ಗದಗ:ಅಕ್ಟೋಬರ್​ನಲ್ಲಿ ಅಬ್ಬರಿಸಿದ್ದ ಮಲಪ್ರಭಾ ನದಿ ಮತ್ತು ಬೆಣ್ಣೆ ಹಳ್ಳದ ಪ್ರವಾಹ ಹೊಡೆತಕ್ಕೆ ತುತ್ತಾಗಿ ಶಿಥಿಲಗೊಂಡಿದ್ದ ರೋಣ ತಾಲೂಕಿನ ಯಾವಗಲ್ ಗ್ರಾಮದ ಸರ್ಕಾರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆಯ ಕೊಠಡಿಗಳ ದುರಸ್ತಿಗೆ ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಯಾವಗಲ್ ಶಾಲೆ ಕೊಠಡಿಗಳು ಶಿಥಿಲಗೊಂಡಿರುವ ಕುರಿತು ವಿಆರ್​ಎಲ್ ಮೀಡಿಯಾದ ‘ಪವರ್ ನ್ಯೂಸ್’ ಆಪ್​ನಲ್ಲಿ ಶಿವರಾಜ್ ನವಲಗುಂದ ಅವರು ಪ್ರಕಟಿಸಿದ್ದ ವರದಿಯಿಂದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. 3.85 ಲಕ್ಷ ರೂ. ಅನುದಾನದಲ್ಲಿ ಎರಡು ಕೊಠಡಿಗಳ ದುರಸ್ತಿಗೆ ಮುಂದಾಗಿದ್ದಾರೆ.
2019ರ ಅಕ್ಟೋಬರ್​ನಲ್ಲಿ ಬೆಣ್ಣೆ ಹಳ್ಳದ ನೆರೆಯಿಂದ ಯಾವಗಲ್ ಗ್ರಾಮದೊಳಗೆ ನೀರು ಹೊಕ್ಕಿತ್ತು. ಸರ್ಕಾರಿ ಶಾಲೆ ಸೇರಿ ಅನೇಕ ಮನೆಗಳು ಜಲಾವೃತವಾಗಿದ್ದವು. ಸರ್ಕಾರಿ ಶಾಲೆ ಕೊಠಡಿಗಳೂ ಹಾಳಾಗಿದ್ದರಿಂದ ಮಕ್ಕಳಿಗೆ ತೊಂದರೆಯಾಗಿತ್ತು. ಬೀಳುವ ಹಂತ ತಲುಪಿದ್ದ ಕೊಠಡಿಗಳನ್ನು ಬಂದ್ ಮಾಡಿ ಬೇರೊಂದು ಕೊಠಡಿಯಲ್ಲಿ ಪಾಠ ಮಾಡಲಾಗಿತ್ತು.
80 ಕೊಠಡಿಗಳು ಹಾಳು:ನೆರೆ ಹಾವಳಿಯಿಂದ ನರಗುಂದ ಮತ್ತು ರೋಣ ತಾಲೂಕಿನ 80 ಗ್ರಾಮಗಳ ಸರ್ಕಾರಿ ಶಾಲಾ ಕೊಠಡಿಗಳು ಹಾನಿಗೀಡಾಗಿವೆ. ಹಾನಿಗೊಳಗಾದ ಕೊಠಡಿಗಳ ದುರಸ್ತಿ ಕಾರ್ಯಕ್ಕೆ ಸರ್ಕಾರ 16 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆಯಾ ಶಾಲೆಯ ಎಸ್​ಡಿಎಂಸಿಗೆ ದುರಸ್ತಿ ಜವಾಬ್ದಾರಿ ನೀಡಲಾಗಿದೆ. ಹಾನಿಯಾಗಿರುವ ಕೊಠಡಿಗಳ ಸ್ಥಿತಿ ಪರಿಶೀಲಿಸಿ 50 ಸಾವಿರದಿಂದ 5 ಲಕ್ಷ ರೂ.ವರೆಗೆ ಅನುದಾನ ಬಿಡುಗಡೆ ಮಾಡಲಾಗಿದ್ದು, ಮಾ.31ರೊಳಗೆ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಎಂದು ಜಿಲ್ಲಾ ಪಂಚಾಯಿತಿಯಿಂದ ಎಲ್ಲ ಎಸ್​ಡಿಎಂಸಿಗೆ ಸೂಚನೆ ನೀಡಲಾಗಿದೆ.
