ಬೆಂಗಳೂರು:ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಬೇಸತ್ತು ದೇವೇಗೌಡರು ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು!ಹೌದು, ಇದನ್ನು ಖುದ್ದು ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯಾರೋ ಮಾಡಿದ ತಪ್ಪಿಗೆ ನೀವೇಕೆ ರಾಜೀನಾಮೆ ಕೊಡುತ್ತೀರಿ ಎಂದು ನಾನೇ ತಡೆ ಹಾಕಿದೆ. ಪ್ರಜ್ವಲ್‌ನನ್ನು ರಕ್ಷಣೆ ಮಾಡುವ ಯಾವ ಉದ್ದೇಶವೂ ನನ್ನಲ್ಲಿಲ್ಲ. ತಂದೆ-ತಾಯಿ ಈ ಪ್ರಕರಣದಿಂದ ನೋವಿನಲ್ಲಿದ್ದಾರೆ. ಅವರಿಗೆ ಧೈರ್ಯ ಸ್ಥೈರ್ಯ ತುಂಬಲು ಪದ್ಮನಾಭ ನಗರಕ್ಕೆ ಹೋಗುತ್ತಿದ್ದೇನೆಯೇ ಹೊರತು ಪ್ರಜ್ವಲ್ ರಕ್ಷಿಸುವ ಕುರಿತು ಚರ್ಚಿಸಲು ಅಲ್ಲ. ಪ್ರಜ್ವಲ್ ವಾಪಸ್ ಕರೆಸಲು ನಾನೂ ಪ್ರಯತ್ನ ಪಡುತ್ತಿದ್ದೇನೆ ಎಂದರು.
ಎಸ್‌ಐಟಿ ಎದುರು ಹಾಜರಾಗಲು ಪ್ರಜ್ವಲ್ ಪರ ವಕೀಲರು ಒಂದು ವಾರ ಸಮಯ ಕೇಳಿದ್ದರು. ಎಸ್‌ಐಟಿ ಅವಕಾಶ ಕೊಬೇಕಿತ್ತು ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ 48 ಗಂಟೆ ಒಳಗೆ ಎಸ್‌ಐಟಿ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಬೇಕು. ಇದೊಂದು ಅಸಹ್ಯ ಪ್ರಕರಣ. ತಪ್ಪು ಮಾಡಿದ್ದು ಯಾರೇ ಆಗಲಿ ಶಿಕ್ಷೆ ಅನುಭವಿಸಬೇಕು. ಈ ಪ್ರಕರಣದಿಂದ ದೇವೇಗೌಡರು ತೀವ್ರ ನೋವು ಅನುಭವಿಸುತ್ತಿದ್ದಾರೆ. ಪ್ರಜ್ವಲ್ ವಾಪಸ್ಸಾಗಿ ತನಿಖೆಗೆ ಸಹಕಾರ ನೀಡಲು ಮನವಿ ಮಾಡುವಂತೆ ನಾನು ದೇವೇಗೌಡರ ಬಳಿಯೂ ಕೇಳಿಕೊಂಡಿದ್ದೇನೆ.
ರೆಡ್ ಕಾರ್ನರ್ ನೋಟಿಸ್ ಜಾರಿಯಾಗುವವರೆಗೆ ಕಾಯಬಾರದು. ಕಳ್ಳ-ಪೊಲೀಸ್ ಆಟ ಎಷ್ಟು ದಿನ ನಡೆಯುತ್ತದೆ. ತಕ್ಷಣ ವಿದೇಶದಿಂದ ವಾಪಸ್ ಆಗಿ ಎಸ್ ಐಟಿ ಎದುರು ಹೋಗಲಿ. ಈ ಬಗ್ಗೆ ರೇವಣ್ಣ ಅವರ ಜತೆಯೂ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.
ಯಾರೋ ಮಾಡಿದ ತಪ್ಪಿಗೆ ಇಡೀ ಕುಟುಂಬವನ್ನು ಸರ್ವನಾಶ ಮಾಡುವುದು ಎಷ್ಟು ಸರಿ? ಈ ವಿಷಯ ಮುಂಚಿತವಾಗಿಯೇ ತಮಗೆ ಗೊತ್ತಿದ್ದರೆ ವಿದೇಶಕ್ಕೆ ಹೋಗಲಿ ಬಿಡುತ್ತಿರಲಿಲ್ಲ. ವಕೀಲರ ಸಲಹೆ ಮೇರೆಗೆ ಏನೇನೋ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಬೇಸರ ಹೊರ ಹಾಕಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − one =
Remember me
