ಹುಬ್ಬಳ್ಳಿ:ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಭಾನುವಾರದಂದು ಕಾಂಗ್ರೆಸ್​ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್​ನಲ್ಲಿ ಇಬ್ಬರು ನಾಯಕರು ಒಂದು ರೂಂ ಒಳಗೆ ಹೋದರೆ ಒಬ್ಬ ಹೊಸ ಲೀಡರ್​ ಹುಟ್ಟುತ್ತಾನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ನಿನ್ನನ್ನೇ ಪ್ರೀತಿಸೋದು ಅಂದೋಳು ಈಗ ಬೇರೆ ಮದ್ವೆಯಾಗಹೊರಟಿದ್ದಾಳೆ- ಸಾಯೋಣ ಎನಿಸ್ತಿದೆ…
ಈ ಹಿಂದೆ ಒಂದು ಬಾರಿ ಪ್ರಿಯಾಂಕಾ ಗಾಂಧಿಗೆ ಗಂಡು ಮಗು ಹುಟ್ಟಿದಾಗ ಲೀಡರ್ ಹುಟ್ಟಿದ್ದಾನೆಂದು ಹೇಳಿ ಕಾಂಗ್ರೆಸ್​ನವರು ಸ್ವೀಟ್ ಹಂಚಿದ್ದರು. ಅವರ ಪಕ್ಷದಲ್ಲಿ ಇಬ್ಬರು ರೂಂ ಒಳಗೆ ಹೋದರೆ ಒಬ್ಬ ಲೀಡರ್​ ಹುಟ್ಟುತ್ತಾನೆ ಆದರೆ ನಮ್ಮ ಬಿಜೆಪಿಯವರು ರಸ್ತೆಯಲ್ಲಿ ಹೊಡೆದಾಡಿ ಲೀಡರ್ ಆಗ್ತಾರೆ ಎಂದು ಅವರು ಹೇಳಿದ್ದಾರೆ.
ರಾಹುಲ್​ ಗಾಂಧಿಯವರು ಲಾಕ್​ಡೌನ್​ ಪ್ಲಾನ್​ ಇಲ್ಲದೆಯೇ ಮಾಡಿದ್ದೆಂದು ಆರೋಪಿಸುತ್ತಾರೆ. ಆದರೆ ಅವರಿಗೇ ಜೀವನದಲ್ಲಿ ಒಂದು ಪ್ಲಾನ್​ ಇಲ್ಲ. ಈ ರೀತಿಯ ಟ್ವೀಟ್​ ಮಾಡಿ, ದೇಶವನ್ನೇ ಬಿಟ್ಟು ಹೋಗುತ್ತಾರೆ. ಅದಕ್ಕೆ ಅವರು ಪೂರ್ವಜನರನ್ನು ಭೇಟಿ ಮಾಡಲು ಹೋಗಿದ್ದೆಂದು ಎಂದು ಹೆಸರಿಡಲಾಗುತ್ತದೆ ಎಂದು ಅವರು ಟೀಕಿಸಿದ್ದಾರೆ.
ಇದನ್ನೂ ಓದಿ:ನಾನು ಜೀನ್ಸ್​ ಧರಿಸಿದ್ರೆ 4ನೇ ಮದ್ವೆಯಾಗ್ತೇನೆ ಎಂದು ಗಂಡನಿಂದ ಬೆದರಿಕೆ- ಪೊಲೀಸ್​ ಕಂಪ್ಲೇಂಟ್​
ಗ್ರಾಮ ಪಂಚಾಯತಿ ಸದಸ್ಯರು ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕು. ನೀವು ಕೆಲಸ‌ ಮಾಡಿದ್ರೆ ಒಬ್ಬ ಗ್ರಾಮ ಪಂಚಾಯತಿ ಸದಸ್ಯನೂ ದೇಶದ ಪ್ರಧಾನಿಯಾಗಬಹುದು. ಇದು ನಮ್ಮ ಪಕ್ಷದಲ್ಲಿ ಮಾತ್ರ ಸಾಧ್ಯ ಎಂದು ಅವರು ಹೇಳಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)
ಮದ್ವೆಯಾಗದೇ ಪಾಪು ಕೊಟ್ಟ… ಹೆಂಡ್ತಿ ಜತೆ ಅತ್ತೆಯನ್ನೂ ಕೊಲೆ ಮಾಡ್ದ- ದೇವನಹಳ್ಳಿಯಲ್ಲಿ ಭೀಕರ ಘಟನೆ

ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದ ಕಾರು: ಓರ್ವ ಮಹಿಳೆ ಸಾವು, ಮೂವರ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
