ಬೆಂಗಳೂರು: ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲಾ ಎಸ್ಕಾಂಗಳ ಉಪ ವಿಭಾಗ ಹಾಗೂ ಶಾಖಾ ಕಚೇರಿ ಮಟ್ಟದಲ್ಲಿ ಗ್ರಾಹಕ ಸಲಹಾ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿದೆ.ಈ ಹಿಂದೆ ವಿಧಾನಸಭಾ ಸದಸ್ಯರು ನಾಮನಿರ್ದೇಶನಗೊಳಿಸಿದ ಸದಸ್ಯರನ್ನೊಳಗೊಂಡ ಸಮಿತಿ ರಚಿಸಿ ಆದೇಶ ಹೊರಡಿಸಲಾಗುತ್ತಿತ್ತು. ಈ ರೀತಿ ಸಮಿತಿಗಳನ್ನು ರಚಿಸಿ ಹೊರಡಿಸಿದ ಆದೇಶಗಳನ್ನು 2018ರ ಜೂನ್ 12ರಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿತ್ತು.ಇದೀಗ ಇಂಧನ ಸಚಿವರು ಪುನಃ ಸಮಿತಿ ರಚಿಸಲು ಸೂಚಿಸಿದ್ದಾರೆ. ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಭಾಗ ಹಾಗೂ ಶಾಖಾ ಕಚೇರಿ ಮಟ್ಟದಲ್ಲಿ ಗ್ರಾಹಕರ ಸಲಹಾ ಸಮಿತಿ ರಚನೆ ಮಾಡಲು ಸೂಚಿಸಿದ್ದಾರೆ. ಈ ಪ್ರಕಾರ ವಿಧಾನಸಭಾ ಸದಸ್ಯರಿಂದ ಸದಸ್ಯರ ಹೆಸರು ಪಡೆದು ಸಮಿತಿ ರಚಿಸಲು ಆದೇಶಿಸಲಾಗಿದೆ.ಉಪ ವುಭಾಗ ಮಟ್ಟದ ಗ್ರಾಹಕ ಸಲಹಾ ಸಮಿತಿಯಲ್ಲಿ ಶಾಸಕರು ಅಧ್ಯಕ್ಷರಾಗಿರುತ್ತಾರೆ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸದಸ್ಯರಾಗಿರುತ್ತಾರೆ. ಸಹಾಯಕ ಇಂಜಿನಿಯರ್ ಸಂಚಾಲಕರಾಗಿರುತ್ತಾರೆ. ಉಳಿದಂತೆ ತಲಾ ಒಬ್ಬರಂತೆ ರೈತ ಪ್ರತಿನಿಧಿ, ಪರಿಶಿಷ್ಟ ಜಾತಿ, ವರ್ಗದ ಪ್ರತಿನಿಧಿ, ಮಹಿಳಾ ಪ್ರತಿನಿಧಿ, ಹಿಂದುಳಿದ ವರ್ಗಗಳ ಮತ್ತು ಒಬ್ಬ ವಾಣಿಜ್ಯ ಪ್ರತಿನಿಧಿ ಸದಸ್ಯರಾಗಿರುತ್ತಾರೆ.ನಗರ ಪ್ರದೇಶದ ಸಮಿತಿಯಲ್ಲಿ ರೈತ ಪ್ರತಿನಿಧಿ ಬದಲು ಗ್ರಾಹಕ ಪ್ರತಿನಿಧಿ ಹಾಗೂ ಕೈಗಾರಿಕಾ ಪ್ರತಿನಿಧಿ ಇರಲಿದ್ದಾರೆ. ಗ್ರಾಮೀಣ ಪ್ರದೇಶದ ಶಾಖಾ ಕಚೇರಿ ಮಟ್ಟದ ಗ್ರಾಹಕ ಸಲಹಾ ಸಮಿತಿಯಲ್ಲಿ ಕೂಡ ಇದೇ ರೀತಿ ಮೀಸಲು ಇರಲಿದ್ದು, ಶಾಸಕರು ಅಧ್ಯಕ್ಷರಾಗಿರುವುದಿಲ್ಲ. ಜತೆಗೆ ಇಬ್ಬರು ರೈತ ಪ್ರತಿನಿಧಿಗಳು ಇರುವರು. ನಗರ ಪ್ರದೇಶದಲ್ಲಿ ಇಬ್ಬರು ಗ್ರಾಹಕ ಪ್ರತಿನಿಧಿಗಳಿರಲಿದ್ದಾರೆ.ಉಪ ವಿಭಾಗ ಮಟ್ಟದ ಸಮಿತಿಯು ಕನಿಷ್ಟ 3 ತಿಂಗಳಿಗೊಮ್ಮೆ ಹಾಗೂ ಶಾಖಾ ಕಚೇರಿ ಮಟ್ಟದ ಸಮಿತಿ ಕನಿಷ್ಟ 2 ತಿಂಗಳಿಗೊಮ್ಮೆ ಸಭೆ ನಡೆಸಲಿದೆ. ಸಮಿತಿಯು ವಿದ್ಯುತ್ ಸರಬರಾಜು ಸೇವೆ ಸಂಬಂಧವಾಗಿ ಸಾರ್ವಜನಿಕರು, ಗ್ರಾಹಕರಿಂದ ಅಹವಾಲು, ಸಲಹೆ ಸೂಚನೆ ಸ್ವೀಕರಿಸಲಿದೆ.ಗ್ರಾಹಕರಿಗೆ ನೀಡುತ್ತಿರುವ ಸೇವೆಯನ್ನು ಮತ್ತಷ್ಟು ಉತ್ತಮಪಡಿಸಲು ಸ್ವೀಕರಿಸಿದ ಅಹವಾಲು, ಸಲಹೆ ಸೂಚನೆ ಬಗ್ಗೆ ಚರ್ಚೆ ನಡೆಸಿ ಅಂತಹವುಗಳನ್ನು ಕಾರ್ಯನಿರ್ವಹಣೆಯಲ್ಲಿ ಅಳವಡಿಸಿಕೊಳ್ಳಲಾಗುತ್ತದೆ.ಅಂದಹಾಗೆ ಈ ಸಮಿತಿಗೆ ಸದಸ್ಯರಾದವರಿಗೆ ಯಾವುದೇ ರೀತಿ ಭತ್ಯೆ, ಸಂಭಾವನೆ, ಯಾವುದೇ ವಾಹನ ಸೌಕರ್ಯದ ಸೌಲಭ್ಯಕ್ಕೆ ಅರ್ಹರಾಗಿರುವುದಿಲ್ಲ. ಸಮಿತಿ ಸದಸ್ಯರು ಶಾಖಾ ಮತ್ತು ಉಪ ವಿಭಾಗ ಮಟ್ಟದ ಕಚೇರಿಗಳ ಕಾರ್ಯಪಾಲನೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.ವಿದ್ಯುತ್ ಕಳ್ಳತನ, ದುರ್ಬಳಕೆ, ಅನಧಿಕೃತ ಬಳಕೆಯಂತಹ ಕಾನೂನು ಬಾಹಿರ ಪ್ರಕರಣಗಳ ಬಗ್ಗೆಯೂ ಗ್ರಾಹಕರು ಸಮಿತಿಯ ಗಮನಕ್ಕೆ ತರಬಹುದಾಗಿದೆ. ಈ ಸಮಿತಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಕ್ರಮಕ್ಕೆ ಶಿಫಾರಸು ಮಾಡಲಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seven − 5 =
Remember me
