ಧಾರವಾಡ:ಶಿಕ್ಷಣ ಸಚಿವ ಬಿ.ಸಿ. ನಾಗೇಶ್​ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು 10 ನಿಮಿಷ ಧ್ಯಾನ ಮಾಡಬೇಕಿರುವುದು ಕಡ್ಡಾಯ ಎಂಬ ಸುತ್ತೋಲೆ ಹೊರಡಿಸಿದ ನಂತರದ ಬೆಳವಣಿಗೆಗಳು, ದಿನಕ್ಕೊಂದು ತಿರುವು ಪಡೆಯತೊಡಗಿವೆ.
ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್​​​ಗಳ ಮೂಲಕ ಧ್ಯಾನಕ್ಕಿಂತ ಶಿಕ್ಷಣ ಮುಖ್ಯ ಎಂದು ಸಚಿವ ಬಿ.ಸಿ. ನಾಗೇಶ್​​​​ರ ನಡೆಯನ್ನು ಎರಡು ದಿನಗಳ ಹಿಂದೆ ಟೀಕಿಸಿದ್ದರು. ಹೀಗೆ ಧ್ಯಾನ ಕುರಿತ ಪರ-ವಿರೋಧದ ಚರ್ಚೆಗಳ ನಡುವೆ, ಇದೀಗ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್​​​ಗೆ ತಿರುಗೇಟು ಕೊಟ್ಟಿದ್ದಾರೆ.
ಕಾಂಗ್ರೆಸ್​​​ನವರು ದುಡ್ಡು, ಅಧಿಕಾರ ಮತ್ತು ಭ್ರಷ್ಟಾಚಾರದ ಧ್ಯಾನ ಮಾಡುತ್ತಾರೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಸೋನಿಯಾ, ರಾಹುಲ್ ಗಾಂಧಿ, ಇಟಲಿ ಧ್ಯಾನ ಮಾತ್ರ ಮಾಡುತ್ತಾರೆ ಕಾಂಗ್ರೆಸ್​​​ನವರು ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಭಗವದ್ಗೀತೆಯನ್ನೂ ವಿರೋಧಿಸುತ್ತದೆ, ತ್ರಿವಳಿ ತಲಾಖ್ ಆದೇಶ ಸಹ ತಿರುವು-ಮುರುವು ಮಾಡಿದ್ದರು, ಯೋಗಕ್ಕೂ ಕಾಂಗ್ರೆಸ್​​ ವಿರೋಧವಿತ್ತು, ಮಕ್ಕಳಲ್ಲಿ ಏಕಾಗ್ರತೆ ಬೆಳೆಸಲು ಮಾತ್ರ ಸರ್ಕಾರ ಈ ಸುತ್ತೋಲೆ ಹೊರಡಿಸಿದೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಧ್ಯಾನದಿಂದ ಮಕ್ಕಳು ಕುಗ್ಗಿ ಹೋಗುತ್ತಾರೆ ಎನ್ನುವುದೇ ಹಾಸ್ಯಾಸ್ಪದ; ಸಿದ್ದು ಟ್ವೀಟ್​​ಗೆ ಶಿಕ್ಷಣ ಸಚಿವರ ತಿರುಗೇಟು

ಶಾಲಾ ಮಕ್ಕಳಿಗಿಂತ ಹೆಚ್ಚಾಗಿ ಶಿಕ್ಷಣ ಸಚಿವರಿಗೆ ಯೋಗ, ಧ್ಯಾನದ ಅವಶ್ಯಕತೆಯಿದೆ ಎಂದ ಸಿದ್ದರಾಮಯ್ಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + seventeen =
Remember me
