ಎನ್.ವೆಂಕಟೇಶ್ಚಿಕ್ಕಬಳ್ಳಾಪುರ: ಕೈ ಕಾಲು ಮುರಿಸಿ, ಹಾಕುತ್ತೇನೆ ಎಂಬುದಾಗಿ ಮಾಜಿ ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಹೇಳಿದ್ದಾರೆ ಎನ್ನುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ನಡುವೆ ಈ ಮಾತನ್ನು ಶಾಸಕ ಪ್ರದೀಪ್ ಈಶ್ವರ್‌ಗೆ ಹೇಳಿದ್ದು ಎಂಬುದಾಗಿ ತಿಳಿಸಲಾಗುತ್ತಿದೆ.ಅಸಲಿಗೆ ಇದು ಸತ್ಯವೇ? ಮಾಜಿ ಸಚಿವ ಡಾ ಕೆ.ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ಇಲ್ಲವೇ ಪ್ರದೀಪ್ ಬೆಂಬಲಿಗನ ನಡುವಿನ ಸಂಭಾಷಣೆಯೇ? ಹೋಗಲಿ ಇಬ್ಬರಿಗೂ ಸಂಬಂಧಿಸಿದ್ದಾಗಿದೆಯೇ?. ಇಲ್ಲ, ನಿಜವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯನ್ನು ತಿರುಚಿ, ವೈರಲ್ ಮಾಡಲಾಗುತ್ತಿದೆ.
*ಅಸಲಿಗೆ ನಡೆದಿದ್ದೇನು?ಪ್ರಸ್ತುತ ವೈರಲ್ ಆಗಿರುವ ಆಡಿಯೋ ಕಳೆದ 2019 ರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಸಂದರ್ಭದಲ್ಲಿ ಇಲ್ಲಿನ ಹಾರೋಬಂಡೆ ಗ್ರಾ.ಪಂ.ಅಧ್ಯಕ್ಷರ ಸಂಬಂಧಿ ಮತ್ತು ಸುಧಾಕರ್ ನಡುವಿನ ಸಂಭಾಷಣೆ. ಇದರಲ್ಲಿ ನಿಮ್ಮಣ್ಣ, ನನ್ನ ಬಗ್ಗೆ ಏನಂತಾ ತಿಳಿದುಕೊಂಡಿದ್ದಾನೆ. ಕೈ ಕಾಲು ಮುರಿಸುತ್ತೇನೆ ಅಂತಾ ಹೇಳು, ನನ್ನ ವಿರುದ್ಧಾನೇ ಕೆಲಸ ಮಾಡುತ್ತಿದ್ದಾನೆ. ಅಲ್ಲ, ನಿಮಗೆ ಎಷ್ಟೆಲ್ಲ ಕೆಲಸ ಮಾಡಿಕೊಟ್ಟಿದ್ದೇನೆ. ಕೃತಜ್ಞತೆ ಎನ್ನುವುದೇ ನಿಮಗೆ ಇಲ್ಲ ಎಂದು ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಇಲ್ಲ ಅಣ್ಣ, ನಿಮ್ಮ ಪರವಾಗಿ ನಾನು ಕೆಲಸ ಮಾಡುತ್ತೇನೆ. ಅವರಿಗೆ ಹೇಳುತ್ತೇನೆ. ನಿಮ್ಮ ಜತೇನೇ ಇರುತ್ತೇನೆ? ಎಂದು ಅಧ್ಯಕ್ಷರ ಸಂಬಂಧಿ ಹೇಳುತ್ತಾನೆ. ಹೀಗಿರುವ ಆಡಿಯೋ ಈ ಹಿಂದೆ 2019 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
*ಹೇಗೆ ತಿರುಚಿ ಹೇಳಲಾಗುತ್ತಿದೆ?2023 ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರದೀಪ್ ಈಶ್ವರ್ ಮತ್ತು ಬಿಜೆಪಿ ಅಭ್ಯಥಿಯಾಗಿ ಡಾ ಕೆ.ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಇದೇ ವೇಳೆ ಪರಸ್ಪರ ಟೀಕೆ, ಪ್ರತಿ ಟೀಕೆಯ ಮಾತುಗಳು ಕೇಳಿ ಬಂದಿದ್ದವು. ಕೊನೆಗೆ ಪ್ರದೀಪ್ ಚುನಾವಣೆಯಲ್ಲಿ ಗೆದ್ದು ಬಂದರು. ಇದರ ನಡುವೆ 2019 ರಲ್ಲಿ ಸುಧಾಕರ್ ಮಾತನಾಡಿದ್ದಾರೆ ಎನ್ನಲಾದ ಹಳೇ ಆಡಿಯೋವನ್ನು 2023 ರ ಚುನಾವಣೆಗೆ ಥಳಕು ಹಾಕಲಾಗುತ್ತಿದೆ. ಪ್ರದೀಪ್‌ಗೆ ಬೆದರಿಕೆಯನ್ನೊಡ್ಡಿ, ತೆಗಳಿದ್ದಾರೆ ಎಂಬುದಾಗಿ ಬಿಂಬಿಸಲಾಗುತ್ತಿದೆ. 2019 ರ ಸಂದರ್ಭದಲ್ಲಿ ಪ್ರದೀಪ್ ರಾಜಕೀಯಕ್ಕೆ ಬಂದಿರಲಿಲ್ಲ. ಅಲ್ಲದೇ ಈ ಇಬ್ಬರ ನಡುವೆಯೂ ಸಂಬಂಧ ಚೆನ್ನಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + eight =
Remember me
