ಬೆಂಗಳೂರು:ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪಾಸ್​​ಪೋರ್ಟ್​​ ರದ್ದು ಮಾಡಿದರೆ ಆತ ಅನಿವಾರ್ಯವಾಗಿ ದೇಶಕ್ಕೆ ಮರಳಬೇಕಾಗುತ್ತದೆ, ಇದರಿಂದ ಕೇಂದ್ರ ಸರ್ಕಾರ ಅವರ ಪಾಸ್​ಪೋರ್ಟ್​ ರದ್ದುಪಡಿಸಲು ಮುಂದಾಗುತ್ತಿಲ್ಲ ಎಂದು ಕೇಂದ್ರದ ವಿರುದ್ಧ ಕಾಂಗ್ರೆಸ್​ ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ:IPL 2024: ಸಿಎಸ್​ಕೆ ವಿರುದ್ಧ ಗೆದ್ದರೂ ಶುಭಮನ್​ ಗಿಲ್​ಗೆ 24 ಲಕ್ಷ ರೂ. ದಂಡ, ಕಾರಣ ಹೀಗಿದೆ..!
ರಾಜ್ಯ ಸರ್ಕಾರ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿ, ಇಂಟರ್ ಪೋಲ್ ಸಹಕಾರ ಕೋರಿತ್ತು, ಆದರೆ ಇದುವರೆಗೂ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಪ್ರಜ್ವಲ್ ರೇವಣ್ಣನನ್ನು ಪ್ರಧಾನಿ ಮೋದಿಯೇ ರಕ್ಷಿಸುತ್ತಿದ್ದಾರೆ ಎನ್ನುವುದಕ್ಕೆ ಬೇರೆ ಪುರಾವೆ ಬೇಕೇ ಎಂದು ಕೇಂದ್ರ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಮೋದಿಗೆ ಪ್ರಜ್ವಲ್ ರೇವಣ್ಣ “ಕೋಂಪ್ಲೇನ್ ಬಾಯ್” ಏಕೆಂದರೆ ಪ್ರಜ್ವಲ್ ರೇವಣ್ಣನನ್ನು ಗೆಲ್ಲಿಸಿದರೆ ಮೋದಿ ಶಕ್ತಿ ಬರುತ್ತದೆಯಂತೆ! ಇಂತಹ ಕೋಂಪ್ಲೇನ್ ಬಾಯ್‌ಗೆ ಮೋದಿ ಕಷ್ಟ ಕೊಡಬಲ್ಲರೆ ಎಂದು ಬಿಜೆಪಿಗೆ ಕಾಂಗ್ರೆಸ್​ ತಿರುಗೇಟು ನೀಡಿದೆ.
ಶುಕ್ರವಾರಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅರವನ್ನು ಒತ್ತಾಯಿಸಿದ್ದರು. ಪ್ರಜ್ವಲ್​ ಅವರ ಪಾಸ್ ಪೋರ್ಟ್ ರದ್ದು ಪಡಿಸುವಂತ ಪ್ರಧಾನಿಗೆ ಪತ್ರ ಬರೆಯಲಾಗಿದೆ. ಪಾಸ್ ಪೋರ್ಟ್ ರದ್ದು ಮಾಡಿದ ಮೇಲೆ ಆತ ವಿದೇಶದಲ್ಲಿರಲು ಸಾಧ್ಯವಿಲ್ಲ. ಮೊದಲು ಮೋದಿ ಪಾಸ್ ಪೋರ್ಟ್ ಕ್ಯಾನ್ಸರ್ ಮಾಡಲಿ. ನಂತರ ನಂತರ ತನಿಖಾ ಸಂಸ್ಥೆ ಪ್ರಜ್ವಲ್‌ನನ್ನು ಭಾರತಕ್ಕೆ ಕರೆತರಲಿದೆ ಎಂದು ಹೇಳಿದ್ದರು.
‘ಫ್ಲೈಯಿಂಗ್​ ಎಲೆಕ್ಟ್ರಿಕಲ್​ ಟ್ಯಾಕ್ಸಿ’ ಅಭಿವೃದ್ಧಿಪಡಿಸಿದ ಮದ್ರಾಸ್ ಐಐಟಿ ಸಾಧನೆಗೆ ಆನಂದ್ ಮಹೀಂದ್ರಾ ಮೆಚ್ಚುಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 10 =
Remember me
