ಬೆಂಗಳೂರು:ಬಳ್ಳಾರಿಯಲ್ಲಿ ಸೋಮವಾರ ಒಂದೇ ದಿನ 9 ಮಂದಿ ಕರೊನಾಗೆ ಬಲಿಯಾಗಿದ್ದರು. ಆ 9 ಶವಗಳನ್ನು ಒಂದೇ ಗುಂಡಿಗೆ ಪ್ರಾಣಿಗಳಂತೆ ಎಸೆದು ಮುಚ್ಚುವ ಮೂಲಕ ಮೃತರಿಗೆ ಅಪಚಾರವೆಸಗಿದ ಪ್ರಕರಣದ ನಡುವೆಯೇ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ.
ಕರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ವೇಳೆ ಸಿಬ್ಬಂದಿಗಳ ಎಡವಟ್ಟಿನ ವಿಡಿಯೋಗಳು ಇತ್ತೀಚೆಗೆ ವೈರಲ್​ ಆಗುತ್ತಿದ್ದು, ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದೆ. ನಗರದ ಜೆ.ಸಿ.ನಗರದಲ್ಲಿ ಕರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸಿದ ಸಿಬ್ಬಂದಿ ಪಿಪಿಇ ಕಿಟ್ ಅನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದು, ಗಾಳಿಗೆ ಹಾರಿಕೊಂಡು ಅಕ್ಕಪಕ್ಕದ ಮನೆ ಬಳಿಯೇ ಆ ಕಿಟ್​ಗಳು ಬಂದಿವೆ.ಇದನ್ನೂ ಓದಿರಿಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ
ಬಳಸಿದ ಪಿಪಿಇ ಕಿಟ್​ ಅನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕಿದೆ. ಇತ್ತೀಚೆಗೆ ಈ ಕಿಟ್​ಗಳನ್ನು ಎಲ್ಲೆಂದರಲ್ಲಿ ಬಿಸಾಡಿರುವ ಸುದ್ದಿ ಕೇಳಿಬರುತ್ತಿದೆ. ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದುಕಾಣುತ್ತಿದೆ.
ಜೆ.ಸಿ.ನಗರದಲ್ಲಿ ಕರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಿದ ಸಿಬ್ಬಂದಿ ತಾವು ಧರಿಸಿದ್ದ ಪಿಪಿಇ ಕಿಟ್​ ಅನ್ನು ಅಲ್ಲೇ ಬಿಸಾಡಿ ಹೋಗಿದ್ದರು. ಭಯಗೊಂಡ ಸ್ಥಳೀಯರು ಸ್ಥಳೀಯ ಕಾರ್ಪೋರೇಟರ್​ಗೆ ಹೇಳಿದರೂ ಪ್ರಯೋಜನ ಆಗಲಿಲ್ಲ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಪಿಪಿಇ ಕಿಟ್ ಅನ್ನು ಸುಟ್ಟು ಹಾಕಿದರು.
ಇದಷ್ಟೇ ಅಲ್ಲ! ಅಂತ್ಯಕ್ರಿಯೆ ವೇಳೆ ವ್ಯಕ್ತಿಯೊಬ್ಬ ಮಾಸ್ಕ್, ಗ್ಲೌಸ್, ಪಿಪಿಇ ಕಿಟ್ ಧರಿಸದೆ ಬೇಕಾಬಿಟ್ಟಿ ಓಡಾಡಿದ್ದಾನೆ. ಅಲ್ಲಿಂದ ತೆರಳಿದ ವ್ಯಕ್ತಿ ನಗರದಲ್ಲೆಲ್ಲ ಓಡಾಡಿದ್ದಾನೆ ಎಂದು ತಿಳಿದು ಬಂದಿದೆ.
https://www.facebook.com/DighvijayNews/videos/1278251942573941/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 5 =
Remember me
