
ಬೆಂಗಳೂರು:ತನಗೆ ಅಗತ್ಯವಿರುವ ವಿದ್ಯುತ್‌ನ್ನು ಸೋಲಾರ್ ಯೋಜನೆಯ ಮೂಲಕ ಉತ್ಪಾದನೆ ಮಾಡಿಕೊಳ್ಳಲು ಕೆಎಂಎ್ ಮುಂದಾಗಿದೆ.ಎಲ್ಲಾ ಹಾಲು ಒಕ್ಕೂಟಗಳು ಮತ್ತು ಹಾಲು ಉತ್ಪನ್ನ ಘಟಕಗಳು ಸೇರಿದಂತೆ ನಿತ್ಯ 110 ಮೆವಾ ವಿದ್ಯುತ್ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.110 ಮೆವಾ ವಿದ್ಯುತ್ ಉತ್ಪಾದನೆಗೆ ಅಬುದಾ ಎನ್ನುವ ಖಾಸಗಿ ಕಂಪನಿ ಜೊತೆಗೆ ಒಂಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆಯೂ ನಡೆದಿದೆ. ಬಂಡವಾಳ ಹೂಡಿಕೆಯಲ್ಲಿ ಕೆಎಂಎ್ ಪಾಲು ಶೇ.26. ಇನ್ನುಳಿದ ಶೇ.74 ಪಾಲು ಖಾಸಗಿ ಕಂಪನಿಗೆ ಸೇರಿದೆ.ಕಲಬುರ್ಗಿ ಜಿಲ್ಲೆಯಲ್ಲಿ ಸುಮಾರು 300 ಎಕರೆ ಜಾಗವನ್ನು ಪಡೆದು ಅಲ್ಲಿ 110 ಮೆವಾ ವಿದ್ಯುತ್ ಉತ್ಪಾದನೆ ಮಾಡಿ ರಾಜ್ಯದ ಗ್ರಿಡ್‌ಗೆ ನೀಡಲು ಯೋಜಿಸಲಾಗಿದೆ.ಕೆಎಂಎ್ ಸಹಭಾಗಿತ್ವದಲ್ಲಿ ಉತ್ಪಾದನೆ ಆಗುವ ವಿದ್ಯುತ್ ಬಳಕೆಯಿಂದ ಹೆಚ್ಚುವರಿ ಹೊರೆ ತಪ್ಪಲಿದೆ. ಇದು ಕೆಎಂಎ್ಗೆ ಉಳಿತಾಯ ಯೋಜನೆಯೂ ಆಗಲಿದೆ ಎಂದು ಅಂದಾಜಿಸಲಾಗಿದೆ.
ಕೋಲಾರ ಒಕ್ಕೂಟದ ಆಸಕ್ತಿಕೋಲಾರ ಹಾಲು ಒಕ್ಕೂಟ ಪ್ರತ್ಯೇಕವಾಗಿ ಸೋಲಾರ್ ವಿದ್ಯುತ್ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರದ ಅನುಮತಿಯನ್ನು ಕೇಳಿದೆ. ಕೋಲಾರ ಹಾಲು ಒಕ್ಕೂಟಕ್ಕೆ ಸುಮಾರು 50 ಎಕರೆ ಭೂಮಿ ಇರುವುದರಿಂದ ಅಲ್ಲಿ ಸೋಲಾರ್ ವಿದ್ಯುತ್ ಯೋಜನೆ ಮಾಡಬಹುದು ಎನ್ನುವುದನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಈ ಬಗ್ಗೆ ಕೆಎಂಎ್ ಶೀಘ್ರವೇ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen + 4 =
Remember me
