ಕಲಬುರಗಿ:ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ ಸಮ್ಮುಖದಲ್ಲಿ 9ನೇ ಪೀಠಾಧಿಪತಿಯಾಗಿ ದೊಡ್ಡಪ್ಪ ಅಪ್ಪ ಅವರಿಗೆ ಸೋಮವಾರ ಪಟ್ಟಾಧಿಕಾರ ಮಾಡಿ ಸಂಸ್ಥಾನದ ಅಧಿಕಾರ ಹಸ್ತಾಂತರಿಸಲಾಯಿತು. ಈ ಮೂಲಕ 200 ವರ್ಷ ಇತಿಹಾಸದ ಸಂಸ್ಥಾನದಲ್ಲಿ ಹೊಸ ಯುಗವೊಂದು ಶುರುವಾಯಿತು.
2017ರ ನವೆಂಬರ್ 1ರಂದು ಜನಿಸಿರುವ ಐದು ವರ್ಷ ವಯಸ್ಸಿನ ಚಿರಂಜೀವಿ ದೊಡ್ಡಪ್ಪ ಅಪ್ಪ ದಾಸೋಹ ಪರಂಪರೆಯ ಸಂಸ್ಥಾನದ ಎಲ್ಲ ಪೀಠಾಧಿಪತಿಗಳಲ್ಲಿ ಅತ್ಯಂತ ಕಿರಿಯರು. ಶರಣಬಸವೇಶ್ವರ ದೇವಾಲಯ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಬೀದರ್ ಜಿಲ್ಲೆ ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ದೊಡ್ಡಪ್ಪ ಅಪ್ಪ ಅವರಿಗೆ ಪ್ರಸಾದ ಬಟ್ಟಲು (ಪರುಷ ಬಟ್ಟಲು) ಮತ್ತು ಲಿಂಗ ಸಜ್ಜಿಕೆ (19ನೇ ಶತಮಾನದಲ್ಲಿ ಶರಣಬಸವೇಶ್ವರರು ಬಳಸಿದ ಬೆಳ್ಳಿ ತಟ್ಟೆ ಮತ್ತು ಆತ್ಮಲಿಂಗ) ಹಸ್ತಾಂತರಿಸಿ ಧಾರ್ವಿುಕ ವಿಧಿ-ವಿಧಾನದಂತೆ ಅಧಿಕಾರ ವಹಿಸಿಕೊಟ್ಟರು.
ಶ್ರೀಶೈಲ ಸಾರಂಗ ಮಠದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಚವದಾಪುರಿ ಹಿರೇಮಠದ ಶ್ರೀ ಡಾ.ರಾಜಶೇಖರ ಶಿವಾಚಾರ್ಯ, ಬೆಳಗುಂಪಿಯ ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯ, ಔಸಾದ ಗುರುಬಾಬಾ ಮಹಾರಾಜ ಸಾನ್ನಿಧ್ಯದಲ್ಲಿ ಧಾರ್ವಿುಕ ಕಾರ್ಯಕ್ರಮಗಳು ನಡೆದವು. ಶ್ರೀ ಡಾ.ಶರಣಬಸವಪ್ಪ ಅಪ್ಪ ಮಾತನಾಡಿ, ಸಂಸ್ಥಾನದ ಪದ್ಧತಿ, ಸಂಪ್ರದಾಯದಂತೆ ಧಾರ್ವಿುಕ ವಿಧಿ-ವಿಧಾನ, ಪೂಜಾ ಕೈಂಕರ್ಯ ನಡೆಸುವ ಅಧಿಕಾರವನ್ನು ಪುತ್ರ ದೊಡ್ಡಪ್ಪ ಅಪ್ಪಗೆ ಹಸ್ತಾಂತರಿಸುತ್ತಿದ್ದೇನೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್​ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಮೇಲುಸ್ತುವಾರಿಯಲ್ಲಿ ಮಾರ್ಗದರ್ಶನ ಮಾಡುವುದಾಗಿ ಪ್ರಕಟಿಸಿದರು.
ಹಿಜಾಬ್​ ವಿವಾದ: ಕುಂದಾಪುರ ಶಾಸಕರ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿಯರಿಂದ ಹೈಕೋರ್ಟ್​ಗೆ ಅರ್ಜಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − one =
Remember me
