ಬೆಂಗಳೂರು:ಕೀಚಕ, ಮಾರೀಚನಂತಹ ಸಂತತಿಯೇ ತುಂಬಿಕೊಂಡಿರುವ ಬಿಜೆಪಿಯು ರಾಹುಲ್‌ರನ್ನು ರಾವಣನಿಗೆ ಹೋಲಿಸಿರುವುದು ಹಾಸ್ಯಾಸ್ಪದ ಎಂದು ಸಚಿವ ದಿನೇಶ್ ಗುಂಡೂರಾವ್ ಜಾಲತಾಣದಲ್ಲಿ ಕುಟುಕಿದ್ದಾರೆ. ಅದೇ ರೀತಿ ನೆಟ್ಟಿಗರಿಂದ ತೀಕ್ಷ್ಣ ಪ್ರತಿಕ್ರಿಯೆ ಸಹ ಬಂದಿದೆ.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ರಾವಣನಂತೆ ಬಿಂಬಿಸುವ ಪೋಸ್ಟರ್ ಬಿಡುಗಡೆ ಮಾಡಿರುವ ಬಿಜೆಪಿ ತನ್ನ ಮಾನಸಿಕ ವಿಕಾರತೆಯನ್ನು ಕಾರಿಕೊಂಡಿದೆ. ಗೋಡ್ಸೆ ಆರಾಧಕ ಬಿಜೆಪಿಯವರಿಂದ ಇಂತಹ ವಿಕೃತಗಳಲ್ಲದೆ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ದಿನೇಶ್‌ಹೇಳಿದ್ದಾರೆ.ಈ ಅಭಿಪ್ರಾಯಕ್ಕೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ‘ಹೊರ ದೇಶಗಳಲ್ಲಿ ನಿಂತು ಭಾರತ ದೇಶದ ಮಾನ ಹರಾಜು ಹಾಕುವವ ನಿಜವಾದ ರಾವಣ. ಶತೃ ರಾಷ್ಟ್ರ ಚೀನಾ ಜತೆ ಕುತಂತ್ರ ಮಾಡುವ ಇಟಲಿ ಗಾಂಢೀಗಳು ನಿಜವಾದ ರಾವಣರು’ ಎಂದು ನೆಟ್ಟಿಗರು ಕುಟುಕಿದ್ದಾರೆ.ಅದೇ ರೀತಿ ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಮೋದಿಯವರ ಪೋಸ್ಟರ್‌ನ್ನು ಹಂಚಿಕೊಂಡ ಬಿಜೆಪಿ ಕಾರ್ಯಕರ್ತರು, ‘ಇದನ್ನು ಕಾಂಗ್ರೆಸ್ ಪಾರ್ಟಿ ಹಂಚಿಕೊಂಡಿರುವುದು. ನಿಮ್ಮ ಪ್ರತಿಕ್ರಿಯೆ ಸಾರ್? ಮತ್ತೆ ಖರ್ಗೆಯವರು ಮೋದಿಯವರನ್ನು ರಾವಣನಿಗೆ ಹೋಲಿಸಿದ್ದರು. ನೀವು ಬರೆದಿರುವುದೆಲ್ಲಾ ಅವರಿಗೂ ಅನ್ವಯಿಸುತ್ತದಾ ಸಾರ್?’ ಎಂದು ಕೆಣಕಿದ್ದಾರೆ.ಮೋದಿಗೆ ಏನೇನು ಅಂದೀರಿ ನೆನಪಿಸಿಕೊಳ್ಳಿ. ಸಾವಿನ ವ್ಯಾಪಾರಿ, ನರಹಂತಕ,ರಾವಣ, ಚೋರ ಅಂದಿರಿ. ಕಳ್ಳರು, ನರಹಂತಕರು, ರಾವಣನಂತ ಮನಸ್ಥಿತಿ ಇರುವವರು ಕಾಂಗ್ರೆಸ್‌ನಲ್ಲಿ ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − 8 =
Remember me
