| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ನಲವತ್ತು ಪರ್ಸೆಂಟ್ ಆರೋಪವನ್ನು ಪ್ರತಿ ದಿನ ಜಪ ಮಾಡುತ್ತಿರುವ ಕಾಂಗ್ರೆಸ್​ಗೆ ತಿರುಗೇಟು ನೀಡಲು ಪ್ರಯತ್ನಿಸುತ್ತಿರುವ ಬಿಜೆಪಿ, ಕಾಂಗ್ರೆಸ್ ಕಾಲದ ಹಾದಿ ತಪ್ಪಿದ ತೀರ್ವನಗಳನ್ನು ದುರ್ಬೀನು ಹಾಕಿ ಹುಡುಕುತ್ತಿದ್ದು ತಕ್ಕಮಟ್ಟಿಗೆ ಒಂದಷ್ಟು ಅಸ್ತ್ರಗಳನ್ನು ಬತ್ತಳಿಕೆಗೆ ಸೇರಿಸಿಕೊಂಡಿವೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದ ಶಿಕ್ಷಕರ ನೇಮಕ ಪ್ರಕರಣವನ್ನು ಕೆದಕಿದಾಗ ಸರ್ಕಾರಕ್ಕೆ ಮಹತ್ವದ ದಾಖಲೆಗಳು ಸಿಕ್ಕಿದವು. ಪರೀಕ್ಷೆ ಬರೆಯದೆ ನೇಮಕವಾದವರನ್ನು ಕಳೆದ ವಾರ ಬಂಧಿಸಲಾಗಿದೆ. ಸಿಐಡಿ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಭ್ರಷ್ಟಾಚಾರದ ಮೂಲ ಹುಡುಕಲಾಗುತ್ತಿದೆ. ಇದೀಗ ಇಂಧನ ಇಲಾಖೆಯಲ್ಲೂ ಶರವೇಗದಲ್ಲಿ ದಾಖಲೆ ಹುಡುಕಾಟ ನಡೆದಿದೆ. ಒಂದು ಹಂತದಲ್ಲಿ ವಿದ್ಯುತ್ ಒಡಂಬಡಿಕೆಗಳ ಪೈಕಿ ಕೆಲವು ಸಂಶಯಾತ್ಮಕವಾಗಿರುವ ಅಂಶಗಳು ಕಂಡುಬಂದಿವೆ. ಪ್ರಮುಖವಾಗಿ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗುವ ಮುನ್ನ ಅಂದರೆ 2014 ಜುಲೈಗೆ ಮುಂಚೆ ನಡೆದಿರುವ ವಿದ್ಯುತ್ ಖರೀದಿ ಒಪ್ಪಂದಗಳ ಬಗ್ಗೆ ಸಾಕಷ್ಟು ಅನುಮಾನ ಕಂಡುಬಂದಿದ್ದು, ‘ಅನ್ಯರಿಗೆ’ ಅನುಕೂಲ ಮಾಡಿಕೊಡುವ ಉದ್ದೇಶ ಎದ್ದು ಕಾಣಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ತಾತ್ಕಾಲಿಕ ವಿದ್ಯುತ್ ಅಭಾವದ ದುರ್ಲಾಭ ಪಡೆದು ಕಾರ್ಯಸಾಧುವಲ್ಲದ ದೀರ್ಘಾವಧಿ ಒಪ್ಪಂದ, ಸ್ಪರ್ಧಾತ್ಮಕಕ್ಕಿಂತಲೂ ಅನಿವಾರ್ಯತೆಗೆ ಕಟ್ಟುಬಿದ್ದಂತೆ ಹೆಚ್ಚಿನ ದರ ನಿಗದಿ ಮಾಡಿ, ಷರತ್ತುಗಳ ಬಗ್ಗೆ ನಿರ್ಲಕ್ಷ್ಯ, ಪಾರದರ್ಶಕ ಕಾಯ್ದೆ ಉಲ್ಲಂಘನೆ ಮುಂತಾದ ಸಂಶಯಕ್ಕೆ ಪುಷ್ಠಿ ನೀಡುವ ವ್ಯವಹಾರಗಳು ನಡೆದಿವೆ. ಆಡಳಿತ ನಡೆಸುವವರಿಗೂ ಒಪ್ಪಂದದ ಪ್ರಸ್ತಾವನೆ ಸಿದ್ಧಪಡಿಸುವವರಿಗೂ ಇರಬೇಕಾದ ಪ್ರಾಥಮಿಕ ಜ್ಞಾನ. ಆದರೆ, ರಾಜ್ಯದ ಜನರ ಕಷ್ಟವನ್ನೇ ‘ಲಾಭದ ವ್ಯವಹಾರ’ಕ್ಕೆ ‘ಕೈ’ ಹಾಕಿವೆ ಎಂದು ತಜ್ಞರು ದಾಖಲೆ ಪರಿಶೀಲನೆ ವೇಳೆ ಬೇಸರ ವ್ಯಕ್ತಪಡಿಸಿದ್ದಾರೆ. ದರ ನಿಗದಿಯು, ಒಪ್ಪಂದದ ಅವಧಿ, ಸರ್ಕಾರಕ್ಕೆ ತನಗೆ ಬೇಕಾದ ಷರತ್ತುಗಳನ್ನು ಹಾಕಿಕೊಳ್ಳುವ ಅವಕಾಶಗಳಿದ್ದರೂ ಕಾಣದ ಕೈಗಳ ಪ್ರಭಾವದಿಂದ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿವೆ ಎಂಬುದು ಕಂಡುಬಂದಿವೆ. ಹೀಗಾಗಿ ಲಾಭದ ಪ್ರವಾಹವೇ ಹರಿದಂತೆ ಕಾಣಿಸಿದೆ.
