
ಬೆಂಗಳೂರು:ಪೆನ್ ಡ್ರೈವ್ ಪ್ರಕರಣದಲ್ಲಿ ಪ್ರಮುಖ ಕೊಂಡಿಯಾಗಿರುವ ಡ್ರೈವರ್ ಕಾರ್ತಿಕ್‌ನನ್ನು ಮಲೇಶಿಯಾಕ್ಕೆ ಕಳುಹಿಸಿದ್ದು ಏತಕ್ಕೆ? ಅಲ್ಲಿಗೆ ಹೋಗಲು ಸಹಾಯ ಮಾಡಿದವರು ಯಾರು? ಎನ್ನುವ ಬಗ್ಗೆ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣದ ಹಿಂದೆ ಯಾರಿದ್ದಾರೆ? ಏನೇನು ಮಾಡುತ್ತಿದ್ದಾರೆ? ಎನ್ನುವುದು ಗೊತ್ತಿದೆ. ಈ ಸಮಯದಲ್ಲಿ ಡ್ರೈವರ್‌ನನ್ನು ಮಲೆಶಿಯಾಗೆ ಕಳುಹಿಸಲು ಪ್ಲಾನ್ ಮಾಡಿದವರು ಯಾರು? ಎಲ್ಲವೂ ಬಹಿರಂಗಗೊಳಿಸಲಿ ಎಂದು ಆಗ್ರಹಿಸಿದರು.ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ನಾನುಈ ಮೊದಲೇ ಹೇಳಿದ್ದೇನೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಈ ನೆಪದಲ್ಲಿ ಪೆನ್‌ಡ್ರೈವ್ ಮಾಡಿ ಹಂಚುವ ಮೂಲಕ ಹೆಣ್ಣುಮಕ್ಕಳ ಮಾನ ಹಾನಿ ಮಾಡಿದವರು ಯಾರು ಎನ್ನುವುದು ಬೆಳಕಿಗೆ ಬರಬೇಕು. ಈ ಬಗ್ಗೆಯೂ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 + 1 =
Remember me