ಯಾವಗಲ್ ಸರ್ಕಾರಿ ಉರ್ದು ಶಾಲೆಯ ಮೂರು ಕೊಠಡಿಗಳು ಶಿಥಿಲಗೊಂಡಿದ್ದು, ಹೊಸ ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ನಬಾರ್ಡ್​ನ ಆರ್​ಐಡಿಎಫ್ ಅನುದಾನ ಮಂಜೂರಾಗಿದೆ. ಆದರೆ, ಇಲ್ಲಿಯವರೆಗೆ ಹಣ ಬಿಡುಗಡೆಯಾಗಿಲ್ಲ. ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಸಣ್ಣ ಪುಟ್ಟ ರಿಪೇರಿ ಕೆಲಸಗಳನ್ನು ಮಾಡಿಸಲಾಗುತ್ತಿದೆ.
| ನಂಜುಂಡಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ, ರೋಣ
ನೆರೆ ಹಾವಳಿಗೆ ತುತ್ತಾದ ಶಾಲಾ ಕೊಠಡಿಗಳ ದುರಸ್ತಿಗೆ ಆಯಾ ಎಸ್​ಡಿಎಂಸಿಗೆ ಜವಾಬ್ದಾರಿ ನೀಡಲಾಗಿದೆ. ಮಾ. 31ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ. ಇದರಲ್ಲಿ ಕೆಲವರು ಕೆಲಸವನ್ನು ಆರಂಭಿಸಿದ್ದಾರೆ.
|ಸಿದ್ಧಲಿಂಗೇಶ್ವರ ಪಾಟೀಲ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ, ಗದಗ
ಯಾವಗಲ್ ಸರ್ಕಾರಿ ಗಂಡು ಮಕ್ಕಳ ಶಾಲೆ ದುರಸ್ತಿಗೆ 3.85 ಲಕ್ಷ ರೂ. ಅನುದಾನ ನೀಡಿದ್ದಾರೆ. ಆದರೆ ಗ್ರಾಮದ ಉರ್ದು ಶಾಲಾ ಕೊಠಡಿಗಳು ಸಂಪೂರ್ಣ ಹಾಳಾಗಿವೆ. ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ಅವರಿಗೂ ಮನವಿ ಸಲ್ಲಿಸಲಾಗಿದೆ. ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕು.
| ನಬೀಸಾಬ ಮುಸ್ತಪ್ಪನವರ ಎಸ್​ಡಿಎಂಸಿ ಅಧ್ಯಕ್ಷ, ಸರ್ಕಾರಿ ಗಂಡು ಮಕ್ಕಳ ಶಾಲೆ, ಯಾವಗಲ್
ಶಿಕ್ಷಕರ ವರ್ಗಾವಣೆ ಮ್ಯಾನ್ಯುಯಲ್ ಕೌನ್ಸೆಲಿಂಗ್​ಗೆ ನಿಷೇಧ, ಕೋರಿಕೆ ವರ್ಗಾವಣೆಗಳಿಗೆ ಆದ್ಯತೆ ಸೇರಿ ಹಲವು ಅಂಶಗಳ ಮಸೂದೆ ಮಂಡನೆ

ಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆಯಲ್ಲಿ ಕೋರಿಕೆಯ ವರ್ಗಾವಣೆ ವಿಚಾರದ ಅಂಶಗಳೇನಿವೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
