ಬೆಂಗಳೂರು:ಕೆಲ ದಿನಗಳ ಹಿಂದೆ ಇಂಧನ ವೆಚ್ಚದ ಹೊಂದಾಣಿಕೆ ಶುಲ್ಕ ತಗ್ಗಿಸುವ ಮೂಲಕ ರಾಜ್ಯದ ಜನತೆಯ ಹೊರೆಯನ್ನು ತಾತ್ಕಾಲಿಕವಾಗಿ ಇಳಿಸಿದ್ದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಎಆರ್​ಸಿ) ಇದೀಗ ವಿದ್ಯುತ್ ದರ ಏರಿಕೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಪ್ರತಿ ಯುನಿಟ್​ಗೆ 30ರಿಂದ 50 ಪೈಸೆ ಬೆಲೆ ಏರಿಸುವಂತೆ ಕೋರಿದೆ.
ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಮಾಡುವ ಕೆಪಿಟಿಸಿಎಲ್ ಅಧೀನದಲ್ಲಿರುವ 5 ಎಸ್ಕಾಂಗಳು ವಿದ್ಯುತ್ ದರ ಏರಿಕೆ ಕುರಿತಂತೆ ಈಗಾಗಲೇ ಕೆಇಆರ್​ಸಿಗೆ ಪ್ರಸ್ತಾವನೆ ಸಲ್ಲಿಸಿವೆ. ಅದರಲ್ಲಿ ಬೆಸ್ಕಾಂ 1 ಯುನಿಟ್ ವಿದ್ಯುತ್​ಗೆ 1.96 ರೂ. ಹೆಚ್ಚಿಸುವಂತೆ ಮನವಿ ಮಾಡಿದೆ. ಎಲ್ಲರ ಮನವಿ ಪರಿಶೀಲನೆ ನಡೆಸಿರುವ ಕೆಇಆರ್​ಸಿ, ವಿದ್ಯುತ್ ಉತ್ಪಾದನೆ, ಆಡಳಿತಾತ್ಮಕ ವೆಚ್ಚ ಇನ್ನಿತರ ವೆಚ್ಚಗಳ ಆಧಾರದ ಮೇಲೆ ಪ್ರತಿ ಯುನಿಟ್​ಗೆ 30ರಿಂದ 50 ಪೈಸೆ ಹೆಚ್ಚಿಸುವ ಕುರಿತು ನಿರ್ಧರಿಸಿದೆ. ಇಂಧನ ಖಾತೆ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಸ್ತಾವನೆಗೆ ಒಪ್ಪಿಗೆ ನೀಡಿದ ಕೂಡಲೇ ದರ ಏರಿಕೆ ಕುರಿತು ಘೋಷಣೆಯಾಗಲಿದೆ. 2019ರ ಮಾರ್ಚ್​ನಲ್ಲಿ ಪ್ರತಿ ಯುನಿಟ್​ಗೆ 29ರಿಂದ 33 ಪೈಸೆ ವಿದ್ಯುತ್ ದರ ಏರಿಸಲಾಗಿತ್ತು.
ಬಿಬಿಎಂಪಿಗೆಷ್ಟು?
ಗೃಹ ಬಳಕೆ ವಿದ್ಯುತ್​ನಲ್ಲಿ ಪ್ರಸ್ತುತ 1 ಕಿ.ವ್ಯಾಟ್​ಗೆ 60 ರೂ. ನಿಗದಿ ಮಾಡಲಾಗಿದ್ದು, ಅದನ್ನು 85 ರೂ. ಮತ್ತು ಆನಂತರದ ಪ್ರತಿ ಕಿ.ವ್ಯಾಟ್​ಗೆ 70 ರೂ. ಪಡೆಯಲಾಗುತ್ತಿದ್ದು, 95 ರೂ.ಗೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 10 =
Remember me
