ವಿಜಯಪುರ:ಕರೊನಾ ಸೋಂಕಿತರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಸ್ಮಶಾನದಲ್ಲಿಯೇ ಬಿಟ್ಟುಹೋಗಿದ್ದ ಪಿಪಿಇ ಕಿಟ್‌ ಒಂದನ್ನು ಎತ್ತಿಕೊಂಡು ಅದನ್ನು ಧರಿಸಿಕೊಂಡ ಮಾನಸಿಕ ಅಸ್ವಸ್ಥನೊಬ್ಬ ಇಡೀ ಊರಿನ ಜನರನ್ನು ಭೀತಿಗೆ ಸಿಲುಕಿಸುತ್ತಿರುವ ಘಟನೆ ವಿಜಯಪುರದಲ್ಲಿ ನಡೆಯುತ್ತಿದೆ.
ಪಿಪಿಇ ಕಿಟ್, ಫೇಸ್ ಶೀಲ್ಡ್ ಮತ್ತು ಮಾಸ್ಕನ್ನು ಧರಿಸಿದ ಈ ವ್ಯಕ್ತಿ ವಿಜಯಪುರದ ವಿವಿಧ ಬಡಾವಣೆಗಳಲ್ಲಿ ಓಡಾಟ ನಡೆಸುತ್ತಿದ್ದಾನೆ. ಇದರಿಂದ ಕರೊನಾ ಸೋಂಕು ಹರಡುವ ಭೀತಿಯಿಂದ ಜನರು ನಲುಗಿ ಹೋಗಿದ್ದಾರೆ.
ಇದನ್ನೂ ಓದಿ:ಅಂತ್ಯಕ್ರಿಯೆಗೆ ಜಮೀನು ಕೊಡಿ
ವಿಜಯಪುರ ನಗರದ ಮನಗೂಳಿ ಅಗಸಿಯಿಂದ ಜಿಲ್ಲಾ ಪಂಚಾಯಿತಿಗೆ ಹೋಗುವ ರಸ್ತೆಯಲ್ಲಿ ಈ ಘಟನೆ ನಡೆಯುತ್ತಿದೆ. ದಿನನಿತ್ಯವೂ ಈತ ಚಿತ್ರ-ವಿಚಿತ್ರ ವೇಷ ಮಾಡಿಕೊಂಡು ಬಡಾವಣೆಗಳಲ್ಲಿ ಸುತ್ತುತ್ತಿರುತ್ತಾನೆ. ಮೈಮೇಲೆ ಹರಿದಿರುವ ಪಿಪಿಇ ಕಿಟ್, ಮುಖಕ್ಕೆ ಫೇಸ್‌ ಶೀಲ್ಡ್ ಮಾಸ್ಕ್ ಮತ್ತು ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾನೆ ಎಂದು ಸ್ಥಳೀಯರು ಅವಲತ್ತುಕೊಳ್ಳುತ್ತಿದ್ದಾರೆ.
ಇಲ್ಲಿಯೇ ಸಮೀಪವಿರುವ ಸ್ಮಶಾನದಲ್ಲಿ ಕರೊನಾ ಸೋಂಕಿತರ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಅಲ್ಲಿ ಅಕಸ್ಮಾತ್ತಾಗಿಯೋ ಅಥವಾ ಉದ್ದೇಶಪೂರ್ವಕವಾಗಿಯೋ ಯಾರೋ ಇವೆಲ್ಲವನ್ನೂ ಎಸೆದು ಹೋಗಿದ್ದು, ಈತ ಅದನ್ನು ಧರಿಸಿರಬಹುದು ಎನ್ನುತ್ತಿದ್ದಾರೆ ಸ್ಥಳೀಯರು. ಮೊದಲಿಗೆ ಈತ ಸ್ಮಶಾನದ ಪಕ್ಕದಲ್ಲಿರುವ ಬೆಂಚ್ ಮೇಲೆ ಕುಳಿತಿರುವ ಕಾರಣ ಅಲ್ಲಿಯೇ ಆತನಿಗೆ ಇದು ಸಿಕ್ಕಿರುವ ಸಾಧ್ಯತೆ ಇದೆ ಎನ್ನಲಾಗಿದೆ.
12 ಜಿಲ್ಲೆಗಳು ಸಂಪೂರ್ಣ ಲಾಕ್‌ಡೌನ್‌? ಸಚಿವ ಅಶೋಕ್‌ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − three =
Remember me
