ದಾವಣಗೆರೆ:ಪಿಎಸ್​ಐ ನೇಮಕಾತಿ ಹಗರಣದ ನಂತರ ಭ್ರಷ್ಟಾಚಾರದ ವಾಸನೆ ಇದೀಗ ಐಟಿಐ ಪರೀಕ್ಷೆಗಳತ್ತಲೂ ಹರಡಿದೆ. ಮೂರು ಸಾವಿರ ರೂ. ಕೈಗಿಟ್ಟರೆ ಸಲೀಸಾಗಿ ನಕಲು ಮಾಡಬಹುದು! ಪ್ರಯೋಗಾಲಯದಲ್ಲಿ ಪರೀಕ್ಷಾ ಮೇಲ್ವಿಚಾರಕರ ಎದುರು ಯಂತ್ರಗಳ ದುರಸ್ತಿ ಹಾಗೂ ಜೋಡಣೆ ಮಾಡುವುದು ನಿಯಮ. ಆದರೆ, ಹೊರಗಿನಿಂದ ರೆಡಿ ಮಾಡಿಸಿಕೊಂಡು ಬಂದವರಿಗೂ ಅಂಕಗಳು ಗ್ಯಾರಂಟಿ!
ದಾವಣಗೆರೆ ಜಿಲ್ಲೆಯ ಮಾಯಕೊಂಡದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಪರೀಕ್ಷಾ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಐಟಿಐ ಫಿಟ್ಟರ್ ವಿಭಾಗದ ಎರಡನೇ ವರ್ಷದ ವೃತ್ತಿ ಪ್ರಾಯೋಗಿಕ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆ.3ರಂದು ಈ ಪರೀಕ್ಷೆ ಈ ನಡೆದಿತ್ತು.
ಪರೀಕ್ಷೆಯಲ್ಲಿ ಶಿಷ್ಟಾಚಾರ ಪಾಲನೆ ಆಗಿಲ್ಲ, ಅಕ್ರಮ ನಡೆದಿದೆ ಎಂದು ಆಯುಕ್ತಾಲಯ ದಲ್ಲಿ ದೂರು ದಾಖಲಾಗಿದೆ. ಪರೀಕ್ಷಾ ಪ್ರಕ್ರಿಯೆ, ಜಾಗೃತ ದಳದ ಕಾರ್ಯನಿರ್ವಹಣೆ ಕುರಿತು ವಿವರ ಕೇಳಲಾಗಿದೆ. ಅಕ್ರಮದ ವಿಡಿಯೋ ಮಾಡಿದವರೂ ಧೈರ್ಯದಿಂದ ದೂರು ನೀಡಬೇಕು.
|ಕೆ. ಜ್ಯೋತಿಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಯುಕ್ತೆ
ಆ ದಿನ ಎಲ್ಲರ ಕಣ್ಣು ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಮೇಲೆ ಇರಬಹುದಾದ ಸಾಧ್ಯತೆ ಗಮನಿಸಿ ಈ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಕಾಲೇಜಿನ ನಾಲ್ಕು ಕೊಠಡಿಗಳಲ್ಲಿ ಪರೀಕ್ಷೆ ನಡೆದಿದ್ದು. ವಿದ್ಯಾರ್ಥಿಗಳು ಯಾರ ಭಯವೂ ಇಲ್ಲದೆ ಸಾಮೂಹಿಕ ನಕಲು ಮಾಡುತ್ತಿದ್ದ ದೃಶ್ಯ ಚಿತ್ರೀಕರಿಸಲಾಗಿದೆ.
ಮಾಯಕೊಂಡ ಸರ್ಕಾರಿ ಐಟಿಐ ಕಾಲೇಜಿನ ಪ್ರಬಾರ ಪ್ರಾಚಾರ್ಯ ಹಾಗೂ ಕಾಲೇಜಿಗೆ ಸಂಬಂಧಪಡದ ವ್ಯಕ್ತಿ ಸೇರಿ ಅಕ್ರಮ ನಡೆಸಿದ್ದಾಗಿ ಆರೋಪಿಸಲಾಗಿದೆ. ಅಕ್ರಮದ ವಿಡಿಯೋ ಹರಿದಾಡುತ್ತಿದ್ದಂತೆ ಕೆಲ ಯುವಕರು ಸಿಬ್ಬಂದಿಯೊಬ್ಬರಿಗೆ ಪ್ರಾಣ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ದೂರು ನೀಡುವ ಪ್ರಯತ್ನ ನಡೆದಿದೆ. ಪರೀಕ್ಷೆ ವೇಳೆ ಸಿಸಿ ಕ್ಯಾಮರಾ ಇಲ್ಲದಿರುವುದು ಸ್ಪಷ್ಟವಾಗಿದೆ. ಜಾಗೃತ ದಳದ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದಾರಾ? ಪರೀಕ್ಷಾ ಶಿಷ್ಟಾಚಾರ ಪಾಲಿಸಿದ್ದಾರಾ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ವರದಿ ನೀಡಲು ಸೂಚನೆ:ಸಾಮೂಹಿಕ ನಕಲು ವಿಚಾರ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಮೆಟ್ಟಿಲೇರಿದ್ದು, ಪ್ರಕರಣ ಸಂಬಂಧ ಕಾರಣ ಕೇಳಿ ಮಾಯಕೊಂಡ ಪರೀಕ್ಷಾ ಕೇಂದ್ರದ ಸ್ಥಳೀಯ ಪರೀಕ್ಷಾ ಮಂಡಳಿ ಅಧ್ಯಕ್ಷ ಎನ್. ಸುರೇಶಕುಮಾರ್​ಗೆ ಆ.6ರಂದು ನೋಟಿಸ್ ಜಾರಿಯಾಗಿದೆ. ಮೂರು ದಿನದಲ್ಲಿ ಬೆಂಗಳೂರು ವಿಭಾಗೀಯ ಕಚೇರಿ ಜಂಟಿ ನಿರ್ದೇಶಕರಿಗೆ ಉತ್ತರ ನೀಡದಿದ್ದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ. ಇದಲ್ಲದೆ, ಜಂಟಿ ನಿರ್ದೇಶಕರು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಎರಡು ದಿನಗಳಲ್ಲಿ ವಾಸ್ತವಿಕ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.
ಬಿಗ್​ಬಾಸ್​​​ ಒಟಿಟಿಗೆ ಚಾಲನೆ; ಆರ್ಯವರ್ಧನ್​, ರೂಪೇಶ್ ಶೆಟ್ಟಿ​, ಸೋನು ಗೌಡ ಪ್ರವೇಶ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
