
ಬೆಂಗಳೂರು:ವಿದ್ಯುತ್ ಬೆಲೆ ಹೆಚ್ಚಳ ಮಾಡುವಂತೆ ಬೆಸ್ಕಾಂ ಸೇರಿದಂತೆ 5 ವಿದ್ಯುತ್ ಸರಬರಾಜು ಕಂಪನಿಗಳು ಪ್ರತಿ ಯುನಿಟ್‌ಗೆ 49 ಪೈಸೆಯಿಂದ 1.50 ರೂ ತನಕ ಹೆಚ್ಚಳ ಕೇಳಿ ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಮಂಡಳಿ(ಕೆಇಆರ್‌ಸಿ)ಗೆ ಪ್ರಸ್ತಾವನೆ ಸಲ್ಲಿಸಿವೆ.ಅತಿ ಕಡಿಮೆ ಪ್ರತಿ ಯುನಿಟ್‌ಗೆ 49 ಪೈಸೆ ಹೆಚ್ಚಳವನ್ನು ಬೆಸ್ಕಾಂ ಕೇಳಿದ್ದರೆ, ಮೆಸ್ಕಾಂ 59 ಪೈಸೆ, ಜೆಸ್ಕಾಂ ಪ್ರತಿ ಯುನಿಟ್‌ಗೆ 1.50 ರೂ ಏರಿಕೆಯನ್ನು ಕೇಳಿದೆ. ಹೆಸ್ಕಾಂ, ಸೆಸ್ಕ್ ಕಂಪನಿಗಳು ಈ ಸಲ ಬಾರಿಹೆಚ್ಚಳವನ್ನು ನಿರೀಕ್ಷೆ ಮಾಡಿಲ್ಲ.ೆಬ್ರವರಿ 2ನೇ ವಾರದಿಂದ ಸಾರ್ವಜನಿಕ ಅದಾಲತ್ ಸಭೆಗಳು ಪ್ರಾರಂಭವಾಗಲಿವೆ. ಕೆಇಆರ್‌ಸಿ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಾರ್ವಜನಿಕ ಅದಾಲತ್‌ನಲ್ಲಿ ಸದಸ್ಯರಾದ ಎಂ.ಡಿ.ರವಿ ಅವರು ಭಾಗವಹಿಸಲಿದ್ದಾರೆ. ಶೀಘ್ರವೇ ಸಾರ್ವಜನಿಕ ಅದಾಲತ್ ಮಾಡಲು ಕೆಇಆರ್‌ಸಿ ದಿನಾಂಕ ನಿಗಧಿ ಮಾಡಲಿದೆ.
ಕಳೆದ ವರ್ಷ 75 ಪೈಸೆ ಏರಿಕೆಎಸ್ಕಾಂಗಳು ಕಳೆದ ವರ್ಷ ಪ್ರತಿ ಯುನಿಟ್‌ಗೆ 1.50 ರಿಂದ 2 ರೂ ತನಕ ವಿದ್ಯುತ್ ದರ ಏರಿಕೆ ಕೇಳಿದ್ದವು. ಬೆಸ್ಕಾಂನಿಂದ ಪ್ರತಿ ಯುನಿಟ್‌ಗೆ 1.50 ರೂ ಏರಿಕೆ ಕೇಳಿದ್ದರೆ, ಈ ವರ್ಷ 49 ಪೈಸೆ ಮಾತ್ರ ಕೇಳಲಾಗಿದೆ.
ದರ ಮುಂದೂಡಿಕೆ ಸಾಧ್ಯತೆಲೋಕಸಭೆ ಚುನಾವಣೆ ದಿನಾಂಕ ೋಷಣೆ ಆಗುವುದು ಬಾಕಿ ಇದೆ. ಒಂದು ವೇಳೆ ಚುನಾವಣೆಗೆ ದಿನಾಂಕ ನಿಗಧಿ ಮಾಡಿ ಚುನಾವಣಾ ಆಯೋಗ ಚುನಾವಣೆ ೋಷಣೆ ಮಾಡಿದರೆ, ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದನ್ನು ಜಾರಿಗೆ ಕೊಡಲು ಸಮಸ್ಯೆ ಎದುರಾಗಬಹುದು. ಚುನಾವಣೆ ಮುಗಿದ ಬಳಿಕವೇ ದರ ಪರಿಷ್ಕರಣೆ ಪ್ರಕಟಿಸಬೇಕಾಗುತ್ತದೆ ಎಂದು ಕೆಇಆರ್‌ಸಿ ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 9 =
Remember me
