ಬೆಳಗಾವಿ:ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಅವರು ಸತತ 8ನೇ ಬಾರಿ ಕೆಎಲ್​ಇ ಸಂಸ್ಥೆ ಕಾರ್ಯಾಧ್ಯಕ್ಷ ರಾಗಿ ಆಯ್ಕೆಯಾಗುವ ಮೂಲಕ ಸಂಸ್ಥೆ ಇತಿಹಾಸದಲ್ಲಿಯೇ ನೂತನ ಭಾಷ್ಯ ಬರೆದಿದ್ದಾರೆ.
ಗುರುವಾರ ಕೆಎಲ್​ಇ ಸಂಸ್ಥೆ ಪ್ರಧಾನ ಕಚೇರಿಯಲ್ಲಿ ಜರುಗಿದ ನೂತನ ಆಡಳಿತ ಮಂಡಳಿ ಪ್ರಥಮ ಸಭೆಯಲ್ಲಿ ಕೋರೆ ಅವರನ್ನು ಆಯ್ಕೆ ಮಾಡಲಾಯಿತು. ಈ ವೇಳೆ ಸಂಸ್ಥೆ ನಿರ್ದೇಶಕ, ವಿಧಾನಪರಿಷತ್ ಸರ್ಕಾರದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಡಾ.ಕೋರೆ ಕೆಎಲ್​ಇ ಸಾರಥ್ಯ ವಹಿಸಿಕೊಂಡಾಗಿನಿಂದಲೂ ಸಂಸ್ಥೆಗೆ ಗುಣಾತ್ಮಕ ರೂಪ ನೀಡಿದ್ದಾರೆ. ಅವರ ವಿಚಾರಗಳು ಹಾಗೂ ಆಲೋಚನೆಗಳು ಸಂಸ್ಥೆಯ ವಿಕಾಸಕ್ಕೆ ನೂತನ ವ್ಯಾಖ್ಯಾನ ಬರೆದಿದ್ದು, ಕೆಎಲ್​ಇ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿದೆ ಎಂದರು.
ಹಿರಿಯ ವೈದ್ಯ ಡಾ.ಎಚ್.ಬಿ.ರಾಜಶೇಖರ ಮಾತನಾಡಿ, ಕೆಎಲ್​ಇ ಸಂಸ್ಥೆಯಲ್ಲಿ ಅರವತ್ತರ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಕೋರೆ ಅವರಲ್ಲಿರುವ ವಿಶೇಷ ಗುಣಗಳಿಂದ ಸಂಸ್ಥೆಯ 38ರಷ್ಟಿದ್ದ ಅಂಗ ಸಂಸ್ಥೆಗಳು 270ಕ್ಕೂ ಹೆಚ್ಚು ಬೆಳೆಯಲು ಸಾಧ್ಯವಾಯಿತು. ಸಂಸ್ಥೆಯನ್ನು ಶೈಕ್ಷಣಿಕವಾಗಿ ಮಾತ್ರವಲ್ಲದೆ, ಆರೋಗ್ಯಸೇವೆ ಹಾಗೂ ಸಂಶೋಧನಾತ್ಮಕವಾಗಿಯೂ ವಿಸ್ತರಿಸಿದರು ಎಂದು ಬಣ್ಣಿಸಿದರು.
ಸಂಸ್ಥೆಯ ನೂತನ ಅಧ್ಯಕ್ಷ ಮಹಾಂತೇಶ ಕೌಜಲಗಿ ಮಾತನಾಡಿ, ಡಾ.ಕೋರೆ ಅನುಭವ ಕ್ಷಿತಿಜ ಬಹುವಿಸ್ತಾರ. ಅವರು ಸಂಸ್ಥೆಯನ್ನು ಗುಣಾತ್ಮಕ ಹಾಗೂ ರಚನಾತ್ಮಕವಾಗಿ ಕಟ್ಟಿದ್ದಾರೆ. ಅವರ ಇಚ್ಛಾಶಕ್ತಿಯ ಪ್ರತಿಫಲವಾಗಿ ಸಂಸ್ಥೆ ಹೆಮ್ಮರವಾಗಿದೆ ಎಂದರು.
