ಬೆಂಗಳೂರು:ಅಗ್ಗದ ದರದಲ್ಲಿ ಪೂರೈಕೆ, ಉತ್ಪಾದನೆ, ಸಾಗಣೆ ಮತ್ತು ವಿತರಣೆ ವಿಕೇಂದ್ರೀಕರಣಕ್ಕೆ ಒತ್ತು ನೀಡಿದ ವಿದ್ಯುತ್ ಹೊಸ ನೀತಿ ರೂಪಿಸಲು ಚಿಂತನೆ ನಡೆಸಿರುವೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಒಂದೆಡೆ ವಿದ್ಯುತ್ ದರ ಏರಿಕೆಗೆ ಆಕ್ಷೇಪಣೆ. ಮತ್ತೊಂದೆಡೆ ಸ್ಪರ್ಧಾತ್ಮಕ ದರದಲ್ಲಿ ವಿದ್ಯುತ್ ಖರೀದಿ ವ್ಯವಸ್ಥೆಯಿದೆ. ಈ ನಡುವೆ ಪರಿಸರ ಸ್ನೇಹಿ ಹಸಿರು ಇಂಧನದ ಬೇಡಿಕೆ ಹೆಚ್ಚಿದ್ದು, ವಿಪುಲ ಅವಕಾಶಗಳಿವೆ.ವಿದ್ಯುತ್ ವಲಯದಲ್ಲಿನ ಈ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಉದ್ಯಮ-ವಹಿವಾಟುದಾರರು ಇನ್ನಿತರ ಭಾಗಿದಾರರೊಂದಿಗೆ ಚರ್ಚಿಸಿರುವೆ. ಕಡಿಮೆ ಬೆಲೆ, ಉತ್ತಮಗುಣಮಟ್ಟ, ಕಾರ್ಯದಕ್ಷತೆಗೆ ಹೆಚ್ಚಿನ ಗಮನನೀಡಬೇಕೆಂಬ ಇಂಗಿತ ವ್ಯಕ್ತವಾಗಿದೆ.
ಅಲ್ಲದೆ, ಬೃಹತ್ ಮತ್ತು ಮಧ್ಯಮಗಾತ್ರದ ಉದ್ಯಮದಾರರಿಗೆ ತಮ್ಮದೇ ಆದ ಪವನ ಇಲ್ಲವೇ ಸೌರ ಶಕ್ತಿ ಆಧಾರಿತ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸುವ ಲಭ್ಯ ಅವಕಾಶದ ಬಗ್ಗೆ ವಿವರಿಸಿರುವೆ.
ರಾಜ್ಯದಲ್ಲಿ ಈಗಾಗಲೇ ವಿದ್ಯುತ್ ನೀತಿ ಜಾರಿಯಲ್ಲಿದೆ. ಆದರೆ ಈಗ ನಡೆಸುತ್ತಿರುವ ವಿದ್ಯುತ್ ನೀತಿ ಚಿಂತನೆಯ ಸ್ವರೂಪ ಭಿನ್ನವಾಗಿದ್ದು, ಪರಿಣತರು ಹಾಗೂ ಅಧಿಕಾರಿಗಳ ಜತೆಗೆ ಸಮಾಲೋಚಿಸಿ ರೂಪರೇಷೆ ಸಿದ್ಧಪಡಿಸಲಾಗುವುದು.ಪಾವಗಡ ಸೋಲಾರ್ ಪಾರ್ಕ್‌ಗೆ ರೈತರಿಂದ ಜಮೀನು ಗುತ್ತಿಗೆ ಪಡೆಯಲಾಗಿದೆ. ಈ ಕ್ರಮದಿಂದ ಉತ್ತೇಜಿತರಾಗಿರುವ ರೈತರು ಇನ್ನೂ 10 ಸಾವಿರ ಎಕರೆ ಸೋಲಾರ್ ಪಾರ್ಕ್‌ಗೆ ಲೀಸ್ ಕೊಡಲು ಮುಂದಾಗಿದೆ.