ಈ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಜರಾತ್ ಕಡೆ ಬೊಟ್ಟುಮಾಡಿ ತೋರಿಸಿ, ಅಲ್ಲಿ ಯಾವ ದರದಲ್ಲಿ ಖರೀದಿ ಮಾಡಿದ್ದಾರೆ, ಇಲ್ಲಿ ಎಷ್ಟು ದರಕ್ಕೆ ಖರೀದಿ ಮಾಡಿದ್ದಾರೆಂದು ಶ್ವೇತಪತ್ರ ಹೊರಡಿಸಿ ಎಂದು ಸರ್ಕಾರಕ್ಕೆ ಸವಾಲು ಕೂಡ ಹಾಕಿದ್ದಾರೆ. ಆದರೆ, ಬೇರೆ ಎಲ್ಲ ರಾಜ್ಯಗಳಲ್ಲಿ ಯಾವ ಷರತ್ತು ವಿಧಿಸಿವೆ, ಅವಧಿ ಎಷ್ಟು, ಅವಧಿ ಆಧರಿಸಿದ ದರ ನಿಗದಿಯಾಗಿದೆಯೇ? ಮುಂತಾದವು ಮುಖ್ಯವಾಗುತ್ತದೆ ಎಂಬುದು ಸರ್ಕಾರದ ವಾದವಾಗಿದೆ. ಈ ಎರಡೂ ವಾದದ ಬಗ್ಗೆ ಹಿರಿಯ ಅಧಿಕಾರಿಗಳು ಪ್ರತಿಕ್ರಿಯೆ ನೀಡದೆ ‘ನಾವು ಈ ಆಟದಲ್ಲಿ ಇಲ್ಲ’ ಎಂದು ಕೈಮುಗಿದು ಎರಡು ಹೆಜ್ಜೆ ಹಿಂದೆ ಸರಿಯುತ್ತಾರೆ. ಕಾನೂನಾತ್ಮಕ ತಾಂತ್ರಿಕ ರಕ್ಷಣೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಸರ್ಕಾರಕ್ಕೆ ಅವಕಾಶ ಇತ್ತು, ಅದನ್ನು ಬಳಸಿಕೊಂಡಿಲ್ಲ. ಷರತ್ತು ಹಾಕುವ ಅಗತ್ಯ ಇತ್ತು ಎಂಬುದನ್ನು ಮಾತ್ರ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ನ್ಯಾಯಾಂಗ ತನಿಖೆಗೆ ಆದೇಶ ಮಾಡಿ.
| ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ಎಷ್ಟು ನಷ್ಟ?:ಪ್ರತಿ ಯೂನಿಟ್​ಗೆ ಗರಿಷ್ಠ 11 ರೂ.ವರೆಗೂ, ಅವಧಿ ದಶಕಗಳ ಲೆಕ್ಕದಲ್ಲಿದೆ. ಇದು ಸರ್ಕಾರದ ಬೊಕ್ಕಸಕ್ಕೆ ಎರಡು ಸಾವಿರ ಕೋಟಿ ರೂ.ವರೆಗೂ ಹೆಚ್ಚುವರಿ ಹೊರೆ ಬೀಳುತ್ತಿದೆ ಎಂಬ ಅಂದಾಜಿದೆ. ಅಂದರೆ, ಇಷ್ಟು ಹಣ ಅನ್ಯರ ಅನುಕೂಲಕ್ಕಾಗಿ ಧಾರೆ ಎರೆಯಲಾ ಗುತ್ತಿದೆ. ಇದೇ ಕಾರಣಕ್ಕೆ ಸರ್ಕಾರ ಪ್ರತಿ ಒಡಂಬಡಿಕೆಯನ್ನು ಪರಿಶೀಲಿಸಿ, ಕಾನೂನು ತಜ್ಞರ ಮೂಲಕ ಪರಿಹಾರ ಮಾಗೋಪಾಯ ಕಂಡುಕೊಳ್ಳುವ ಪ್ರಕ್ರಿಯೆ ನಡೆಸಿದೆ.
ನಾಳೆ ರಾಜ್ಯದ ಎಲ್ಲೆಲ್ಲಿ ಜೋರು ಮಳೆ?; ಇಲ್ಲಿದೆ ಅಲರ್ಟ್ ವಿವರ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 16 =
Remember me