ಕೆಎಲ್​ಇ ವಿವಿ ಕುಲಪತಿ ಡಾ.ವಿವೇಕ ಸಾವೋಜಿ, ಸಂಸ್ಥೆಯ ಆಜೀವ ಸದಸ್ಯ ಡಾ.ಶಿವಪ್ರಸಾದ ಗೌಡರ ಮಾತನಾಡಿದರು. ಕೆಎಲ್​ಇ ಸಂಸ್ಥೆ ಉಪಾಧ್ಯಕ್ಷ ರಾಜೇಂದ್ರ ಹಂಜಿ, ಬಸವರಾಜ ತಟವಟಿ, ಕೆಎಲ್​ಇ ನೂತನ ಆಡಳಿತ ಮಂಡಳಿ ಸದಸ್ಯರಾದ ಡಾ.ವಿ.ಎಸ್.ಸಾಧುನವರ, ಶಂಕರಣ್ಣ ಮುನವಳ್ಳಿ, ವೈ.ಎಸ್.ಪಾಟೀಲ, ಡಾ.ವಿಶ್ವನಾಥ ಪಾಟೀಲ, ಬಿ.ಆರ್.ಪಾಟೀಲ, ಜಯಾನಂದ ಮುನವಳ್ಳಿ, ಅನಿಲ ಪಟ್ಟೇದ, ಅಮಿತ ಕೋರೆ, ಪ್ರವೀಣ ಬಾಗೇವಾಡಿ, ಎಸ್.ಸಿ.ಮೆಟಗುಡ್, ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ, ಸಂಸ್ಥೆಯ ಆಜೀವ ಸದಸ್ಯರು ಉಪಸ್ಥಿತರಿದ್ದರು.
ಕೆಎಲ್​ಇ ಸಂಸ್ಥೆ ನನ್ನೊಬ್ಬನಿಂದ ಬೆಳೆದಿಲ್ಲ. ನಾನು ನಿಮಿತ್ತ ಮಾತ್ರ. ಈ ಸಂಸ್ಥೆಯಲ್ಲಿ ಪ್ರತಿಯೊಬ್ಬರೂ ತನು-ಮನದಿಂದ ದುಡಿದಿದ್ದಾರೆ. ಅವರೆಲ್ಲರ ಶ್ರಮದ ಮೇಲೆ ಸಂಸ್ಥೆ ವಿಕಾಸಗೊಂಡಿದೆ. ನಾನು ಈ ಸಂಸ್ಥೆಯ ಡ್ರೖೆವರ್ ಮಾತ್ರ. ಎಲ್ಲರ ಸಹಕಾರದಿಂದ ಚಾಲನೆ ಮಾಡಿದ್ದೇನೆ ಅಷ್ಟೇ ಎಂದು ಡಾ.ಪ್ರಭಾಕರ ಕೋರೆ ಸಭೆಯನ್ನುದ್ದೇಶಿಸಿ ಹೇಳಿದರು. ಸರ್ಪ¤ಗಳು ನೆಟ್ಟ ಸಸಿ ಇಂದು ಹೆಮ್ಮರವಾಗುವಲ್ಲಿ ಎಲ್ಲರ ಶ್ರಮವನ್ನೂ ಸ್ಮರಿಸಲೇಬೇಕು. ನನಗೆ ಪತ್ನಿ ಹಾಗೂ ಮಕ್ಕಳು ಸಹಕಾರ ನೀಡಿದರು. ಅದರ ಫಲವಾಗಿ ಸಂಸ್ಥೆ ಹಾಗೂ ಸಮಾಜಕ್ಕಾಗಿ ದುಡಿಯಲು ಸಾಧ್ಯವಾಯಿತು. ಸಮಾಜ ಸೇವೆ ನನ್ನ ಬದುಕಿನ ಧ್ಯೇಯವಾಗಿತ್ತು. ಅದನ್ನು ಮಾಡುವುದರಲ್ಲಿಯೇ ತಲ್ಲೀನನಾದೆ. ಆನಂದ ಪಟ್ಟೆ. ನನ್ನ ದೃಢ ನಿರ್ಧಾರಗಳು, ವಿಚಾರಗಳು ಶ್ರೀರಕ್ಷೆಯಾದವು ಎಂದರು.
ಕೋಲಾರದಲ್ಲೊಂದು ವಿಚಿತ್ರ ಮೇಕೆ ಮರಿ ಜನನ; ಅದನ್ನು ನೋಡಲು ಮುಗಿಬೀಳುತ್ತಿದ್ದಾರೆ ಜನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 3 =
Remember me