ಇದರಿಂದಾಗಿ ಹೆಚ್ಚುವರಿ ಒಂದು ಸಾವಿರ ಮೆಗಾ ವಾಟ್ ಉತ್ಪಾದನೆ ಸಾಧ್ಯವಿದೆ. ಪ್ರತಿಯೊಂದು ವಿದ್ಯುತ್ ಉಪಕೇಂದ್ರ (ಸಬ್ ಸ್ಟೇಷನ್)ದ ಬಳಿ ಆಸಕ್ತ ರೈತರಿಂದ ಜಮೀನು ಗುತ್ತಿಗೆ ಪಡೆದು 15 ರಿಂದ 20 ಮೆಗಾ ವಾಟ್ ಸಾಮರ್ಥ್ಯದ ಸೋಲಾರ್ ಘಟಕ ಸ್ಥಾಪಿಸಬಹುದಾಗಿದೆ.ಸಣ್ಣ ಪ್ರಮಾಣದ ಸೌರ, ಪವನ ವಿದ್ಯುತ್ ಘಟಕಗಳಿಂದ ಪರಿಸರ ಸಂರಕ್ಷಣೆಯಾಗುತ್ತದೆ. ಸಾಗಣೆ, ವಿತರಣೆ ನಷ್ಟವೂ ಕಡಿಮೆಯಾಗಿ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಸರ್ಕಾರ ಶಕ್ತವಾಗಲಿದೆ. ಜಲ ವಿದ್ಯುದಾಗರಗಳಲ್ಲಿ ಉತ್ಪಾದನೆಗೆ ಬಳಸಿಕೊಂಡ ನೀರು ಮತ್ತೆ ಬಳಸಿಕೊಳ್ಳುವ ತಂತ್ರಜ್ಞಾನ, ಅಸಂಪ್ರಾದಾಯಿಕ ಮೂಲಗಳ ಇಂಧನ ಲಭ್ಯವಿದೆ.
ಜಲ ಮೂಲದ ವಿದ್ಯುತ್ ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತದೆ. ಉದಾಹರಣೆಗೆ ಶರಾವತಿ ಜಲ ವಿದ್ಯುದಾಗರದಲ್ಲಿ ಉತ್ಪಾದನೆಗೆ ಬಳಸಿದ ನೀರನ್ನು ಪುನಃ ಜಲಾಶಯಕ್ಕೆ ಎತ್ತಿ ಹಾಕಿದರೆ ಪುನರ್ ವಿದ್ಯುತ್ ಬಳಕೆಗೆ ಅವಕಾಶವಾಗಲಿದೆ.ಜಲಾಶಯದಿಂದ ಹೊರಬಿಟ್ಟು ನೀರು ಮರಳಿ ಜಲಾಶಯಕ್ಕೆ ಎತ್ತಿಹಾಕುವುದಕ್ಕೆಂದು ಸೌರ ಅಥವಾ ಪವನ ವಿದ್ಯುತ್ ಚಾಲಿತ ಪಂಪ್‌ಗಳ ಅಳವಡಿಕೆ, ಹೊಸ ತಂತ್ರಜ್ಞಾನ ಬಳಸಿಕೊಳ್ಳಬಹುದು.ಅಸಂಪ್ರದಾಯಿಕ ಅಥವಾ ಪರಿಸರ ಸ್ನೇಹಿ ಇಂಧನ ಉತ್ಪಾದನೆಗೆ ಕೇಂದ್ರ ಸರ್ಕಾರ ನೀಡಲಿರುವ ನೆರವಿನ ಲಾಭ ಪಡೆಯಬಹುದು. ಜತೆಗೆ ಅಮೋನಿಯಾ ಮೂಲದ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವುದು ಚಿಂತನೆಯ ಭಾಗವಾಗಿದೆ ಎಂದು ಕೆ.ಜೆ.ಜಾರ್ಜ್ ವಿವರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 6 =
Remember me
