾಂಕ್ ಸೇವೆ, ಪ್ರಶ್ನೆ ಹಾಗೂ ಉತ್ತರ ಪತ್ರಿಕೆಗಳ ಪಾರ್ಸೆಲ್ ಸೇರಿ ವಿಶೇಷ ಸೇವೆ ನೀಡಲಾಗುತ್ತಿದೆ. ಸೇವೆಗಳನ್ನು ಮತ್ತಷ್ಟು ಹತ್ತಿರವಾಗಿಸಲು ಡಿಜಿಟಲೀಕರಣ ಮಾಡಿಕೊಂಡಿದೆ.
ಮನೆಯೊಳಗೇ ಮಕ್ಕಳಿಬ್ಬರ ಅನುಮಾನಾಸ್ಪದ ಸಾವು!: ಹದಿಹರೆಯದ ಪುತ್ರ-ಪುತ್ರಿ ಇನ್ನಿಲ್ಲ..

ಒಂದೇ ಮಾವಿನ ಮರದಲ್ಲಿ 121 ಬಗೆಯ ಹಣ್ಣುಗಳು!; ಅಚ್ಚರಿ ಮೂಡಿಸುತ್ತಿದೆ 15 ವರ್ಷಗಳ ಈ ಮರ..

ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
