ಬೀದರ್:ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಪ್ರಭು ಚವ್ಹಾಣ್ ಗಂಭೀರ ಆರೋಪ ಮಾಡಿದ್ದಾರೆ.
ಔರಾದ್ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಭಗವಂತ ಖೂಬಾ ವಿರುದ್ಧ ಪ್ರಭು ಚವ್ಹಾಣ್ ಗಂಭೀರ ಆರೋಪ ಮಾಡಿದ್ದು, ಖೂಬಾ ನನಗೆ ಸೋಲಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಈಗ ಅವರ ಪ್ರಯತ್ನ ವಿಫಲವಾಗಿ ತಾನು ಸಾಕಿದ ಗುಂಡಾಗಳಿಂದ ಹತ್ಯೆಗೆ ಸಂಚು ಮಾಡುತ್ತಿದ್ದಾರೆ ಎಂದು ಚವ್ಹಾಣ್ ದೂರಿದ್ದಾರೆ.
ಇತ್ತೀಚೆಗೆ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಚವ್ಹಾಣ್ ವಿರುದ್ಧ ವಾಕ್ಸಮರ ಸಾರಿದ್ದರು ಖೂಬಾ. ಆದರೆ ನಿನ್ನೆ ಔರಾದ್​​​​ನಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿಯಲ್ಲಿ ಖೂಬಾ ವಿರುದ್ಧ ಚವ್ಹಾಣ್ ಕಿಡಿಕಾರಿದ್ದಾರೆ. ಇಡೀ ಭಾಷಣದಲ್ಲಿ ಖೂಬಾ ವಿರುದ್ಧ ಪ್ರಭು ಚವ್ಹಾಣ್ ವಾಗ್ದಾಳಿ ನಡೆಸಿದ್ದಾರೆ.
ನನ್ನ ಕೊಲೆ ಮಾಡಿ 6 ತಿಂಗಳಲ್ಲಿ ಉಪಚುನಾವಣೆಗೆ ಕುತಂತ್ರ ನಡೆಸಲಾಗುತ್ತಿದೆ. ರಸ್ತೆ ಮಧ್ಯ ನನಗೆ ಗುಂಡು ಹಾರಿಸಿ ಕೊಲೆ ಮಾಡಿಸಲು ಸಂಚು ರೂಪಿಸಲಾಗಿದೆ. ಕೇಂದ್ರ ಸಚಿವ ಭಗವಂತ ಖೂಬಾ ಬೆಂಬಲಿಗರಿಂದ ಈ ವಿಷಯ ಗೊತ್ತಾಗಿದೆ ಎಂದು ಸ್ವಪಕ್ಷೀಯ ಕೇಂದ್ರ ಸಚಿವ ಖೂಬಾ ವಿರುದ್ಧ ಚವ್ಹಾಣ್ ಕೆಂಡಾಮಂಡಲವಾಗಿದ್ದಾರೆ.
‘ಇದೇನು ಬಿನ್ ಲಾಡೆನ್ ಸರ್ಕಾರಾನಾ…?’; ಕಾಂಗ್ರೆಸ್​​​​ನ ಕಂಡಾಪಟ್ಟೆ ತರಾಟೆಗೆ ತೆಗೆದುಕೊಂಡ ಆರ್.‌ಅಶೋಕ್​​​​​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + eight =
Remember me
